Aishwarya Rai Bachchan: ಮಾಜಿ ವಿಶ್ವಸುಂದರಿ, ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದ ಚೆಂದುಳ್ಳಿ ಚಲುವೆ, ಬಾಲಿವುಡ್ ನ ಎಲ್ಲಾ ಖ್ಯಾತನಾಮರ ಜೊತೆಯೂ ಅಭಿನಯಿಸಿರುವ ಅಂದಗಾತಿ, ನಗು, ನೋಟ, ನಟನೆ ಹಾಗು ನೃತ್ಯಗಳೆಲ್ಲದರಲ್ಲೂ ಸೈ ಎನಿಸಿಕೊಂಡಿರುವ ಬಲು ಅಪರೂಪದ ನಟಿ ಐಶ್ವರ್ಯ ರೈ ಒಂದೊಮ್ಮೆ ಸಿನಿಮಾ ಎಂಬ ಈ ಗ್ಲಾಮರ್ ಜಗತ್ತಿಗೆ ಬರದಿದ್ದರೆ ಏನಾಗುತ್ತಿದ್ದರು ಎನ್ನುವುದು ತುಂಬಾ ಕುತೂಹಲಕಾರಿಯಾದ ವಿಷಯ.
ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ಸೇನೆಯಲ್ಲಿ ಜೀವಶಾಸ್ತ್ರಜ್ಞರಾಗಿದ್ದರು. ತಾಯಿ ಬಿಂದ್ಯಾ ರೈ ಮನೆ ನಿಭಾಯಿಸುತ್ತಿದ್ದರು. ಮಂಗಳೂರಿನಲ್ಲಿ 1973ರ ನವೆಂಬರ್ 1ರಂದು ಜನಿಸಿದ ಐಶ್ವರ್ಯ ರೈ ಅಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರು. ಜೊತೆಜೊತೆಯಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದರು. ಐಶ್ವರ್ಯ ರೈ ಮತ್ತು ಅವರ ಕುಟುಂಬ ಬಯಸಿದ್ದು ಅವರು ಒಳ್ಳೆಯ ಭರತನಾಟ್ಯ ಕಲಾವಿದೆಯಾಗಲಿ ಎಂದೇ. ಒಂದೊಮ್ಮೆ ಐಶ್ವರ್ಯ ರೈ ಸಿನಿಮಾ ರಂಗಕ್ಕೆ ಬರದೇ ಇದ್ದಿದ್ದರೆ ಒಳ್ಳೆಯ ಭರತನಾಟ್ಯ ಕಲಾವಿದೆ ಆಗುತ್ತಿದ್ದರೇನೋ…
ಇದನ್ನೂ ಓದಿ- 15 ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ ಎಷ್ಟು ಗೊತ್ತಾ?
ವಿದ್ಯಾಭ್ಯಾಸ ಮತ್ತು ಭರತನಾಟ್ಯ ಎರಡನ್ನೂ ಮಾಡುತ್ತಿದ್ದ ಐಶ್ವರ್ಯ ರೈ ಒಂಬತ್ತನೇ ತರಗತಿಯಲ್ಲಿ ಇದ್ದಾಗ ಜಾಹಿರಾತು ಮಾಡುವ ಅವಕಾಶ ಸಿಗುತ್ತದೆ. ಐಶ್ವರ್ಯ ರೈ ಮತ್ತು ಅವರ ಕುಟುಂಬ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡುತ್ತಾರೆ. ಹಾಗಾಗಿ ಐಶ್ವರ್ಯ ರೈ ಮೊದಲ ಬಾರಿಗೆ ಪೆನ್ಸಿಲ್ ಜಾಹಿರಾತಿಗಾಗಿ ಬಣ್ಣ ಹಚ್ಚುತ್ತಾರೆ. ಮತ್ತು ಮೊದಲ ಬಾರಿ ಕ್ಯಾಮರಾ ಮುಂದೆ ಬರುತ್ತಾರೆ. ಆ ‘ಒಂದು ಪೆನ್ಸಿಲ್’ ಐಶ್ವರ್ಯ ರೈ ಅವರ ಭವಿಷ್ಯವನ್ನೇ ಬದಲಿಸಿಬಿಡುತ್ತದೆ. ಅನಂತರ ಅವರು ಮಾಡೆಲಿಂಗ್ ಮತ್ತು ಸಿನಿಮಾ ಜಗತ್ತಿಗೆ ಜಿಗಿಯುತ್ತಾರೆ.
