ಬೆಂಗಳೂರು: ಇತ್ತೀಚಿಗೆ ಹಿಂದಿ ಭಾಷೆಯ ವಿಚಾರವಾಗಿ ಬಾಲಿವುಡ್ ನಟ ದೇವಗನ್ ಗೆ ಟ್ವಿಟ್ಟರ್ ನಲ್ಲಿ ಬೆವರಿಳಿಸಿದ್ದ ನಮ್ಮ ಕಿಚ್ಚ ಸುದೀಪ್ ಗೆ ಈಗ ಅವರು ಬಾಕ್ಸ್ ಆಫೀಸ್ ನಲ್ಲಿಯೂ ಪ್ರತಿಸ್ಪರ್ಧಿಯಾಗುತ್ತಿದ್ದಾರೆ.
ಈಗಾಗಲೇ ಬಾಲಿವುಡ್ ನ ಘಟಾನುಘಟಿ ಚಿತ್ರಗಳು ದಕ್ಷಿಣ ಭಾರತದ ಚಿತ್ರಗಳ ಎದುರು ಮುಗ್ಗರಿಸಿ ಹೋಗಿವೆ, ಇದಕ್ಕೆ ಈಗ ನಿದರ್ಶನ ಎನ್ನುವಂತೆ ಕೆಜಿಎಫ್ ೨ ದಂತಹ ಕನ್ನಡದ ಚಿತ್ರದ ಎದುರು ಜರ್ಸಿ, ಹಿರೋಪಂತಿ 2 ಹಾಗೂ ರನ್ವೇ 34 ದಂತಹ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹೇಳ ಹೆಸರಿಲ್ಲದಂತೆ ಹೋಗಿದ್ದವು.ಈಗ ಕಿಚ್ಚ ಅಭಿನಯದ ವಿಕ್ರಾಂತ್ ರೋಣ ತನ್ನ ಮೇಕಿಂಗ್ ನಿಂದಲೇ ಈಗಾಗಲೇ ದೇಶಾದ್ಯಂತ ಸುದ್ದಿ ಮಾಡುತ್ತಿದೆ, ಕೇವಲ ಭಾರತೀಯ ಭಾಷೆಗಳಷ್ಟೇ ಅಲ್ಲದೆ ಹಾಲಿವುಡ್ ನಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ.ಫ್ಯಾಂಟಸಿ ಥ್ರಿಲ್ಲರ್ ಎಂದು ಹೇಳಲಾಗಿರುವ ಚಿತ್ರ ಈಗಾಗಲೇ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ರಿಲೀಸ್‌ಗೂ ಮುನ್ನ 'ವಿಕ್ರಾಂತ್ ರೋಣ' ರೆಕಾರ್ಡ್! ದಾಖಲೆಯ ಮೊತ್ತಕ್ಕೆ ಮಾರಾಟವಾದ ಮೊದಲ ಕನ್ನಡ ಚಿತ್ರ
ಈ ಹಿನ್ನೆಲೆಯಲ್ಲಿ ಈಗ ಹಿಂದಿ ಭಾಷೆಯ ವಿಚಾರವಾಗಿ ಟ್ವೀಟ್ ಮಾಡಿ ಸುದೀಪ್ ಗೆ ಸವಾಲು ಹಾಕಿದ್ದ ಅಜಯ್ ದೇವಗನ್, ಬಾಕ್ಸ್ ಆಫೀಸ್ ನಲ್ಲಿ ತಮ್ಮ ಥ್ಯಾಂಕ್ ಗಾಡ್ ಚಿತ್ರದ ಮೂಲಕ ಅವರು ವಿಕ್ರಾಂತ್ ರೋಣ ಎನ್ನುವ ಸುನಾಮಿ ಎದುರು ಎದುರಾಗುತ್ತಿದ್ದಾರೆ.ಆದರೆ ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.ಚಿತ್ರದ ಮೇಕಿಂಗ್ ವಿಚಾರದಲ್ಲಿ ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳು ಲಾರ್ಜರ್ ಧ್ಯಾನ್ ಲೈಫ್ ಇಮೇಜ್ ನ್ನು ಕಟ್ಟಿಕೊಡುತ್ತಿವೆ.ಇನ್ನೊಂದೆಡೆಗೆ ಹಿಂದಿ ಚಿತ್ರಗಳಂತೂ ಪೇಲವ ಸ್ಟೋರಿಗಳನೊಂದಿಗೆ ಇಲ್ಲವೇ ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡುವ ಮೂಲಕ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ.
ಇದನ್ನೂ ಓದಿ: ಕೆಜಿಎಫ್ 3 ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆಯೇ ರಾಣಾ ದಗ್ಗುಬಟಿ..?
ಟ್ವಿಟ್ಟರ್ ವಾರ್ ನಂತರ ಈಗ ಕಿಚ್ಚ ಸುದೀಪ್ ಮತ್ತು ದೇವಗನ್ ಬಾಕ್ಸ್ ಆಫೀಸ್ ನಲ್ಲಿ ಜುಲೈ ತಿಂಗಳಲ್ಲಿ ಮುಖಾಮುಖಿಯಾಗುತ್ತಿದ್ದಾರೆ.ಅದರಲ್ಲಿ ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಚಿತ್ರ ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದರೆ, ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಅಜಯ್ ದೇವಗನ್ ಅವರು ಉದ್ದೇಶ ಪೂರ್ವಕವಾಗಿಯೇ ವಿಕ್ರಾಂತ್ ರೋಣ ಎದುರು ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಏನೇ ಆಗಲಿ ಪ್ರೇಕ್ಷಕರು ಮಾತ್ರ ಒಳ್ಳೆಯ ಚಿತ್ರಕ್ಕೆ ಖಂಡಿತಾ ಬೆಂಬಲ ನೀಡುತ್ತಾರೆ, ಅದರಲ್ಲೂ ಇತ್ತೀಚಿನ ದಕ್ಷಿಣ ಭಾರತದ ಸಿನಿಮಾಗಳಾದ ಆರ್.ಆರ್.ಆರ್, ಕೆಜಿಎಫ್ ೨ ಮತ್ತು ಪುಷ್ಪಾದಂತಹ ಚಿತ್ರಗಳು ಹಿಂದಿ ಬೆಲ್ಟ್ ನಲ್ಲಿಯೂ ಯಶಸ್ವಿಯಾಗಿರುವುದೇ ಇದಕ್ಕೆ ಸಾಕ್ಷಿ.
ಈಗ ನಮ್ಮ ಕನ್ನಡದ ವಿಕ್ರಾಂತ್ ರೋಣ ಕೂಡ ಹಾಗೇ ಭಾರತೀಯ ಸಿನಿಮಾದಲ್ಲಿ ಮತ್ತೊಂದು ಛಾಪನ್ನು ಮೂಡಿಸಲಿ ಎಂದು ನಾವೆಲ್ಲಾ ಆಶಿಶೋಣ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.