ಬೆಂಗಳೂರು :  ಕರೋನಾ (Coronavirus) ಮಹಾಮಾರಿ ಹರಡುತ್ತಿರುವ  ಈ ಕಾಲದಲ್ಲಿ ಮಾನವೀಯತೆ ಮರೆತಂತೆ ವರ್ತಿಸುವ ಜನರನ್ನು ನೋಡಿ ಚಿತ್ರ ನಟ ಜಗ್ಗೇಶ್ (Jaggesh)  ಗುಡುಗಿದ್ದಾರೆ. ಕರೋನಾ ರಕ್ಕಸನಿಂದಾಗಿ ಸಮಾಜದಲ್ಲಿ ಉಂಟಾಗುತ್ತಿರುವ ತಲ್ಲಣ ಕಂಡು ಬೇಸರ ವ್ಯಕ್ತ ಪಡಿಸಿರುವ ಜಗ್ಗೇಶ್, ಇಂಥ ಕಠಿಣ ಸನ್ನಿವೇಶದಲ್ಲಿ ಸ್ವಾರ್ಥ ಮರೆಯೆತ್ತಿರುವರ ವಿರುದ್ದ ತೀವ್ರ  ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಸಮಾಜದ ಒಳಿತು ಕೆಡುಕುಗಳ ತಮ್ಮದೇ ದೃಷ್ಟಿಕೋನದಲ್ಲಿ ಜಗ್ಗೇಶ್ (Jaggesh) ಪ್ರತಿಕ್ರಿಯಿಸುತ್ತಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಮನದಿಂಗಿತವನ್ನು ಹರಿಯಬಿಡುತ್ತಾರೆ. ಟ್ವೀಟರ್ ನಲ್ಲಿ (Twitter) ಜನರ ಜೊತೆ ಸಂವಹನ ನಡೆಸುವ  ಈ ನವರಸ ನಾಯಕ, ಇದೀಗ ಕರೋನಾ ನೆರಳಿನಡಿ ನಡೆಯುವ ಅಮಾನವೀಯತೆಯ ವಿರುದ್ದ ಮಾತಾಡಿದ್ದಾರೆ. 


ಇದನ್ನೂ ಓದಿ ಮಾಲ್ಡೀವ್ಸ್ ನಲ್ಲಿ ಮಸ್ತಿ ಮಾಡುವ ನಟ ನಟಿಯರಿಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು ?


ತಿನ್ನಲು ಅನ್ನಸಿಗದೆ ಸಾಯುತ್ತೀರಿ!ಜಗ್ಗೇಶ್ ಟ್ವೀಟ್ 
ಕರೋನಾ (COVID-19) ಸನ್ನಿವೇಶವನ್ನು ನೋಡಿ ನೊಂದಿರುವ ಜಗ್ಗೇಶ್ ಹೀಗೆ ಟ್ವೀಟ್ ಮಾಡಿದ್ದಾರೆ. “ ಕೋವಿಡ್ ಸಂತ್ರಸ್ತರು ನೊಂದು Tvಲಿ ಮಾತಾಡಿದ್ದು ನೋಡಿ ಸಂಕಟವಾಯ್ತು! ಆಸ್ಪತ್ರೆ, ಆಂಬುಲೆನ್ಸ್, ಔಷಧಿ ಅಂಗಡಿ,ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ, ನೊಂದವರ ಪೀಡಿಸಬೇಡಿ. ತಿನ್ನಲು ಅನ್ನಸಿಗದೆ ಸಾಯುತ್ತೀರಿ! ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ! ಸತ್ತರೆ ಹಣಬರೋಲ್ಲಾ ಪಾಪಪುಣ್ಯ ಮಾತ್ರ ನಮ್ಮಹಿಂದೆ ಬರೋದು! ದೇವನೊಬ್ಬನಿರುವ ಎಲ್ಲ ನೋಡುತಿರುವ ಎಂದು ತೀವ್ರವಾದ ಆಕ್ರೋಶವನ್ನು ಹೊರಗೆ ಹಾಕಿದ್ದಾರೆ. 


Tweet) ಮಾಡಿರುವ ಜಗ್ಗೇಶ್, ‘’ಇಂಥ ಸಮಯದಲ್ಲೆ ಇಂಥ ಕ್ರೂರಿಗಳು active ಆಗೋದು! ಇಂಥ ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ, ನಾನು ಇಷ್ಟು ನೊಂದದ್ದು ಇತ್ತೀಚಿನ ಈ ಕ್ರೂರ ವರ್ತನೆಯಿಂದ! ನನಗೆ ಅರಿಯದಂತೆ ಕೆಟ್ಟಬೈಗುಳ ಕೋಪ ಅನಾವಶ್ಯಕ ಬರುತ್ತಿದೆ! ತಪ್ಪು ಎಂದು ನನ್ನ ನಾನೆ ಸರಿಪಡಿಸಿಕೊಳ್ಳುತ್ತಿರುವೆ!. ಇಂಥ ದಿನಗಳ ಎಣಿಸಲಿಲ್ಲಾ ನಾನು horrible’’ ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ ಜಗ್ಗೇಶ್. 


Dr Rajkumar: ಇಂದಿರಾಗಾಂಧಿ ವಿರುದ್ಧ ಚುನಾವಣೆಗೆ ನಿಲ್ಲಲು ಡಾ.ರಾಜಕುಮಾರ್ ನಿರಾಕರಿಸಿದ್ದು ಹೇಗೆ ?


ಕೋವಿಡ್ ಹಿನ್ನೆಲೆಯಲ್ಲಿ ಜನರನ್ನು ಲೂಟಿ ಮಾಡುವ ಜನರನ್ನು ಕಂಡು ಜಗ್ಗೇಶ್ ಈ ಮಾತುಗಳನ್ನಾಡಿದ್ದಾರೆ. ಜಗ್ಗೇಶ್ ಮಾತುಗಳಿಗೆ ಜನ ಸ್ಪಂದಿಸುತ್ತಿದ್ದು, ಟ್ವೀಟ್ ಗಳು ವೈರಲ್ ಆಗುತ್ತಿವೆ. ಜೊತೆಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.