ನಟ ಪುನೀತ್ ರಾಜ್‍ಕುಮಾರ್ ನಾಮಫಲಕ ಕೆಡವಿದ ಕಿಡಿಗೇಡಿಗಳು: ಗ್ರಾಮಸ್ಥರ ಆಕ್ರೋಶ
ರಾಜ್ಯಾದ್ಯಂತ ಎಂಇಎಸ್ ಪುಂಡಾಟ ವಿರೋಧಿಸಿ ಹೋರಾಟಗಳು ನಡೆಯುತ್ತಿರುವಾಗಲೇ ಕೆಜಿಎಫ್ ನಲ್ಲೂ ಅಹಿತಕರ ಘಟನೆಯೊಂದು ನಡೆದಿದೆ.
ಕೋಲಾರ: ರಾಜ್ಯಾದ್ಯಂತ ಎಂಇಎಸ್(MES) ಪುಂಡಾಟ ವಿರೋಧಿಸಿ ಹೋರಾಟಗಳು ನಡೆಯುತ್ತಿರುವಾಗಲೇ ಕೆಜಿಎಫ್ ನಲ್ಲೂ ಅಹಿತಕರ ಘಟನೆಯೊಂದು ನಡೆದಿದೆ. ಕೋಲಾರದ ಗ್ರಾಮವೊಂದರಲ್ಲಿ ಕಿಡಿಗೇಡಿಗಳು ದಿ. ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Puneeth Rajkumar) ಹೆಸರಿನ ನಾಮಫಲಕ ಕೆಡವಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ಗ್ರಾಮದಲ್ಲಿ ‘ಪುನೀತ್ ನಗರ’(Puneeth Nagar) ಎಂಬ ಹೆಸರಿಟ್ಟಿದ್ದ ಬಡಾವಣೆಯ ನಾಮಫಲಕವನ್ನು ಕಿಡಿಗೇಡಿಗಳು ಜೆಸಿಬಿ ಬಳಸಿ ಧ್ವಂಸ ಮಾಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ಕಡಿಗೇಡಿಗಳ ಕೃತ್ಯಕ್ಕೆ ಕಿಡಿಕಾರಿರುವ ಗ್ರಾಮಸ್ಥರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದ್ವೇಷದ ಬೆಂಕಿ ಆರಲಿ.. ಕನ್ನಡದ ಬಾವುಟ ಹಾರಲಿ: ನಟಿ ಹರಿಪ್ರಿಯಾ
ಗ್ರಾಮಸ್ಥರು ಪಂಚಾಯಿತಿಯಿಂದ ಅನುಮತಿ ಪಡೆದುಕೊಂಡೇ ಬಡಾವಣೆಗೆ ‘ಪುನೀತ್’ ಹೆಸರು ನಾಮಕರಣ(Puneet Rajkumar's Namespace) ಮಾಡಿದ್ದರು. ಆದರೆ ರಾತ್ರೋ ರಾತ್ರಿ ಕೆಲ ಸ್ಥಳೀಯರಿಂದಲೇ ನಾಮಫಲಕ ತೆರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ನಾಮಫಲಕವನ್ನು ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವೆಸಗಿರುವ ಕಿಡಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Panama Papers Leak Case: ಖ್ಯಾತ ಬಾಲಿವುಡ್ ನಟಿ Aishwarya Rai Bachchan ಗೆ ED ಸಮನ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.