ಬೆಂಗಳೂರು : ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಸಿನಿಮಾದ ಹಾಡು ಕರುನಾಡಿನಾದ್ಯಂತ ಸಖತ್‌ ಸದ್ದು ಮಾಡುತ್ತಿದೆ. 'ಟ್ರೇಡ್ ಮಾರ್ಕ್' ಹಾಡು 10 ಮಿಲಿಯನ್‌ ಗಡಿಯತ್ತ ನುಗ್ಗುತ್ತಿದ್ದು, ಅಭಿಮಾನಿಗಳ ಅಭಿಮಾನ ಕ್ಷೀರ ಸಾಗರದಂತೆ ಹರಿಯುತ್ತಿದೆ.


COMMERCIAL BREAK
SCROLL TO CONTINUE READING

ಅಪ್ಪು ಅಂದ್ರೆ ಸ್ಮೈಲ್‌, ಅಪ್ಪು(Puneeth Rajkumar) ಅಂದ್ರೆ ಸ್ಟೈಲ್..‌ ಹಾಗೇ ಅಪ್ಪು ಅಂದ್ರೆ ಡಾನ್ಸ್‌ ಅಂತಾ ಅಭಿಮಾನಿಗಳು 'ಟ್ರೇಡ್ ಮಾರ್ಕ್' ಹಾಡನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಯುಟ್ಯೂಬ್‌ನಲ್ಲಿ ನಿನ್ನೆಯಿಂದಲೂ 'ಟ್ರೇಡ್ ಮಾರ್ಕ್' ಸಾಂಗ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ.


ಇದನ್ನೂ ಓದಿ : ರಹಸ್ಯವಾಗಿ ಮದುವೆಯಾಗ್ತಾ ಇದ್ದಾರಾ ಸಲ್ಮಾನ್ ಖಾನ್- ಸೋನಾಕ್ಷಿ ಸಿನ್ಹಾ..?


 ಸ್ಟಾರ್‌ಗಳ ಸಂಗಮ..!


ಜೇಮ್ಸ್(james Film) ಗ್ಲಿಂಪ್ಸ್ ಜೊತೆ ಲಿರಿಕಲ್ ಸಾಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ರಮೋಷನಲ್ ಸಾಂಗ್ ನಲ್ಲಿ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀ ಲೀಲಾ ಹೆಜ್ಜೆ ಹಾಕಿದ್ದಾರೆ. ಹಾಗೇ ಚರಣ್ ರಾಜ್, ಚಂದನ್ ಶೆಟ್ಟಿ, ಕೋರಿಯೋಗ್ರಫರ್ ಮೋಹನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾಗೆ ಹಲವು ಸ್ಟಾರ್‌ ಸಿಂಗರ್ಸ್‌ ಹಾಗೂ ನಟ, ನಟಿಯರು ಸಾಥ್‌ ನೀಡಿದಂತಾಗಿದೆ.


ಈಗಾಗಲೇ 'ಜೇಮ್ಸ್' ಚಿತ್ರದ ಸಾಂಗ್‌(james Film Song), ಟೀಸರ್‌ ಸೂಪರ್‌ ಹಿಟ್‌ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಜನರು 'ಜೇಮ್ಸ್' ಬಿಡುಗಡೆಗಾಗಿ ಕಾಯುತ್ತಿದ್ದು, ಮಾರ್ಚ್‌ 17ರಂದು ಅಂದರೆ ಅಪ್ಪು ಹುಟ್ಟುಹಬ್ಬದ ದಿನವೇ ಸಿನಿಮಾ ರಿಲೀಸ್‌ ಆಗಲಿದೆ.


ಇದನ್ನೂ ಓದಿ : ‘ಕಿಚ್ಚ’ ಫ್ಯಾನ್ಸ್‌ಗೆ ಗುಡ್ ನ್ಯೂಸ್..!; ‘ವಿಕ್ರಾಂತ್ ರೋಣ’ ರಿಲೀಸ್ ಯಾವಾಗ..?


ಈ ನಡುವೆ 'ಜೇಮ್ಸ್' ಪ್ರೀ ರಿಲೀಸ್‌ ಇವೆಂಟ್‌ಗೆ ಭರ್ಜರಿ ಸಿದ್ಧತೆ ಸಾಗಿದ್ದು, ಪ್ರೀ ರಿಲೀಸ್‌(james pre release) ಇವೆಂಟ್‌ಗೆ ಟಾಲಿವುಡ್‌ ಸೇರಿದಂತೆ ಹಲವು ಚಿತ್ರರಂಗಗಳ ಸ್ಟಾರ್‌ ನಟರನ್ನು ಆಹ್ವಾನಿಸಲಾಗಿದೆ. ಹೊಸಪೇಟೆಯಲ್ಲಿ 'ಜೇಮ್ಸ್' ಪ್ರೀ ರಿಲೀಸ್‌ ಇವೆಂಟ್‌ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.