ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಗೌತಮಿ ಜಾಧವ್ ಪತಿ ಯಾರು ಗೊತ್ತಾ? ಇವರೂ ಕೂಡ ಕನ್ನಡ ಸಿನಿರಂಗದ ಫೇಮಸ್ ಸೆಲೆಬ್ರಿಟಿ... ಹೆಸರು ಕೇಳಿದ್ರೆ ಇವ್ರಾ? ಅಂತ ಹೇಳೋದು ಗ್ಯಾರಂಟಿ
Gautami Jadhav Husband: ಈ ಬಾರಿಯ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ʼಸತ್ಯʼ ಧಾರಾವಾಹಿಯ ಸತ್ಯ ಪಾತ್ರಧಾರಿ ಗೌತಮಿ ಜಾಧವ್ ಆಯ್ಕೆಯಾಗಿದ್ದಾರೆ. ಇವರು ಆಯ್ಕೆಯಾದ ಬೆನ್ನಲ್ಲೇ ಇವರ ಹಿನ್ನೆಲೆ ಬಹಳಷ್ಟು ಸುದ್ದಿಯಾಗಿದೆ.
Gautami Jadhav husband Abhishek Kasaragod: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಒಂದು ದಿನ ಮುಂಚಿತವಾಗಿಯೇ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಆಗಿದೆ. ಬಹುದಿನಗಳಿಂದ ಕಾಯುತ್ತಿದ್ದ ಕನ್ನಡ ಪ್ರಖ್ಯಾತ ರಿಯಾಲಿಟಿ ಶೋ ನಾಳೆಯಿಂದ ಅಂದರೆ ಸೆಪ್ಟೆಂಬರ್ 29 ರಿಂದ ಪರದೆ ಮೇಲೆ ಬರಲಿದೆ.
ಇದನ್ನೂ ಓದಿ: BBK 11 : ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಗೌತಮಿ..! ಡೇರ್ ಡೇವಿಲ್ ಸುಂದರಿಯ ಹಿಸ್ಟರಿ ಗೊತ್ತೆ..?
ಅಂದಹಾಗೆ ಈ ಬಾರಿಯ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ʼಸತ್ಯʼ ಧಾರಾವಾಹಿಯ ಸತ್ಯ ಪಾತ್ರಧಾರಿ ಗೌತಮಿ ಜಾಧವ್ ಆಯ್ಕೆಯಾಗಿದ್ದಾರೆ. ಇವರು ಆಯ್ಕೆಯಾದ ಬೆನ್ನಲ್ಲೇ ಇವರ ಹಿನ್ನೆಲೆ ಬಹಳಷ್ಟು ಸುದ್ದಿಯಾಗಿದೆ. ಅದರಲ್ಲೂ ಅವರ ಪತಿಯ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಗೌತಮಿ ಜಾಧವ್ ಅವರ ಪತಿ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ನಟಿ ಗೌತಮಿ ಜಾಧವ್ ಅವರ ಪತಿ ಹೆಸರು ಅಭಿಷೇಕ್ ಕಾಸರಗೋಡ್. ಇವರು ಸಿನಿಮಾಟೋಗ್ರಾಫರ್ ಆಗಿದ್ದು, ಇತ್ತೀಚೆಗೆ ತೆರೆಕಂಡ ನಟ ವಿನಯ್ ರಾಜ್‌ಕುಮಾರ್ ಅಭಿನಯದ ʼಪೆಪೆʼ ಸಿನಿಮಾದ ಸಿನಿಮಾಟೋಗ್ರಫಿ ಮಾಡಿದ್ದು ಇವರೇ. ಇದಷ್ಟೇ ಅಲ್ಲದೆ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ, ಮಾಯಾಬಜಾರ್, ಕೃಷ್ಣ ಟಾಕೀಸ್ ಎಂಬ ಕನ್ನಡ ಪ್ರಮುಖ ಸಿನಿಮಾಗಳಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
ಇದಷ್ಟೇ ಅಲ್ಲದೆ, ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪಡೆದ ಅಭಿಷೇಕ್ ಕಾಸರಗೋಡು ಅವರು 'ಸೂಪರ್', 'ಪೊರ್ಕಿ', 'ಜಂಗ್ಲಿ' ಮತ್ತು 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಮುಂತಾದ ಚಲನಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಎಷ್ಟೊಂದು ಸಖತ್ ಆಗಿದೆ ಗೊತ್ತೇ ಈ ಬಾರಿಯ ಬಿಗ್ ಬಾಸ್ ಮನೆ! ಹಿಂದಿನ ಸೀಸನ್‌ಗಿಂತಲೂ ಸೂಪರ್...
ಕಾಮಿಡಿ-ಥ್ರಿಲ್ಲರ್ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಮೂಲಕ ಅಭಿಷೇಕ್ ಸ್ವತಂತ್ರ ಸಿನಿಮಾಟೋಗ್ರಾಫರ್ ಆಗಿ ಪಾದಾರ್ಪಣೆ ಮಾಡಿದರು. ಅವರ ಇತರ ಪ್ರಾಜೆಕ್ಟ್‌ಗಳಲ್ಲಿ ಕನ್ನಡ ಚಲನಚಿತ್ರಗಳಾದ 'ಕಿನಾರೆ', 'ಅನಂತು v/s ನುಸ್ರತ್', 'ಕೃಷ್ಣ ಟಾಕೀಸ್, ಮತ್ತು ವಿಜಯಾನಂದ ನಿರ್ದೇಶನದ ಹಾರರ್-ಥ್ರಿಲ್ಲರ್ ಚಲನಚಿತ್ರ ಸೇರಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.