58 ವರ್ಷವಾದ್ರೂ ಮದುವೆಯಾಗದ ಸಲ್ಮಾನ್ ಖಾನ್ 2024ರಲ್ಲಿ ಮದುವೆಯಾಗ್ತಾರಾ? ಹೊಸ ವರ್ಷದಲ್ಲಿ ಹೀಗಿದೆ ಅವರ ಭವಿಷ್ಯ

Salman Khan Rashifal 2024: 2024 ನೇ ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು 4 ದಿನ ಬಾಕಿ ಇದೆ. ಹೀಗಿರುವಾಗ ಮುಂದಿನ ವರ್ಷ ಸಲ್ಮಾನ್‌ ಭವಿಷ್ಯ ಹೇಗಿದೆ? ಕಂಕಣ ಭಾಗ್ಯ ಇದೆಯೇ ಎಂಬುದನ್ನು ತಿಳಿಯಲು ಅವರ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

Written by - Bhavishya Shetty | Last Updated : Dec 27, 2023, 07:17 PM IST
    • 58 ವರ್ಷ ವಯಸ್ಸಾದರೂ ಸಲ್ಮಾನ್ ಮದುವೆಯಾಗಿಲ್ಲ.
    • ಮುಂದಿನ ವರ್ಷ ಮದುವೆಯಾಗುವ ಯೋಗ ಇದೆಯೇ?
    • ಮುಂದಿನ ವರ್ಷ ಸಲ್ಮಾನ್‌ ಭವಿಷ್ಯ ಹೇಗಿದೆ?
58 ವರ್ಷವಾದ್ರೂ ಮದುವೆಯಾಗದ ಸಲ್ಮಾನ್ ಖಾನ್ 2024ರಲ್ಲಿ ಮದುವೆಯಾಗ್ತಾರಾ? ಹೊಸ ವರ್ಷದಲ್ಲಿ ಹೀಗಿದೆ ಅವರ ಭವಿಷ್ಯ title=
salman khan horoscope

Salman Khan Rashifal 2024: ಇಂದು ಸಲ್ಮಾನ್ ಖಾನ್ ಹುಟ್ಟುಹಬ್ಬ, ಸೂಪರ್ ಸ್ಟಾರ್’ಗೆ ಕೇವಲ ಬಾಲಿವುಡ್’ನಲ್ಲಿ ಅಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಅಂದಹಾಗೆ 58 ವರ್ಷ ವಯಸ್ಸಾದರೂ ಸಲ್ಮಾನ್ ಮದುವೆಯಾಗಿಲ್ಲ. ಇದಕ್ಕೆ ಕಾರಣವೇನು? ಮುಂದಿನ ವರ್ಷ ಮದುವೆಯಾಗುವ ಯೋಗ ಇದೆಯೇ? ಎಂಬುದನ್ನು ಈ ವರದಿಯ ಮೂಲಕ ತಿಳಿದುಕೊಳ್ಳೋಣ.

ಇದನ್ನೂ ಓದಿ:ಮಂತ್ರಾಲಯದಲ್ಲಿ ಹುಂಡಿ ಎಣಿಕೆ; 2 ಕೋಟಿ 96 ಲಕ್ಷ ಕಾಣಿಕೆ ಸಂಗ್ರಹ

2024 ನೇ ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು 4 ದಿನ ಬಾಕಿ ಇದೆ. ಹೀಗಿರುವಾಗ ಮುಂದಿನ ವರ್ಷ ಸಲ್ಮಾನ್‌ ಭವಿಷ್ಯ ಹೇಗಿದೆ? ಕಂಕಣ ಭಾಗ್ಯ ಇದೆಯೇ ಎಂಬುದನ್ನು ತಿಳಿಯಲು ಅವರ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ 1965 ಡಿಸೆಂಬರ್ 27 ರಂದು ಬೆಳಿಗ್ಗೆ 9.30 ಕ್ಕೆ ಜನಿಸಿದ್ದಾರೆ. ಇದು ಅತ್ಯುತ್ತಮ ಸಮಯವಾಗಿದ್ದರಿಂದ ಸಲ್ಮಾನ್ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆದಿದ್ದಾರೆ. ಇನ್ನು ಮುಂಬರುವ ವರ್ಷ ಅಂದರೆ 2024ರ ರಾಶಿಭವಿಷ್ಯ ನೋಡುವುದಾದರೆ, ಈ ವರ್ಷ ಅವರಿಗೆ ಹೊಸ ಅವಕಾಶಗಳು ಒದಗಿ ಬರಲಿದೆ. ವೃತ್ತಿಜೀವನದ ದೃಷ್ಟಿಯಿಂದ ಮುಂಬರುವ ವರ್ಷವು ಉತ್ತಮವಾಗಿರುತ್ತದೆ. ಆರೋಗ್ಯ ಮತ್ತು ಸಾಂದರ್ಭಿಕ ಸವಾಲುಗಳ ಜೊತೆ ಕೆಲ ವಿಚಾರಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.

ಯಶಸ್ಸಿನ ಸಾಧ್ಯತೆಯ ಹೊರತಾಗಿಯೂ, ಅಪಘಾತಗಳು ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಖ್ಯಾತಿ ಹೆಚ್ಚಾದಂತೆ ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಚಿಂತೆಗಳೂ ಹೆಚ್ಚಾಗಬಹುದು. ಆದರೆ, ಈ ಏರಿಳಿತಗಳ ನಡುವೆ 2024 ವರ್ಷವು ಭರವಸೆಯ ವರ್ಷವಾಗಲಿದೆ.

ಸಲ್ಮಾನ್ ಖಾನ್ 2024 ರಲ್ಲಿ ಮದುವೆಯಾಗುತ್ತಾರಾ?

ಸಹೋದರನ ಮದುವೆ ಬೆನ್ನಲ್ಲೇ ಸಲ್ಮಾನ್ ಯಾವಾಗ ಮದುವೆಯಾಗ್ತಾರೆ ಎಂಬ ಬಗ್ಗೆ ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅಂದಹಾಗೆ ಸಲ್ಮಾನ್ ತುಂಬಾ ಸುಂದರ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಸಾಕಷ್ಟು ಪ್ರೇಮ ಸಂಬಂಧಗಳನ್ನು ಹೊಂದಿದ್ದರೂ ಸಹ ಇದುವರೆಗೆ ಕಂಕಣಬಲ ಅವರಿಗೆ ಕೂಡಿ ಬಂದಿಲ್ಲ.

ಇದನ್ನೂ ಓದಿ: ಅಂದಕ್ಕೋ… ಚಂದಕ್ಕೋ ಅಲ್ಲ…! ಬಳೆಗಳನ್ನು ಧರಿಸಬೇಕು ಅನ್ನೋದು ಈ ಕಾರಣಕ್ಕೆ…

ಸಲ್ಮಾನ್ ಖಾನ್ ಅವರ ಜಾತಕದಲ್ಲಿ ಕಾಳಸರ್ಪ ದೋಷ ರೂಪುಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಹಾರ ಕೈಗೊಳ್ಳದೇ ಇದ್ದಲ್ಲಿ, ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News