Tootu Madike: ‘ತೂತು ಮಡಿಕೆ’ಯಿಂದ ಬಂತು ರೋಮ್ಯಾಂಟಿಕ್ ಸಾಂಗ್

ತೂತು ಮಡಿಕೆ.. ಕನ್ನಡದಲ್ಲಿ ಹೀಗೊಂದು ಸಿನಿಮಾ ತಯಾರಾಗಿರೋದು ನಿಮಗೆ ಗೊತ್ತಿರಬಹುದು. ಮೋಷನ್ ಪೋಸ್ಟರ್ ಮೂಲಕ ಇಷ್ಟು ದಿನ ಕುತೂಹಲದ ಕೋಟೆ ಕಟ್ಟಿದ್ದ ತೂತು ಮಡಿಕೆ ಅಂಗಳದಿಂದ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಕೇಳುಗರನ್ನು ಮಂತ್ರಮುಗ್ದರನ್ನಾಗಿ ಮಾಡ್ತಿದೆ. 

Written by - Chetana Devarmani | Last Updated : May 8, 2022, 04:56 PM IST
  • ಮೋಷನ್ ಪೋಸ್ಟರ್ ಮೂಲಕ ಕುತೂಹಲ ಕೆರಳಿಸಿದ ಚಿತ್ರ
  • ತೂತು ಮಡಿಕೆ ಅಂಗಳದಿಂದ ರೋಮ್ಯಾಂಟಿಕ್ ಸಾಂಗ್ ರಿಲೀಸ್
  • ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತಿರುವ ಸಿನಿಮಾ
Tootu Madike: ‘ತೂತು ಮಡಿಕೆ’ಯಿಂದ ಬಂತು ರೋಮ್ಯಾಂಟಿಕ್ ಸಾಂಗ್  title=
ತೂತು ಮಡಿಕೆ

ತೂತು ಮಡಿಕೆ.. ಕನ್ನಡದಲ್ಲಿ ಹೀಗೊಂದು ಸಿನಿಮಾ ತಯಾರಾಗಿರೋದು ನಿಮಗೆ ಗೊತ್ತಿರಬಹುದು. ಮೋಷನ್ ಪೋಸ್ಟರ್ ಮೂಲಕ ಇಷ್ಟು ದಿನ ಕುತೂಹಲದ ಕೋಟೆ ಕಟ್ಟಿದ್ದ ತೂತು ಮಡಿಕೆ ಅಂಗಳದಿಂದ ರೋಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಕೇಳುಗರನ್ನು ಮಂತ್ರಮುಗ್ದರನ್ನಾಗಿ ಮಾಡ್ತಿದೆ. 

ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ವಿಕ್ರಾಂತ್ ರೋಣ ಸುನಾಮಿ ಎದುರು ನಿಲ್ಲುತ್ತಾ ಅಜಯ್ ದೇವಗನ್ ಚಿತ್ರ ..?

ಯಾಮಾರಿದೆ ಹೃದಯ ಹಾಡಿಗೆ ಚೇತನ್ ಕುಮಾರ್ ಸಮ್ಮೋಹಕವಾದ ಸಾಹಿತ್ಯ ನೀಡಿದ್ದು, ಸ್ವಾಮಿನಾಥನ್ ಆರ್ ಕೆ ಸಂಗೀತ ಸಂಯೋಜಿಸಿದ್ದು, ಕಂಚಿನ ಕಂಠದ ಗಾಯಕ ವಿಜಯ್ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಗಮನಸೆಳೆಯುತ್ತಿದೆ. 

ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ  ನಂತ್ರ ಮೂಕವಿಸ್ಮಿತ, ಸಿಲಿಕಾನ್ ಸಿಟಿ,  ಕಿಸ್ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ತೂತು ಮಡಿಕೆ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದು, ಜೊತೆಗೆ ಸಿನಿಮಾದ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕಿಯಾಗಿ ಪವನ್ ಗೌಡ ನಾಯಕಿ ನಟಿಸಿದ್ದು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಂತಾದ ಕಲಾಬಳಗ ಸಿನಿಮಾದಲ್ಲಿದೆ. 

ಇದನ್ನೂ ಓದಿ: Happy mother's day: ಅಮ್ಮ ಎಂದರೆ ಅಷ್ಟೇ ಸಾಕೇ?

ಕಾಮಿಡಿ ಥ್ರಿಲ್ಲರ್ ಸಸ್ಪೆನ್ಸ್ ಕಥಾಹೂರಣದ ತೂತುಮಡಿಕೆ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದು, ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News