Actor Aarti Chabria : ಭಾರತೀಯ ಖ್ಯಾತ ನಟಿಯರಲ್ಲಿ ಆರತಿ ಛಾಬ್ರಿಯಾ ಕೂಡ ಒಬ್ಬರು. ಕಳೆದ ಕೆಲವು ವರ್ಷಗಳಿಂದ ಸಿನಿರಂಗದಿಂದ ದೂರ ಉಳಿದಿರುವ ನಟಿ ಇದೀಗ ಗಂಡು ಮಗುವಿಗೆ ಜನ್ನ ನೀಡಿದ್ದಾಗಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಇಲ್ಲೋಂದು ಶಾಕಿಂಗ್‌ ವಿಚಾರ ಅಂದ್ರೆ  9 ತಿಂಗಳ ಕಾಲ ತನ್ನ ಗರ್ಭಾವಸ್ಥೆಯ ಸುದ್ದಿಯನ್ನು ನಟಿ ಮರೆಮಾಚಿದ್ದರು.


COMMERCIAL BREAK
SCROLL TO CONTINUE READING

ಹೌದು.. ನಟಿ ಆರತಿ ಛಾಬ್ರಿಯಾ ತಾಯಿಯಾಗಿದ್ದಾರೆ. ಅವರು ಮಾರ್ಚ್ 4 ರಂದು ಗಂಡು ಮಗುವಿಗೆ ಜನ್ಮ ನೀಡಿದರು, ಮಗುವಿಗೆ ಯುವನ್ ಅಂತ ಹೆಸರಿಟ್ಟಿದ್ದಾರೆ. ಮಗನ ಜನನದ ನಂತರ ತಾಯ್ತನದ ಅನುಭವವನ್ನು ಹಂಚಿಕೊಂಡಿರುವ ನಟಿ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. 


ಇದನ್ನೂ ಓದಿ:ʼಶ್ರೀದೇವಿ ಸಾವು ಸಹಜವಲ್ಲʼ..! ಕೊನೆಗೂ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್!


ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆರತಿ, ತಮ್ಮ ತಾಯ್ತನದ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು,  41ನೇ ವಯಸ್ಸಿನಲ್ಲಿ ಹೆರಿಗೆ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಹಿಂದೆ ನನಗೆ ಗರ್ಭಪಾತವಾಗಿತ್ತು. ಅದಕ್ಕಾಗಿಯೇ ನಾನು ನಾನು ನನ್ನ ತಾಯ್ತನದ ವಿಚಾರ ಮುಚ್ಚಿಟ್ಟೆ ಅಂತ ಹೇಳಿಕೊಂಡಿದ್ದಾರೆ.


2019 ರಲ್ಲಿ ಆರತಿ ವಿಶಾರದ್ ಬಿಡಸಿ ಅವರನ್ನು ವಿವಾಹವಾದರು, ನಂತರ ಅವರು ಆಸ್ಟ್ರೇಲಿಯಾಗೆ ತೆರಳಿ ಅಲ್ಲಿಯೇ ವಾಸವಾಗಿದ್ದರು. ಕೋವಿಡ್‌ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಸಿಲುಕಿಕೊಂಡಿದ್ದ ನಟಿ ಒತ್ತಡಕ್ಕೆ ಸಿಲುಕಿ ಗರ್ಭಪಾತಕ್ಕೆ ಗುರಿಯಾಗಿದ್ದರು. ಆದರೆ ಇದೀಗ ಮಗು ಹುಟ್ಟಿದ್ದು, ಆ ಕಷ್ಟಗಳೆಲ್ಲ ಮರೆಯಾಗಿವೆ ಅಂತ ಹೇಳಿಕೊಂಡಿದ್ದಾರೆ. 


ಇದನ್ನೂ ಓದಿ:ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ನಟಿ ಮುಮ್ತಾಜ್..! ʼಕಂಠಿʼ ಸಿನಿಮಾದ ಸುಂದರಿ ಬಾಳಲ್ಲಿ ಏನಾಯ್ತು..?


2005 ಅಹಂ ಪ್ರೇಮಾಸ್ಮಿ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಆರತಿ, ತನ್ನ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಸಿನಿ ಪ್ರೇಕ್ಷಕರ ಮನ ಗೆದ್ದರು. ಬಾಲಿವುಡ್‌ನಲ್ಲಿ ಆರತಿ ನಟನೆಯ ಲಜ್ಜಾ, ಆವಾರಾ ಪಾಗಲ್ ದೀವಾನಾ, ತುಮ್ಸೆ ಅಚ್ಛಾ ಕೌನ್ ಹೈ, ಶೂಟ್ ಔಟ್ ಎಟ್ ಲೋಖಂಡ್‌ವಾಲಾ ಮತ್ತು ಪಾರ್ಟ್‌ನರ್‌ನಂತಹ ಅನೇಕ ಸಿನಿಮಾಗಳು ಸೂಪರ್‌ ಹಿಟ್‌ ಆಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.