Sanchari Vijay Passes Away : ಸಂಚಾರ ಮುಗಿಸಿದ ಸಂಚಾರಿ ವಿಜಯ್!
ಬ್ರೈನ್ ಸ್ಟ್ರೋಕ್ ಆಗಿತ್ತು. ಹೀಗಾಗಿ ಅವರು ಚಿಕಿತ್ಸೆಗೆ ಸ್ಪಂದಸಲಿಲ್ಲ ಎಂಬುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಬೆಂಗಳೂರು : ಬೈಕ್ ನಲ್ಲಿ ಸ್ಕಿಡ್ ಆಗಿ ಬಿದ್ದ ಅಪಘಾತದಲ್ಲಿ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟುಗೊಂಡಿದ್ದ ನಟ ಸಂಚಾರಿ ವಿಜಯ್ ಸಾವನ್ನಪ್ಪಿದ್ದಾರೆ.
ಈಗ ಅಪೋಲೋ ಆಸ್ಪತ್ರೆ(Apollo Hospital)ಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟುಗೊಂಡಿದ್ದ ಕಾರಣ ಬ್ರೈನ್ ಸ್ಟ್ರೋಕ್ ಆಗಿತ್ತು. ಹೀಗಾಗಿ ಅವರು ಚಿಕಿತ್ಸೆಗೆ ಸ್ಪಂದಸಲಿಲ್ಲ ಎಂಬುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Sanchari Vijay Health Condition : 'ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ'
ಸಂಚಾರಿ ವಿಜಯ್(Sanchari Vijay) ಅವರ ದೇಹವನ್ನ ದಾನ ಮಾಡಲಾಗಿದೆ ಎಂದು ಅವರ ಸಹೋದರ ತಿಳಿಸಿದ್ದಾರೆ.
ಇದನ್ನೂ ಓದಿ : NYIFF 2021: ಕನ್ನಡ ಸಿನಿಮಾಗೆ ಒಲಿದು ಬಂದ ಅಂತರಾಷ್ಟ್ರೀಯ ಪ್ರಶಸ್ತಿ
ಅಂದಹಾಗೆ ಜೂನ್.12ರ ರಾತ್ರಿ ಜೆಪಿ ನಗರದಲ್ಲಿ ಸಂಚಾರಿ ವಿಜಯ್ ಅವರು ಸ್ನೇಹಿತ ನವೀನ್ ಜೊತೆಗೆ ಮನೆಗೆ ಬೈಕ್(Bike) ನಲ್ಲಿ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು, ಅಪಘಾತಕ್ಕೆ ಈಡಾಗಿದ್ದರು. ಇಂತಹ ಸಂದರ್ಭದಲ್ಲಿ ಅವರಿಗೆ ತಲೆಯ ಎಡಭಾಗಕ್ಕೆ ಪೆಟ್ಟು ಬಿದ್ದು, ರಕ್ತಸ್ರಾವ ಕೂಡ ಆಗಿತ್ತು. ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಸರಿ ಪಡಿಸಲಾಗಿತ್ತು. ಅಲ್ಲದೇ ತೊಡೆಯ ಮೂಳೆ ಕೂಡ ಮುರಿದಿತ್ತು. ಈಗ ಅಪೋಲೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Disha Patani Birthday: 'ಮುದಿ ಹಿರೋಗಳ ಜೊತೆ ಭಯಂಕರ ಕಾಣಿಸುತ್ತಿ, ಕೇವಲ #Tiger ಜೊತೆಗೆ ನಟಿಸು'
ನಟ ಸಂಚಾರಿ ವಿಜಯ್ ಸಾವಿಗೆ ಸಿನಿಮಾ ನಟ ನಟಿಯರು ಮತ್ತು ರಾಜಕೀಯ ನಾಯಕರು ಸಂತಾಪ(Condolences) ಸೂಚಿಸಿದ್ದಾರೆ.
ರಿಲೀಸ್ ಆಗುತ್ತಿದ್ದಂತೆ ಸದ್ದು ಮಾಡುತ್ತಿದೆ ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ Nyay : The Justice ಟ್ರೇಲರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.