ರಶ್ಮಿಕಾ ಮಂದಣ್ಣಗೆ ‘ಇವರು’ ಸಿಕ್ಕರೆ ಮದುವೆ ಆಗ್ತಾರಂತೆ!: ವಿಜಯ್ ದೇವರಕೊಂಡ ಜತೆ ಲವ್ ಗಾಸಿಪ್ ನಡುವೆ ಶಾಕಿಂಗ್ ಹೇಳಿಕೆ ಕೊಟ್ಟ ನ್ಯಾಷನಲ್ ಕ್ರಷ್!
Rashmika Mandanna: ರಶ್ಮಿಕಾ ‘ಪುಷ್ಪಾ-2’ ಪ್ರಮೋಷನ್ ಬಗ್ಗೆ ಮಾತನಾಡ್ತಾ ಎಮೋಷನ್ ಆಗಿ ಕ್ರಷ್ ಬಗ್ಗೆ ಕ್ಲ್ಯೂ ಕೊಟ್ಟಿದ್ದಾರೆ.
Rashmika Mandanna Marriage: ಕನ್ನಡತಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಫೇಮಸ್ ಆಗಿ ನ್ಯಾಷನಲ್ ಕ್ರಷ್ ಆಗಿರಬಹುದು. ಅವರಿಗೆ ಕ್ರಷ್ ಆಗಿರುವುದು ಯಾರ ಬಗ್ಗೆ ಎನ್ನುವುದು ತುಂಬಾ ಮುಖ್ಯ. ಅದರಲ್ಲೂ ತೆಲುಗಿನ ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ನಲ್ಲಿ ಇದ್ದಾರೆ. ಇನ್ನೊಂದು ಸ್ವಲ್ಪದಿನದಲ್ಲಿ ಮದುವೆ ಆಗುತ್ತಾರೆ ಎನ್ನೋ ಗಾಸಿಪ್ ನಡುವೆ ರಶ್ಮಿಕಾಗೆ ಇಷ್ಕ್ ಆಗಿದೆ ಅಂದ್ರೆ, ಅದು ಯಾರ ಮೇಲೆ ಅಂತಾ ಕೇಳದೆ ಇರೋಕೆ ಸಾಧ್ಯವಾಗುತ್ತಾ?
ರಶ್ಮಿಕಾ ಮಂದಣ್ಣ ಈಗ ಯದ್ವಾತದ್ವ ಖುಷಿಯಲ್ಲಿದ್ದಾರೆ. ಖುಷಿಗೆ ಮೂರ್ನಾಲ್ಕು ಕಾರಣಗಳು. ಒಂದು ರಶ್ಮಿಕಾ ಅಭಿನಯದ ‘ಪುಷ್ಪಾ-2’ ಬಿಡುಗಡೆಗೆ ರೆಡಿ ಇದೆ. ಮತ್ತು ಸಕತ್ ಸೌಂಡ್ ಮಾಡ್ತಿದೆ. ಇನ್ನೊಂದು ‘ಅನಿಮಲ್’ ನಂತರ ಬಾಲಿವುಡ್ ನಲ್ಲಿ ಮತ್ತೊಂದು ಬೊಂಬಾಟ್ ಆಫರ್ ಬಂದಿದೆ. ಬಾಕ್ಸ್ ಅಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾಕ್ಕೆ ಸುಂದರಿ ರಶ್ಮಿಕಾ ಹೀರೋಯಿನ್. ಮೂರನೇ ಕಾರಣ ‘ಸಿಕಂದರ್’ ಸಿನಿಮಾಕ್ಕೆ ರಶ್ಮಿಕಾಗೆ ಸಿಕ್ಕಿರುವ ‘ಬಿಡಿಗಾಸು’ ಬರೋಬ್ಬರಿ 13 ಕೋಟಿಯಂತೆ. ಇದಲ್ಲದೆ ಹಿಂದಿ ಮತ್ತು ತೆಲುಗು ನಿರ್ಮಾಪಕರು ರಶ್ಮಿಕಾ ಕಾಲ್ ಶೀಟಿಗಾಗಿ ಕಾದುಕುಳಿತಿದ್ದಾರಂತೆ.
