‘ಕಿಚ್ಚ’ ಫ್ಯಾನ್ಸ್‌ಗೆ ಗುಡ್ ನ್ಯೂಸ್..!; ‘ವಿಕ್ರಾಂತ್ ರೋಣ’ ರಿಲೀಸ್ ಯಾವಾಗ..?

ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಅಪ್‌ಡೇಟ್‌ ಬಗ್ಗೆ ಮ್ಯಾಪ್‌ ಮೂಲಕ ಮಾಹಿತಿ ನೀಡಿರುವ ನಿರ್ದೇಶಕ ಅನೂಪ್ ಭಂಡಾರಿ, ಎಲ್ಲವನ್ನೂ ವಿವರಿಸಿದ್ದಾರೆ.

Written by - Malathesha M | Edited by - Puttaraj K Alur | Last Updated : Mar 2, 2022, 07:59 PM IST
  • ಪೋಸ್ಟರ್‌ ಹಾಗೂ ಟೀಸರ್‌ ಮೂಲಕ ‘ವಿಕ್ರಾಂತ್ ರೋಣ’ ಸಖತ್‌ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದೆ
  • ಫ್ಯಾಂಟಸಿ ಮತ್ತು ಅಡ್ವೆಂಚರ್ ಮೂವಿ ಕುರಿತು ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌
  • ಚಿತ್ರದ ಅಪ್‌ಡೇಟ್‌ ಬಗ್ಗೆ ಮ್ಯಾಪ್‌ ಮೂಲಕ ಮಾಹಿತಿ ನೀಡಿದ ನಿರ್ದೇಶಕ ಅನೂಪ್ ಭಂಡಾರಿ
‘ಕಿಚ್ಚ’ ಫ್ಯಾನ್ಸ್‌ಗೆ ಗುಡ್ ನ್ಯೂಸ್..!; ‘ವಿಕ್ರಾಂತ್ ರೋಣ’ ರಿಲೀಸ್ ಯಾವಾಗ..?  title=
ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌

ಬೆಂಗಳೂರು: ಕೊರೊನಾ(CoronaVirus) ಸಾಂಕ್ರಾಮಿಕದ ಸಂಕಷ್ಟ ದೂರವಾದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಇದೀಗ ಕಿಚ್ಚ ಸುದೀಪ್‌(Kiccha Sudeep) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಇಷ್ಟು ದಿನ ಕನ್ನಡಿಗರ ಪಾಲಿನ  ಪ್ರೀತಿಯ ಕಿಚ್ಚ ಅಭಿನಯದ ‘ವಿಕ್ರಾಂತ್ ರೋಣ’ ರಿಲೀಸ್‌ ಡೇಟ್‌ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಇವತ್ತು ಸಿನಿಮಾ ರಿಲೀಸ್‌ ಬಗ್ಗೆ ಹಿಂಟ್‌ ಕೊಟ್ಟಿದ್ದಾರೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ.

ಹೌದು, ಈಗಾಗಲೇ ಟೀಸರ್‌ ಮೂಲಕ ಹವಾ ಎಬ್ಬಿಸಿರುವ ‘ವಿಕ್ರಾಂತ್ ರೋಣ’(Vikrant Rona)ಇದೀಗ ರಿಲೀಸ್‌ಗೆ ರೆಡಿಯಾಗಿದೆ. ದೇಶಾದ್ಯಂತ ಪೋಸ್ಟರ್‌ ಹಾಗೂ ಟೀಸರ್‌ ಮೂಲಕ ‘ವಿಕ್ರಾಂತ್ ರೋಣ’ ಸಖತ್‌ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದೆ. ಹೀಗಾಗಿ ಕಿಚ್ಚನ ಕೋಟಿ ಕೋಟಿ ಅಭಿಮಾನಿಗಳು ಈ ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರು. ಆ ಎಲ್ಲಾ ಕುತೂಹಲಗಳಿಗೆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಇಂದು ಹಿಂಟ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಪ್ಪು ಹಾಡಿನ ಎದುರು ದಾಖಲೆಗಳು ಧೂಳ್..‌ ಧೂಳ್..!‌

ಮ್ಯಾಪ್‌ ಮೂಲಕ ಮಾಹಿತಿ..!

ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಅಪ್‌ಡೇಟ್‌ ಬಗ್ಗೆ ಮ್ಯಾಪ್‌(Promotional Tour Map) ಮೂಲಕ ಮಾಹಿತಿ ನೀಡಿರುವ ನಿರ್ದೇಶಕ ಅನೂಪ್ ಭಂಡಾರಿ(Anup Bhandari), ಎಲ್ಲವನ್ನೂ ವಿವರಿಸಿದ್ದಾರೆ. ಈಗಾಗಲೇ ಚಿತ್ರ ರಿಲೀಸ್‌ ಮಾಡೋದಕ್ಕೆ ಹಲವು ಪ್ಲ್ಯಾನ್‌ ಮಾಡಿಕೊಂಡಿದೆ ‘ವಿಕ್ರಾಂತ್ ರೋಣ’ ಚಿತ್ರತಂಡ. ಅಂದಹಾಗೆ ಟೀಸರ್‌ನಲ್ಲಿ ಬಳಕೆಯಾಗಿದ್ದ ‘ಗುಮ್ಮ ಬಂದ ಗುಮ್ಮ’ ಹಾಡು ಮೊದಲು ರಿಲೀಸ್‌ ಆಗಿಲಿದೆ. ಈಗಾಗಲೇ ‘ಗುಮ್ಮ ಬಂದ ಗುಮ್ಮ’ ಹಾಡು ಸಖತ್ ಹವಾ ಎಬ್ಬಿಸಿದೆ. ಈ ಹಾಡಿನ ಬಳಿಕ ‘ಚಿಕ್ಕಿ ಬೊಂಬೆ’ ಸಾಂಗ್‌ ರಿಲೀಸ್‌ ಆಗಲಿದೆಯಂತೆ.

ಒಟ್ಟಾರೆ ಅಭಿನಯ ಚಕ್ರವರ್ತಿ ಸುದೀಪ್‌ ಸಿನಿಮಾ ‘ವಿಕ್ರಾಂತ್ ರೋಣ’ (Fantasy Adventure Film)ಬಗ್ಗೆ ಇವತ್ತು ಬಿಗ್‌ ಅಪ್‌ಡೇಟ್‌ ಸಿಕ್ಕಿದ್ದು, ಅಭಿಮಾನಿಗಳಿಗೆ ಹಲವು ಸರ್ಪ್ರೈಸ್‌ ನೀಡಲು ಸಿನಿಮಾ ತಂಡ ಮುಂದಾಗಿದೆ. ಇದು ‘ವಿಕ್ರಾಂತ್ ರೋಣ’ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದ್ದು, ಸುದೀಪ್‌ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಪವರ್ ಸ್ಟಾರ್ ಹಾಡು ಮೆಚ್ಚಿದ ಕನ್ನಡಿಗರು..! ಎಷ್ಟು ವೀವ್ಸ್ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News