15 ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ ಎಷ್ಟು ಗೊತ್ತಾ?

Rashmika Mandanna Net worth: ರಶ್ಮಿಕಾ ಮಂದಣ್ಣ ಈವರೆಗೆ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಒಟ್ಟು 15 ಹಿಟ್ ಸಿನಿಮಾಗಳನ್ನು ನೀಡಿದ್ದು ಅವರನ್ನು ‘ಹಿಟ್ ಮಿಷನ್’ ಎಂದೇ ಕರೆಯಲಾಗುತ್ತಿದೆ. 

Written by - Yashaswini V | Last Updated : Dec 3, 2024, 12:14 PM IST
  • ರಶ್ಮಿಕಾ ಮಂದಣ್ಣ 2017ನೇ ಇಸವಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ‘ಅಂಜನೀಪುತ್ರ’ ಸಿನಿಮಾದಲ್ಲಿ ನಟಿಸಿದ್ದರು.
  • ನಂತರ 2018ನೇ ಇಸವಿಯಲ್ಲಿ ರಕ್ಷಿತ್ ಶೆಟ್ಟಿ ಜೊತೆ ‘ಕಿರಿಕ್ ಪಾರ್ಟಿ’ ಚಿತ್ರ ಮಾಡಿದರು.
  • ಎರಡರಲ್ಲೂ ರಶ್ಮಿಕಾಗೆ ಒಳ್ಳೆಯ ಹೆಸರು ಬಂತು.
15 ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಒಟ್ಟು ಆಸ್ತಿ ಎಷ್ಟು ಗೊತ್ತಾ?

Rashmika Mandanna Net worth: ಕನ್ನಡತಿ, ಕೊಡಗಿನ ಬೆಡಗಿ, ಸೌತ್ ಸುಂದರಿ, ನ್ಯಾಷನಲ್ ಕ್ರಷ್, ಕ್ಯೂಟ್ ಕುಳ್ಳಿ ಎಂದೆಲ್ಲಾ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಬಂದದ್ದು 2017ರಲ್ಲಿ. ಅಂದರೆ ಬರೋಬ್ಬರಿ ಏಳು ವರ್ಷದ ಹಿಂದೆ. ಕನ್ನಡ ಸಿನಿಮಾಗಳ ನಂತರ ಈಗ ತೆಲುಗಿನಲ್ಲಿ ಬಲು ಬೇಡಿಕೆಯ ನಟಿ. ಅಷ್ಟೇಯಲ್ಲ, ಬಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಹೀರೋಯಿನ್. ಹಾಗಾಗಿ ರಶ್ಮಿಕಾ ಮಂದಣ್ಣ ಆಸ್ತಿ ಕೂಡ ಅವರ ಜನಪ್ರಿಯತೆಯಂತೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.

Add Zee News as a Preferred Source

ರಶ್ಮಿಕಾ ಮಂದಣ್ಣ  2017ನೇ ಇಸವಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ‘ಅಂಜನೀಪುತ್ರ’ ಸಿನಿಮಾದಲ್ಲಿ ನಟಿಸಿದ್ದರು. ನಂತರ 2018ನೇ ಇಸವಿಯಲ್ಲಿ ರಕ್ಷಿತ್ ಶೆಟ್ಟಿ ಜೊತೆ ‘ಕಿರಿಕ್ ಪಾರ್ಟಿ’ ಚಿತ್ರ ಮಾಡಿದರು. ಎರಡರಲ್ಲೂ ರಶ್ಮಿಕಾಗೆ ಒಳ್ಳೆಯ ಹೆಸರು ಬಂತು. ಜೊತೆಗೆ ತೆಲುಗು ಚಿತ್ರರಂಗ ಕೈಬೀಸಿ ಕರೆಯಿತು. ಅದೇ ವರ್ಷ ತೆಲುಗಿನ ‘ಗೀತಾ ಗೋವಿಂದಂ’ ನಾಯಕಿಯಾದರು. 2019ನೇ ಇಸವಿಯಲ್ಲಿ ‘ಯಜಮಾನ’, ‘ಡಿಯರ್ ಕಾಮ್ರೇಡ್’, 2020ನೇ ಇಸವಿಯಲ್ಲಿ ‘ಸರಿಲೆರು ನಿಕೇವ್ವರು’, ‘ಭೀಷ್ಮ’ 2021ನೇ ಇಸವಿಯಲ್ಲಿ ‘ಪೊಗರು’ ಸಿನಿಮಾಗಳಲ್ಲಿ ನಟಿಸಿದರು. ನಂತರ ತಮಿಳಿಗೂ ಹಾರಿ ‘ಸುಲ್ತಾನ್’ನ ನಾಯಕಿಯಾದರು.