ನಿರ್ಮಾಪಕರು ಏನಕ್ಕಾದರೂ ಕಾಯಲಿ, ಕುಳಿತರಲಿ, ನಿಂತಿರಲಿ, ರಶ್ಮಿಕಾಗೆ ಕ್ರಷ್ ಆಗಿರೋದು ಯಾರ ಮೇಲೆ ಅನ್ನೋದು ಅಭಿಮಾನಿಗಳ ಕುತೂಹಲ. ರಶ್ಮಿಕಾ ‘ಪುಷ್ಪಾ-2’ ಪ್ರಮೋಷನ್ ಬಗ್ಗೆ ಮಾತನಾಡ್ತಾ ಎಮೋಷನ್ ಆಗಿ ಕ್ರಷ್ ಬಗ್ಗೆ ಕ್ಲ್ಯೂ ಕೊಟ್ಟಿದ್ದಾರೆ. ‘ಪುಷ್ಪಾ-2’ ಚಿತ್ರದ ನಿರ್ದೇಶಕ ಸುಕುಮಾರ್ ಬಗ್ಗೆ ಸಿಕ್ಕಾಪಟ್ಟೆ ಹೊಗಳಿ, ಅಟ್ಟಕ್ಕೇರಿಸಿ ಆಮೇಲೆ ‘ಅವಕಾಶ ಸಿಕ್ಕರೆ ಮದುವೆಯಾಗೋಕೂ ಪ್ಲಾನ್ ಮಾಡಿಬಿಡುತ್ತೇನೆ. ಅವರ ಕೆಲಸಕ್ಕೆ ನಾನು ಶರಣಾಗಿದ್ದೇನೆ’ ಅಂದು ಬಿಟ್ಟಿದ್ದಾರೆ.
ಇದನ್ನೂ ಓದಿ- 15 ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ ಎಷ್ಟು ಗೊತ್ತಾ?
‘ಪುಷ್ಪಾ’ ಮೊದಲ ಸಿನಿಮಾದಲ್ಲಿ ಸುಕುಮಾರ್ ತುಂಬಾ ಸಂಕೋಚ ಸ್ವಭಾವದವರು ಎನಿಸುತ್ತಿತ್ತು. ಗಂಭೀರ ಸ್ವಭಾವದವರು ಎನಿಸುತ್ತಿತ್ತು. ಕಡಿಮೆ ಮಾತನಾಡುತ್ತಿದ್ದರು. ಅವರ ಜೊತೆ ಮಾತನಾಡಲು ಭಯ ಆಗುತ್ತಿತ್ತು. ‘ಪುಷ್ಪಾ-2’ ಸಿನಿಮಾದ ವೇಳೆಗೆ ತುಂಬಾ ಕಂಫರ್ಟ್ ಅನಿಸತೊಡಗಿತು. ಅವರ ವರ್ಕ್ ಸ್ಟೈಲ್ ನಿಜಕ್ಕೂ ಅದ್ಭುತ ಎಂದು ರಶ್ಮಿಕಾ ಮಂದಣ್ಣ ಹೇಳುತ್ತಿದ್ದರೆ ಸುಕುಮಾರ್ ಜಸ್ಟ್ ಸ್ಮೈಲ್ ಕೊಟ್ಟು ಸುಮ್ಮನಾದರು.
‘ಪುಷ್ಪಾ-2’ ಪ್ರಮೋಷನ್ ಬಗ್ಗೆ ಎಕ್ಸೈಟ್ ಆಗಿ ಮಾತನಾಡುತ್ತಿದ್ದ ರಶ್ಮಿಕಾ ಮಂದಣ್ಣ ಈ ಸಿನಿಮಾ ನ್ಯಾಷನಲ್, ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಬೇಕು. ಅದಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಂತಾ ಅಲ್ಲೇ ವೇದಿಕೆ ಮೇಲೆ ‘ಸಾಮಿ ಸಾಮಿ…’ ಅಂತಾ ಬೇಡಿಕೊಂಡೇಬಿಟ್ಟರು.
‘ಪುಷ್ಪಾ-2’ ಸಿನಿಮಾದ ಐಟಂ ಸಾಂಗಿಗೆ ಸೊಂಟ ಬಳುಕಿಸಿರುವ ಇನ್ನೊಬ್ಬ ಕನ್ನಡತಿ ಶ್ರೀಲೀಲಾ ಅವರಿಗೆ ಪ್ಲೇಯಿಂಗ್ ಕಿಸ್ ಕೊಟ್ಟು ಖುಷಿಪಡಿಸಿದರು ರಶ್ಮಿಕಾ. ಹೀರೊ ಅಲ್ಲು ಅರ್ಜುನ್ ಬಗ್ಗೆ ‘ಏನು ತಾನೇ ಹೇಳಲು ಸಾಧ್ಯ. ಯೂ ಆರ್ ಐಕಾನ್, ನೀವು ಎಲ್ಲಾ ಬೌಂಡರಿಗಳನ್ನು ಮುರಿದಿದ್ದಿರಿ, ಇವತ್ತು ದೇಶದಲ್ಲಿ ಎಲ್ಲೇ ಹೋದರು ‘ಪುಷ್ಪಾ-2’ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅಂತಾ ಕೇಳ್ತಿದ್ದಾರೆ. ಅದಕ್ಕೆ ನೀವು ಕಾರಣ’ ಎಂದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.