ʼಶ್ರೀದೇವಿ ಸಾವು ಸಹಜವಲ್ಲʼ..! ಕೊನೆಗೂ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್!

Actress Sridevi death reason : ದಿವಂಗತ ನಟಿ ಶ್ರೀದೇವಿ ಬದುಕಿರುವವರೆಗೂ ಅವರ ಜೀವನ ಚರಿತ್ರೆಯನ್ನು ಚಿತ್ರಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವ ಬೋನಿ ಕಪೂರ್ ಇದೀಗ ಅವರ ಸಾವಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

Written by - Krishna N K | Last Updated : Apr 6, 2024, 05:01 PM IST
    • 2018 ರಲ್ಲಿ ದುಬೈನಲ್ಲಿ ನಿಧನರಾದ ಶ್ರೀದೇವಿ ಸಾವು ಇಂದಿಗೂ ರಹಸ್ಯ
    • ಪತಿ ಬೋನಿ ಕಪೂರ್ ಈ ಕುರಿತು ಹೇಳಿಕೆ ನೀಡಿದ್ದಾರೆ.
    • ನಟಿಯ ಸಾವಿನ ಸುದ್ದಿ ಭಾರತೀಯ ಚಿತ್ರರಂಗವನ್ನೇ ಶಾಕ್‌ಗೆ ಗುರಿಯಾಗಿಸಿತ್ತು.
ʼಶ್ರೀದೇವಿ ಸಾವು ಸಹಜವಲ್ಲʼ..! ಕೊನೆಗೂ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್! title=

Boney Kapoor on Sridevi Death : ನಟಿ ಶ್ರೀದೇವಿ ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ ಭಾರತದ ಅಪ್ರತಿಮ ನಟಿಯರಲ್ಲಿ ಒಬ್ಬರು. 2018 ರಲ್ಲಿ ದುಬೈನಲ್ಲಿ ನಿಧನರಾದ ಶ್ರೀದೇವಿ ಸಾವು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಅವರ ಬಯೋಪಿಕ್ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುವಾಗ, ಅವರ ಪತಿ ಬೋನಿ ಕಪೂರ್ ಈ ಕುರಿತು ಹೇಳಿಕೆ ನೀಡಿದ್ದಾರೆ. 

ಒಂದು ಕಾಲದಲ್ಲಿ ಶ್ರೀದೇವಿ ತಮಿಳು ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರು. ತಮಿಳಿನಲ್ಲಿ ಟಾಪ್ ಹೀರೋಗಳಾಗಿದ್ದ ಕಮಲ್ ಮತ್ತು ರಜನಿ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲೂ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ. ಮದುವೆಯ ನಂತರ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ನಟಿಯ ಸಾವಿನ ಸುದ್ದಿ ಭಾರತೀಯ ಚಿತ್ರರಂಗವನ್ನೇ ಶಾಕ್‌ಗೆ ಗುರಿಯಾಗಿಸಿತ್ತು. 

ಇದನ್ನೂ ಓದಿ:ಬಿಗ್‌ ಬಾಸ್‌ ಮುಕ್ತಾಯದ ಬಳಿಕ ಎಲ್ಲಿದ್ದಾರೆ ಡ್ರೋಣ್ ಪ್ರತಾಪ್!?ದೇಶ ಬಿಟ್ಟೋದ್ರಾ?

ಶ್ರೀದೇವಿ ನಿಧನರಾದಾಗ ಅವರಿಗೆ 54 ವರ್ಷ. ದುಬೈನಲ್ಲಿ ನಡೆದ ತಮ್ಮ ಸೋದರ ಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತ ತೆರಳಿದ್ದರು. ಫೆಬ್ರವರಿ 24 ರಂದು ತಮ್ಮ ರೂಮ್‌ನ ಕೋಣೆಯ ಬಾತ್‌ಟಬ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಸಾವಿಗೆ ಕಾರಣ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಆದರೆ, ಅವರ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಬೋನಿ ಕಪೂರ್ ಯಾವುದೇ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಪತ್ನಿಯ ಸಾವಿನ ಬಗ್ಗೆ ಮಾತನಾಡಲಿಲ್ಲ. ಇದೀಗ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಆ ವೇಳೆ ಶ್ರೀದೇವಿ ಸಾವಿನ ಬಗ್ಗೆ 5 ವರ್ಷಗಳಿಂದ ಎಲ್ಲಿಯೂ ಮಾತನಾಡಿಲ್ಲ ಎಂಬುದಕ್ಕೆ ವಿವರಣೆ ನೀಡಿದ ಅವರು, ಶ್ರೀದೇವಿ ಸಾವಿನ ನಂತರ ದುಬೈ ಪೊಲೀಸರು 24ರಿಂದ 48 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು ಅಂತ ತಿಳಿಸಿದ್ದಾರೆ. 

ಇದನ್ನೂ ಓದಿ:ರಾಕಿಬಾಯ್ ದಾಖಲೆ ಬ್ರೇಕ್‌ ಮಾಡ್ತಾರಾ ಪುಷ್ಪರಾಜ್? ಆ ವಿಷಯದಲ್ಲಿ ಯಾರು ಮೇಲುಗೈ!

ಸಹಜ ಸಾವು ಅಲ್ಲ : ಶ್ರೀದೇವಿ ಅವರ ಸಾವು ಸಹಜವಲ್ಲ, ಆಕಸ್ಮಿಕ ಸಾವು. ಅಲ್ಲದೆ, ಶ್ರೀದೇವಿ ಅವರ ಆಹಾರ ಕ್ರಮವೇ ಅವರ ಸಾವಿಗೆ ಕಾರಣ. ಅವರಿಗೆ ಆಗಾಗ್ಗೆ ತಲೆತಿರುಗುವಿಕೆ ಕಾಣಿಸಿಕೊಳ್ಳುತ್ತಿತ್ತು. ಶ್ರೀದೇವಿ ಅವರ ಆಹಾರದಲ್ಲಿ ಉಪ್ಪನ್ನು ಸೇರಿಸಲು ಅವರ ಕುಟುಂಬ ವೈದ್ಯರು ಹೇಳಿದ್ದರು ಎಂದು ಬೋನಿ ಕಪೂರ್ ಉಲ್ಲೇಖಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News