ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್‌ʼ ಎಂದೇ  ಖ್ಯಾತಿ ಗಳಿಸಿರುವ ಸಾಯಿ ಪಲ್ಲವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರಪೂರ ಶುಭಾಶಯಗಳು ಹರಿದುಬರುತ್ತಿದೆ. ಚಿತ್ರರಂಗದ ಪ್ರಮುಖ ನಾಯಕ ನಟರೊಂದಿಗೆ ಅಭಿನಯಿಸಿರುವ ಪಲ್ಲವಿ ಬಗ್ಗೆ ಇಲ್ಲಿದೆ ಕೊಂಚ ಮಾಹಿತಿ. 


COMMERCIAL BREAK
SCROLL TO CONTINUE READING

ಇದನ್ನು ಓದಿ: Tootu Madike: ‘ತೂತು ಮಡಿಕೆ’ಯಿಂದ ಬಂತು ರೋಮ್ಯಾಂಟಿಕ್ ಸಾಂಗ್


ತಮಿಳುನಾಡಿನ  ಕೊಯಂಬತ್ತೂರಿನ ಕೋಟಗಿರಿಯಲ್ಲಿ 1992ರ ಮೇ 9ರಂದು ಜನಿಸಿದ ಸಾಯಿ ಪಲ್ಲವಿ ಮೂಲತಃ ವೃತ್ತಿಯಲ್ಲಿ ವೈದ್ಯೆ. ಜಾರ್ಜಿಯಾದ  ಟಿಬಿಲಿಸಿ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿಟಿಯಿಂದ 2012ರಲ್ಲಿ ಎಂಬಿಬಿಎಸ್‌ ಪದವಿಯನ್ನು ಪಡೆದಿದ್ದಾರೆ. 


ಮೊದಲ ಬಾರಿಗೆ ಸಾಯಿಪಲ್ಲವಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2015ರಲ್ಲಿ ಬಿಡುಗಡೆಯಾದ ಮಲಯಾಳಂನ ಫೇಮಸ್‌ ಸಿನಿಮಾ ʼಪ್ರೇಮಂʼ ಮೂಲಕ. ಈ ಚಿತ್ರದಲ್ಲಿ ಮಲರ್‌ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ಇವರು ಆ ಬಳಿಕ ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ಒಬ್ಬರಾದರು. ಬಳಿಕ ದುಲ್ಕರ್‌ ಸಲ್ಮಾನ್‌ ಅಭಿನಯದ ಕಾಳಿ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇನ್ನು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಅವರು, ವರುಣ್‌ ತೇಜ ಜೊತೆ ಫಿದಾ ಸಿನಿಮಾದಲ್ಲಿ ಅಭಿನಿಯಿಸಿದರು. ಈ ಚಿತ್ರ ಭರ್ಜರಿ ಸಕ್ಸಸ್‌ ಕಂಡಿತ್ತು. ಇನ್ನು 2018ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಲ್ಲವಿ, ದಿಯಾ ಸಿನಿಮಾದಲ್ಲಿ ಅಭಿನಯಿಸಿದರು. ನಟಿಸಿದ ಎಲ್ಲಾ ಸಿನಿಮಾಗಳು ಭರ್ಜರಿ ಹಿಟ್‌ ಸಾಧಿಸಿದೆ ಎನ್ನಬಹುದು. 


ಇನ್ನು ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ ಶ್ಯಾಮ ಸಿಂಗ್‌ ರಾಯ್‌ ಸಿನಿಮಾದಲ್ಲಿ ಇವರ ಅಭಿನಯ ಎಲ್ಲರ ಮನಗೆದ್ದಿದ್ದಂತು ಸುಳ್ಳಲ್ಲ. ನೃತ್ಯಗಾರ್ತಿಯಾಗಿ, ನಟಿಯಾಗಿ ಜೊತೆಗೆ ಓರ್ವ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಯಿ ಪಲ್ಲವಿಯವರಿಗೆ ಇಂದು 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 


ಮೂರು ಬಾರಿ ಫಿಲ್ಮ್‌ ಫೇರ್‌ ಅವಾರ್ಡ್‌ ಗಳಿಸಿರುವ ಈ ಸುಂದರಿಯ ನೃತ್ಯಕ್ಕೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಯಾವುದೇ ತರಬೇತಿ ಪಡೆಯದೆಯೇ ಈಕೆ ನಾಟ್ಯ ಮಾಡುವ ಶೈಲಿ ಎಲ್ಲರನ್ನು ಅಚ್ಚರಿಗೊಳಿಸುತ್ತದೆ. ಸಾಯಿ ಪಲ್ಲವಿ, 2009ರಲ್ಲಿ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. 


ಇದನ್ನು ಓದಿ: ಬಾಕ್ಸ್ ಆಫೀಸ್ ನಲ್ಲಿ ವಿಕ್ರಾಂತ್ ರೋಣ ಸುನಾಮಿ ಎದುರು ನಿಲ್ಲುತ್ತಾ ಅಜಯ್ ದೇವಗನ್ ಚಿತ್ರ ..?


ದಕ್ಷಿಣ ಭಾರತ ಸಿನಿರಂಗದ ಮಹೋನ್ನತ ಕಲಾವಿದೆ, ನೃತ್ಯಗಾರ್ತಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕೆನ್ನೆ ಮೇಲಿನ ಮೊಡವೆಗಳಿಂದಲೇ ಪಡ್ಡೆ ಹುಡುಗರ ಮನಗೆದ್ದ ಚೆಲುವೆ ಇನ್ನಷ್ಟೂ ಯಶಸ್ಸು ಸಾಧಿಸಲಿ ಎಂಬುದೇ ನಮ್ಮ ಆಶಯ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.