ಇದನ್ನೂ ಓದಿ- ಪುತ್ರಿ ಆರಾಧ್ಯಗೆ ದುಬೈನಲ್ಲಿ ಪ್ರಾಪರ್ಟಿ ಮಾಡಿರುವ ಐಶ್-ಅಭಿಷೇಕ್: ಬರಿ ಒಂದು ವಿಲ್ಲಾ ಬೆಲೆ ಎಷ್ಟು ಗೊತ್ತಾ?

ಇವೆಲ್ಲವೂ ಒಂದು ರೇಂಜಿಗೆ ಹಿಟ್ ಆದ ಸಿನಿಮಾಗಳಾದರೆ ನಂತರ ಬಂದ ‘ಪುಷ್ಪಾ ಡಿ ರೈಸ್’ ರಶ್ಮಿಕಾ ಮಂದಣ್ಣ ಅವರನ್ನು ಇನ್ನೊಂದು ಲೆವೆಲ್ ಗೆ ಕೊಂಡೊಯ್ಯಿತು. ಜೊತೆಗೆ ಬಾಲಿವುಡ್ ಕರೆಯೂ ಬಂತು. ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾ ಮಾಡಿದರು. ‘ಪುಷ್ಪಾ-2’ ಡಿಸಂಬರ್ 5ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾಕ್ಕೆ ನಾಯಕಿಯಾಗಿ ನಟಿಸುತ್ತಿದ್ದು 13 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ- ಒಂದು ಕಾಲದ ಹುಡುಗಿಯರ ಫೆವರೇಟ್ ಹೀರೋ! ಹೆಂಡತಿ ಬಿಟ್ಟೋದ್ರೂ ಕಷ್ಟಪಟ್ಟು ಇಬ್ಬರು ಮಕ್ಕಳನ್ನು ಸಲುಹಿದ ನಟ ಈತ..!

ರಶ್ಮಿಕಾ ಮಂದಣ್ಣ ಈವರೆಗೆ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಒಟ್ಟು 15 ಹಿಟ್ ಸಿನಿಮಾಗಳನ್ನು ನೀಡಿದ್ದು ಅವರನ್ನು ‘ಹಿಟ್ ಮಿಷನ್’ ಎಂದೇ ಕರೆಯಲಾಗುತ್ತಿದೆ.  ಲಿಪ್ ಲಾಕ್ ಸೇರಿದಂತೆ ಸಖತ್ ಹಾಟ್ ನಟನೆಗೂ ಸೈ ಎನ್ನುವ ಬೋಲ್ಡ್ ಬ್ಯೂಟಿ ರಶ್ಮಿಕಾ ಮಂದಣ್ಣ ಖಾತೆಯಲ್ಲಿ ಇನ್ನೂ ಅರ್ಧ ಡಜನ್ ಸಿನಿಮಾಗಳಿವೆ. ಕನಿಷ್ಠ ಇನ್ನು ಮೂರು ವರ್ಷ ಇನ್ನಿಲ್ಲದಷ್ಟು ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಒಟ್ಟು ಆಸ್ತಿ 50 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News