Actress Mumtaj suicide : ಬಹುಭಾಷಾ ನಟಿ ಮುಮ್ತಾಜ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ಐಟಂ ಸಾಂಗ್ ಮೂಲಕ ವಿಶೇಷವಾಗಿ ಹೆಸರು ಮಾಡಿರುವ ನಟಿ ಇತ್ತೀಚಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.. ಅಷ್ಟಕ್ಕೂ ನಟಿಗೆ ಏನಾಗಿತ್ತು.. ಇಂಟ್ರಸ್ಟಿಂಗ್ ವರದಿ ಇಲ್ಲಿದೆ..
ಹೌದು.. ನಟಿ ಮುಮ್ತಾಜ್ ಕನ್ನಡಕ್ಕೆ ʼಕಂಠಿʼ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಐಟಂ ಸಾಂಗ್‌ವೊಂದರಲ್ಲಿ ನಟಿ ಕಾಣಿಸಿಕೊಂಡಿದ್ದರು. ತಮಿಳು 'ಮೋನಿಶಾ ಮತ್ತು ಮೋನಾಲಿಸಾ' ಚಿತ್ರದ ಸಿನಿರಂಗಕ್ಕೆ ಕಾಲಿಟ್ಟರು. 1999 ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಮುಮ್ತಾಜ್ ನಾಯಕಿಯಾಗಿ ನಟಿಸಿದ ಚಿತ್ರಗಳಿಗಿಂತ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ಸಿನಿಮಾಗಳೇ ಹೆಚ್ಚು. ಅದರಲ್ಲಿ ‘ಕಟ್ಟಿಪುಡಿ ಕಟ್ಟಿಪುಡಿತಾ’ ಎಂಬ ತಮಿಳು ಹಾಡು ಇಂದಿಗೂ ಸಹ ಸೂಪರ್ ಹಿಟ್ ಆಗಿದೆ. ಈ ಹಾಡಿಗೆ ದೇವಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಂದಿಗೂ ಈ ಹಾಡು ಫೇಮಸ್.
ಸಧ್ಯ ಚಿತ್ರರಂಗದಿಂದ ದೂರ ಉಳಿದಿರುವ ಮುಮ್ತಾಜ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ, ತಾವು ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ. ಒಮ್ಮೆ ನನಗೆ ಸೊಂಟವನ್ನು ಸರಿಸಲು ಸಾಧ್ಯವಾಗದಂತಹ ನೋವು ಕಾಣಿಸಿಕೊಂಡಿತ್ತು. ಎಷ್ಟೋ ಜನ ವೈದ್ಯರ ಬಳಿ ಹೋದರೂ ಸಹ ಗುಣಮುಖವಾಗಲಿಲ್ಲ. ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಆಟೋ ಇಮ್ಯೂನ್ ಕಾಯಿಲೆಗೆ ತುತ್ತಾಗಿರುವುದು ತಿಳಿದು ಬಂತು ಅಂತ ತಿಳಿಸಿದ್ದಾರೆ. ಅಲ್ಲದೆ, ಈ ಖಾಯಿಲೆಯಿಂದ ಎದ್ದು ನಿಲ್ಲಲೂ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವುನ್ನು ಹಂಚಿಕೊಂಡರು.
ಆತ್ಮಹತ್ಯೆ ಯತ್ನ: ಕಾಯಿಲೆಯಿಂದ ಮಾನಸಿಕವಾಗಿ ತೀವ್ರ ನೋವು ಅನುಭವಿಸಿದ ಮುಮ್ತಾಜ್, ಸತತ ಎರಡೂವರೆ ಗಂಟೆಗಳ ಕಾಲ ಕುಳಿತು ಅಳುತ್ತಿದ್ದರಂತೆ, ಇದರಿಂದ ಮಾನಸಿಕ ಅಸ್ವಸ್ಥರಾಗಿದ್ದಾಗಿ ತಿಳಿಸಿದರು. ಅಲ್ಲದೆ, ಇದರಿಂದ ಹೊರಬರಲು ತನ್ನ ಸಹೋದರ, ಪತಿ ಮತ್ತು ದೇವರೇ ಸಹಾಯ ಮಾಡಿದ್ದು, ಇಲ್ಲದಿದ್ದರೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದರಂತೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