ಬೆಂಗಳೂರು : ಬೈಕ್ ನಲ್ಲಿ ಸ್ಕಿಡ್ ಆಗಿ ಬಿದ್ದ ಅಪಘಾತದಲ್ಲಿ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟುಗೊಂಡಿರುವಂತ ನಟ ಸಂಚಾರಿ ವಿಜಯ್ ಅವರಿಗೆ, ಈಗ ಬ್ರೈನ್ ಸ್ಟ್ರೋಕ್ ಆಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದಂತ ಅಪೊಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕ್(Arun Naik), ನಟ ಸಂಚಾರಿ ವಿಜಯ್ ಅವರು ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ. ರಿಕವರಿ ಚಾನ್ಸ್ ಕಡಿಮೆ ಇದೆ ಎಂಬುದಾಗಿ ಅವರ ಕುಟುಂಬಸ್ಥರಿಗೂ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : NYIFF 2021: ಕನ್ನಡ ಸಿನಿಮಾಗೆ ಒಲಿದು ಬಂದ ಅಂತರಾಷ್ಟ್ರೀಯ ಪ್ರಶಸ್ತಿ
ಅಂದಹಾಗೆ ಜೂನ್.12ರ ರಾತ್ರಿ ಜೆಪಿ ನಗರದಲ್ಲಿ ಸಂಚಾರಿ ವಿಜಯ್(Sanchari Vijay) ಅವರು ಸ್ನೇಹಿತ ನವೀನ್ ಜೊತೆಗೆ ಮನೆಗೆ ಬೈಕ್ ನಲ್ಲಿ ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು, ಅಪಘಾತಕ್ಕೆ ಈಡಾಗಿದ್ದರು. ಇಂತಹ ಸಂದರ್ಭದಲ್ಲಿ ಅವರಿಗೆ ತಲೆಯ ಎಡಭಾಗಕ್ಕೆ ಪೆಟ್ಟು ಬಿದ್ದು, ರಕ್ತಸ್ರಾವ ಕೂಡ ಆಗಿತ್ತು. ಶಸ್ತ್ರ ಚಿಕಿತ್ಸೆ ಮೂಲಕ ರಕ್ತಸ್ರಾವವನ್ನು ಸರಿ ಪಡಿಸಲಾಗಿತ್ತು. ಅಲ್ಲದೇ ತೊಡೆಯ ಮೂಳೆ ಕೂಡ ಮುರಿದಿತ್ತು. ಈಗ ಅಪೋಲೋ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : Disha Patani Birthday: 'ಮುದಿ ಹಿರೋಗಳ ಜೊತೆ ಭಯಂಕರ ಕಾಣಿಸುತ್ತಿ, ಕೇವಲ #Tiger ಜೊತೆಗೆ ನಟಿಸು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.