ಎರಡನೇ ಮದುವೆ ಬಗ್ಗೆ ಮೌನ ಮುರಿದ ನಟಿ ಮೀನಾ! ಬಹುಭಾಷಾ ತಾರೆ ಹೇಳಿದ್ದೇನು?
South Actress Meena: ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನದ ಬಳಿಕ ಎರಡನೇ ಮದುವೆ ಬಗ್ಗೆ ವದಂತಿಗಳು ಹಬ್ಬಿದ್ದವು. ಇದ್ಯಾವುದಕ್ಕೂ ಮೀನಾ ನೇರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದ್ರೀಗ ಕೊನೆಗೂ ಎರಡನೇ ಮದುವೆ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದಾರೆ.
Meena Second Marriage: ಬಹುಭಾಷಾ ತಾರೆ ಮೀನಾ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸಿನಿಮಾದಲ್ಲಿ ಬ್ಯುಸಿಯಾಗಿದ್ದವರು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿದ್ದರು. ಕನ್ನಡದಲ್ಲೂ ಪುಟ್ನಂಜ, ಸ್ವಾತಿ ಮುತ್ತು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ಹಿಂದಿಯ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚೆಗೆ ನಟಿ ಮೀನಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ಸಂಗತಿಗಳ ಬಗ್ಗೆ ಮೌನ ಮುರಿದಿದ್ದು, "ಪತಿ ವಿದ್ಯಾಸಾಗರ್ ಹಾಗೂ ಮೀನಾ ನಡುವೆ ಜಗಳವಾಗಿದೆ. ಎರಡನೇ ಮದುವೆ ಆಗುತ್ತಿದ್ದಾರೆ" ಇಂತಹದ್ದೇ ಒಂದಿಷ್ಟು ಸಂಗತಿಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಈ ಹಿಂದೆ ಮೀನಾ ಹಾಗೂ ಪತಿ ವಿದ್ಯಾಸಾಗರ್ ನಡುವೆ ಜಗಳ ನಡೆದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಅವರ ಪೋಷಕರು ಕರೆ ಮಾಡಿ ಇಬ್ಬರಿಗೂ ಪ್ರಶ್ನೆ ಮಾಡಿದ್ದನ್ನು ನೆನೆಪಿಸಿಕೊಂಡಿದ್ದಾರೆ. ನಟಿ ಮೀನಾ "ನಿಜವಾಗಿಯೂ ನಮ್ಮ ನಡುವೆ ಜಗಳ ನಡೆದಿರಲಿಲ್ಲ. ನಾವು ತುಂಬಾನೇ ಸಂತೋಷವಾಗಿದ್ದೇವು." ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದಿಗಂತ್ ಗೆ ಕಿಚ್ಚ ಸಾಥ್...ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಸುದೀಪ್
ಇಷ್ಟೇ ಅಲ್ಲದೆ ನಟಿ ಮೀನಾ ಸಂದರ್ಶನದಲ್ಲಿ, "ವಿದ್ಯಾಸಾಗರ್‌ಗೆ ಶ್ವಾಸಕೋಶದ ಕಸಿ ಮಾಡಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿದ್ದವು. ವಿದೇಶಕ್ಕೆ ಕರೆದುಕೊಂಡು ಹೋಗಲು ಯೋಚಿಸಿದ್ದೆವು. ಆದರೆ, ನಾನು ಅಲ್ಲಿಗೆ ಹೋದರೂ ಕೆಲವು ಸಮಯ ಕಾಯಲೇಬೇಕಿತ್ತು. ಅಷ್ಟರಲ್ಲೇ ಊಹಿಸಿಕೊಳ್ಳುವುದಕ್ಕೆ ಅಸಾಧ್ಯವಾದದ್ದು ನಡೆದು ಹೋಯ್ತು. ಈಗಷ್ಟೇ ನಾನು ಆ ನೋವಿನಿಂದ ಹೊರಬರುತ್ತಿದ್ದೇನೆ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಮೀನಾ ಪತಿ ವಿದ್ಯಾಸಾಗರ್ ನಿಧನದ ಬಳಿಕ ಎರಡನೇ ಮದುವೆ ಬಗ್ಗೆನೂ ವದಂತಿಗಳು ಹಬ್ಬಿದ್ದು, ಕೆಲವು ಹೆಸರುಗಳು ಕೂಡ ಈಕೆ ಜೊತೆ ತಳುಕು ಹಾಕಿಕೊಂಡಿದ್ದವು. ಈ ಬಗ್ಗೆ ಮೀನಾ ಇದೇ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸುತ್ತಾ, "ವಿದ್ಯಾಸಾಗರ್ ನಿಧನರಾದ ಕೆಲವು ತಿಂಗಳ ಬಳಿಕ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಸುದ್ದಿ ಹಬ್ಬಿತ್ತು. ನಾನು ಹೀರೋ ಧನುಷ್ ಅವರನ್ನು ಮದುವೆಯಾಗುತ್ತೇನೆ ಎಂದು ಪ್ರಚಾರ ಮಾಡಿದ್ದರು. ರಾಜಕಾರಣಿ, ಹಿರಿಯ ಸ್ಟಾರ್ ನಟ, ಉದ್ಯಮಿ ಹೀಗೆ ನನ್ನ ಮದುವೆ ಬಗ್ಗೆ ಬರೆದಿದ್ದಾರೆ. ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತೆಲ್ಲ ಬರೆದಿದ್ದರು. ಅದು ನಿಜವೋ ಸುಳ್ಳೋ ಅನ್ನೋದನ್ನು ತಿಳಿದುಕೊಳ್ಳದೆ ಬರೆಯೋದು ಸರಿಯಿಲ್ಲ. ಇಂತಹ ಸುದ್ದಿಗಳಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 58 ವರ್ಷವಾದ್ರೂ ಮದುವೆಯಾಗದ ಸಲ್ಮಾನ್ ಖಾನ್ 2024ರಲ್ಲಿ ಮದುವೆಯಾಗ್ತಾರಾ? ಹೊಸ ವರ್ಷದಲ್ಲಿ ಹೀಗಿದೆ ಅವರ ಭವಿಷ್ಯ
ಮೀನಾ ಬಾಲ ನಟಿಯಾಗಿ ಸಿನಿಮಾ ಎಂಟ್ರಿ ಕೊಟ್ಟವರು, ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಾಯಕಿಯಾಗಿ ಬ್ಯುಸಿಯಾಗಿದ್ದರು. ಅದರಲ್ಲೂ ತೆಲುಗು, ತಮಿಳು ಭಾಷೆಯ ಸ್ಟಾರ್ ಹೀರೊಗಳೊಂದಿಗೆ ನಟಿಸಿ ಗೆದ್ದಿದ್ದಾರೆ. ಆದರೆ, ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಮಗಳು ಜನಿಸಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಆದರೆ, ಪತಿ ನಿಧನದ ಬಳಿಕ ಹಬ್ಬಿದ ವದಂತಿಗಳ ಬಗ್ಗೆ ಮೀನಾ ಬೇಸರ ಹೊರಹಾಕಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