ರಿಲೀಸ್ ಆಗುತ್ತಿದ್ದಂತೆ ಸದ್ದು ಮಾಡುತ್ತಿದೆ ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ Nyay : The Justice ಟ್ರೇಲರ್

Nyay : The Justice  : ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದೆ ಎನ್ನಲಾಗುವ Nyay: The Justice  ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸುಶಾಂತ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

Written by - Ranjitha R K | Last Updated : Jun 13, 2021, 09:49 AM IST
  • Nyay: The Justice ಚಿತ್ರದ ಟ್ರೈಲರ್ ಬಿಡುಗಡೆ
  • ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ ಟ್ರೇಲರ್
  • ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದ ಸುಶಾಂತ್ ಕುಟುಂಬ
ರಿಲೀಸ್ ಆಗುತ್ತಿದ್ದಂತೆ ಸದ್ದು ಮಾಡುತ್ತಿದೆ ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ Nyay : The Justice ಟ್ರೇಲರ್ title=
Nyay: The Justice ಚಿತ್ರದ ಟ್ರೈಲರ್ ಬಿಡುಗಡೆ (Photo zee news)

ನವದೆಹಲಿ : ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಇಹಲೋಕ ತ್ಯಜಿಸಿ ಒಂದು ವರ್ಷವಾಗುತ್ತಿದೆ. ಆದರೆ ಇದುವರೆಗೂ ಅವರ ಸಾವಿನ ರಹಸ್ಯ ಬಹಿರಂಗಗೊಂಡಿಲ್ಲ. ಸಿಬಿಐ (CBI ) ತನಿಖೆ ಮುಂದುವರೆದಿದೆ. ಎನ್‌ಸಿಬಿ (NCB ) ಕೂಡ ಈ ಪ್ರಕರಣದ ಬಗ್ಗೆ ನಿರಂತರವಾಗಿ ವಿಚಾರಣೆ ನಡೆಸುತ್ತಲೇ ಇದೆ. ಈ ಮಧ್ಯೆ, ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದೆ ಎನ್ನಲಾಗುವ Nyay: The Justice  ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸುಶಾಂತ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಚಿತ್ರ ನಿಷೇಧಕ್ಕೆ ಸುಶಾಂತ್ ಕುಟುಂಬದ ಒತ್ತಾಯ : 
ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಚಿತ್ರ ಬಿಡುಗಡಗೆ ಸುಶಾಂತ್ (Sushant Singh Rajput) ಕುಟುಂಬ ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಜೂನ್ 10 ರಂದು ದೆಹಲಿ ಹೈಕೋರ್ಟ್‌ನ (Delhi high court) ನ್ಯಾಯಮೂರ್ತಿ ಸಂಜೀವ್ ನರುಲಾ ಕುಟುಂಬದ ಈ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ಪ್ರಕಟಿಸಿದ್ದರು. ಇದಾದ ನಂತರ ಚಿತ್ರ ತಂಡ Nyay: The Justice  ಸಿನೆಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸುಶಾಂತ್ ಅಭಿಮಾನಿಗಳು ಸೋಶಿಯಲ್ ಮಿಡಿಯಾಗಳಲ್ಲಿ ಚಿತ್ರದ ಟ್ರೇಲರ್ ಅನ್ನು ಶೇರ್ ಮಾಡುತ್ತಿದ್ದಾರೆ. ಟ್ರೇಲರ್ ಗೆ ಉತ್ತಮ ಸ್ಪಂದನೆಯೂ ದೊರೆತಿದೆ. 

ಇದನ್ನೂ ಓದಿ : The Kapil Sharma show ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆಯೇ ಸುನಿಲ್ ಗ್ರೋವರ್?

 

ಟ್ರೈಲರ್ ನಲ್ಲೇನಿದೆ ? :
ಈ ಟ್ರೈಲರ್ ಟಿವಿ ನ್ಯೂಸ್ ನೊಂದಿಗೆ ಪ್ರಾರಂಭವಾಗುತ್ತದೆ.  ಇದರಲ್ಲಿ ಮಹೇಂದ್ರ ಸಿಂಗ್ ಎಂಬ ಚಲನಚಿತ್ರ ನಟ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಇಲ್ಲಿ ತೋರಿಸಿರುವ ದೃಶ್ಯವು ಸುಶಾಂತ್  ಮರಣದ ನಂತರದ ಕಂಡು ಬಂದ ದೃಶ್ಯವನ್ನು ಹೋಲುತ್ತದೆ.  ಇದರ ನಂತರ ನಾಯಕನ ಜೀವನದ ಕೆಲವು ದೃಶ್ಯಗಳನ್ನು ತೋರಿಸಲಾಗುತ್ತದೆ. ಇನ್ನು ಟ್ರೇಲರ್ ನಲ್ಲಿರುವ ಡ್ರಗ್, ಔಷಧಿ ಮುಂತಾದ ಆಂಗಲ್ ಗಳು ಸುಶಾಂತ್ ಸಾವಿನ (Sushanth Death) ಸಂದರ್ಭವನ್ನೇ ನೆನಪಿಸುತ್ತದೆ. 

ಚಿತ್ರದಲ್ಲಿ ಜುಬೈರ್ ಖಾನ್ (Zubair khan )ಮತ್ತು ಶ್ರೇಯಾ ಶುಕ್ಲಾ (Shreya Shukla) ಮುಖ್ಯ ಪಾತ್ರದಲ್ಲಿದ್ದಾರೆ. ಇದಲ್ಲದೆ ಅಸ್ರಾನಿ, ಶಕ್ತಿ ಕಪೂರ್, ಅಮನ್ ವರ್ಮಾ ಮುಂತಾದ ಅನೇಕ ಹಿರಿಯ ನಟರು ಅಭಿನಯಿಸಿದ್ದಾರೆ. ಚಿತ್ರವನ್ನು ಸರ್ಲಾ ಎ ಸರೋಗಿ ಮತ್ತು ರಾಹುಲ್ ಶರ್ಮಾ ನಿರ್ಮಿಸಿದ್ದು, ಚಿತ್ರಕ್ಕೆ (Cinema) ದಿಲೀಪ್ ಗುಲಾಟಿ ನಿರ್ದೇಶನವಿದೆ. 

ಇದನ್ನೂ ಓದಿ : ನಟಿ ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿರುವ ಆ ನಟ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News