ತಮ್ಮ 18ನೇ ವಯಸ್ಸಿನಲ್ಲಿ ಐಶ್ವರ್ಯ ರೈ ‘ಸೂಪರ್ ಮಾಡೆಲ್ ಕಂಟೆಸ್ಟ್ ಅವಾರ್ಡ್’ ಗೆಲ್ಲುತ್ತಾರೆ. ನಂತರ 21ನೇ ವಯಸ್ಸಿನಲ್ಲಿ ‘ವಿಶ್ವ ಸುಂದರಿ’ ಪಟ್ಟ ಪಡೆದುಕೊಳ್ಳುತ್ತಾರೆ. ‘ಮಿಸ್ ವರ್ಲ್ಡ್’ ಆಗುತ್ತಿದ್ದದ್ದೇ ತಡ ಅವಕಾಶಗಳು ಅಲೆಗಳ ರೂಪದಲ್ಲಿ ಬರತೊಡಗುತ್ತವೆ. ಒಂದೆಡೆ ಮಾಡೆಲಿಂಗ್ ನಲ್ಲಿ ಮತ್ತೊಂದು ಕಡೆ ಸಿನಿಮಾ ರಂಗದಿಂದ. ಮಣಿರತ್ನ ಅವರ ‘ಇರುವರ್’ ಐಶ್ವರ್ಯ ರೈ ಮೊದಲ ಸಿನಿಮಾ, ಆಮೇಲೆ ಅವರು ಹಿಂದುರಿಗಿ ನೋಡಲೇ ಇಲ್ಲ.
ಇದನ್ನೂ ಓದಿ- ಪುತ್ರಿ ಆರಾಧ್ಯಗೆ ದುಬೈನಲ್ಲಿ ಪ್ರಾಪರ್ಟಿ ಮಾಡಿರುವ ಐಶ್-ಅಭಿಷೇಕ್: ಬರಿ ಒಂದು ವಿಲ್ಲಾ ಬೆಲೆ ಎಷ್ಟು ಗೊತ್ತಾ?
ನಂತರ ಕೆಲ ಹಿಂದಿ ಸಿನಿಮಾಗಳಲ್ಲಿ ನಟಿಸಿದರೂ ಬ್ರೇಕ್ ಕೊಟ್ಟ ಮೂವಿ ಎಂದರೆ ಸಲ್ಮಾನ್ ಖಾನ್ ಅವರ ‘ಹಮ್ ದಿಲ್ ದೆ ಚುಕೆ ಸನಮ್’. ಈ ಸಿನಿಮಾದಾಚೆಗೂ ಸಲ್ಮಾನ್ ಖಾನ್ ಜೊತೆ ಐಶ್ವರ್ಯ ರೈ ಅವರ ‘ಪ್ರೇಮ್ ಕಹಾನಿ’ ಶುರುವಾಯಿತು. ಆದರೆ 2002ರ ವೇಳೆಗೆ ಅವರಿಬ್ಬರು ಬೇರೆಯಾಗುತ್ತಾರೆ. 2007ರಲ್ಲಿ ಐಶ್ವರ್ಯ ರೈ ಅವರು ಅಭಿಷೇಕ್ ಬಚ್ಚನ್ ಜೊತೆ ವಿವಾಹವಾಗುತ್ತಾರೆ. ಈಗ ಅವರಿಬ್ಬರ ನಡುವೆ ಸಂಬಂಧ ಸರಿ ಇಲ್ಲ, ಡಿವೋರ್ಸ್ ಪಡೆಯುವ ಸಾಧ್ಯತೆ ಇದೆ ಎನ್ನುವ ಸುದ್ದಿ ಸರಿದಾಡುತ್ತಿದೆ. ಐಶ್ವರ್ಯ ರೈ ಜೀವನದಲ್ಲಿ ಹೀಗೆ ಹಲವು ತಿರುವು ಪಡೆಯಲು ‘ಪೆನ್ಸಿಲ್’ ಕಾರಣವಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.