NYIFF 2021: ಕನ್ನಡ ಸಿನಿಮಾಗೆ ಒಲಿದು ಬಂದ ಅಂತರಾಷ್ಟ್ರೀಯ ಪ್ರಶಸ್ತಿ

ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವ 2021 ರಲ್ಲಿ ಕನ್ನಡದ ಪಿಂಕಿ ಎಲ್ಲಿ? ಎನ್ನುವ ಸಿನಿಮಾಗೆ ಉತ್ತಮ ನಟಿ ಹಾಗೂ ಚಿತ್ರಕಥೆ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ದೊರೆತಿವೆ.

Last Updated : Jun 14, 2021, 12:05 AM IST
  • ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವ 2021 ರಲ್ಲಿ ಕನ್ನಡದ ಪಿಂಕಿ ಎಲ್ಲಿ? ಎನ್ನುವ ಸಿನಿಮಾಗೆ ಉತ್ತಮ ನಟಿ ಹಾಗೂ ಚಿತ್ರಕಥೆ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ದೊರೆತಿವೆ.
 NYIFF 2021: ಕನ್ನಡ ಸಿನಿಮಾಗೆ ಒಲಿದು ಬಂದ ಅಂತರಾಷ್ಟ್ರೀಯ ಪ್ರಶಸ್ತಿ title=
Photo Courtesy: Facebook

ಬೆಂಗಳೂರು: ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವ 2021 ರಲ್ಲಿ ಕನ್ನಡದ ಪಿಂಕಿ ಎಲ್ಲಿ? ಎನ್ನುವ ಸಿನಿಮಾಗೆ ಉತ್ತಮ ನಟಿ ಹಾಗೂ ಚಿತ್ರಕಥೆ ವಿಭಾಗದಲ್ಲಿ ಎರಡು ಪ್ರಶಸ್ತಿಗಳು ದೊರೆತಿವೆ.

ಇದರ ಜೊತೆಗೆ ಈ ಸಿನಿಮಾ ಅತ್ಯುತಮ ಚಲನ ಚಿತ್ರದ ವಿಭಾಗದಲ್ಲಿಯೂ ಕೂಡ ನಾಮ ನಿರ್ದೇಶನವಾಗಿತ್ತು, ಆದರೆ ಅಂತಿಮವಾಗಿ  ಎರಡು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಚಿತ್ರ ತಂಡವು ಯಶಸ್ವಿಯಾಗಿದೆ.

ಈಗ ಚಿತ್ರಕ್ಕೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿರುವ ನಟಿ ಅಕ್ಷತಾ ಪಾಂಡವಪುರ " NYIFF 2021 ಇಂತಹ festival ಗೆ ನಮ್ಮ ಕನ್ನಡ ಚಿತ್ರ ಆಯ್ಕೆ ಆಗೋದೇ ಒಂದು ಖುಷಿ, ಇನ್ನೂ best film, best screenplay, best actress ಈ 3 ವರ್ಗದಲ್ಲಿ nominate ಆಗಿದ್ದು double ಖುಷಿ
 ಆ ಪೈಕಿ Best Screenplay & Best Actress Award ಸಿಕ್ಕಿದ್ದು ನಿಜಕ್ಕೂ ಹೆಮ್ಮೆಯ ವಿಚಾರ...
ಇದು ನನ್ನ ಮೊದಲ International award ಆಗಿದ್ದು, ಇದರ ಸಂಪೂರ್ಣ credits ಅವಕಾಶ ಕೊಟ್ಟ ನಿರ್ದೇಶಕರಿಗೆ.
Thank you sooo much Prithvi Konanur 🙏
Nomination list ನೋಡಿ ಮನಪೂರ್ವಕವಾಗಿ ಹರಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು 🙏
#NYIFF #Akshathapandavapura #prituvikonanur #pinkielli"  ಎಂದು ಅವರು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News