BBK 11 : ಬಿಗ್‌ ಬಾಸ್‌ ಸೀಸನ್‌ 11ರ ಮೊದಲ ಸ್ಪರ್ಧಿ ಗೌತಮಿ..! ಡೇರ್‌ ಡೇವಿಲ್‌ ಸುಂದರಿಯ ಹಿಸ್ಟರಿ ಗೊತ್ತೆ..?

Bigg Boss Kannada Season 11 Contestants list : ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ಮೊದಲ ಸ್ಪರ್ಧಿಯ ಹೆಸರು ರಿವೀಲ್‌ ಆಗಿದೆ. ಇಷ್ಟು ದಿನ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಘಳಿಗೆ ಹತ್ತಿರ ಬಂದಿದ್ದು, ಇದೀಗ ʼಸತ್ಯʼ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾಧವ್‌ ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.. ಹಾಗಿದ್ರೆ ಯಾರು ಈ ಗೌತಮಿ, ಇವರ ಪತಿ ಯಾರು, ಹಿನ್ನೆಲೆ ಏನು..? ಬನ್ನಿ ನೋಡೋಣ..

1 /7

ಕನ್ನಡಿಗರ ನೆಚ್ಚಿನ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಸತ್ಯ’ ಧಾರಾವಾಹಿಯಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟಿ ಗೌತಮಿ ಜಾಧವ್ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.  

2 /7

ಗೌತಮಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1993ರ ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ ಚಿತ್ರರಂಗ ಖ್ಯಾತ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಇವರ ಪತಿ.  

3 /7

2018ರಲ್ಲಿ ತೆರೆಕಂಡ ʼಕಿನಾರೆʼ ಸಿನಿಮಾದ ಮೂಲಕ ಗೌತಮಿ ಜಾಧವ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕೆಲವು ತೆಲುಗು ಚಿತ್ರಗಳಲ್ಲಿಯೂ ಇವರು ನಟಿಸಿದ್ದಾರೆ.  

4 /7

2020ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ 'ಸತ್ಯ' ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟರು. ಈ ಧಾರಾವಾಹಿ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.   

5 /7

ಇತ್ತೀಚೆಗಷ್ಟೇ ‘ಸತ್ಯ’ ಸೀರಿಯಲ್‌ ಮುಕ್ತಾಯ ಕಂಡಿತು. ಈ ಧಾರಾವಾಹಿಯಲ್ಲಿ ಟಾಮ್ ಬಾಯ್‌ ಮತ್ತು ಡೇರ್‌ ಡೆವಿಲ್‌ ಲುಕ್‌ನಲ್ಲಿ ಕಾಣಿಸಿಕೊಂಡು ಕಿರುತೆರೆ ಲೋಕದಲ್ಲಿ ಗೌತಮಿ ಕಮಾಲ್‌ ಮಾಡಿದ್ದರು.  

6 /7

ಗೌತಮಿ ‘ಲೂಟಿ’, ‘ಆದ್ಯಾ’, ‘ಕಿನಾರೆ’ ಸೇರಿದಂತೆ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಚಿತ್ರವೊಂದರಲ್ಲೂ ಅಭಿನಯಿಸಿದ್ದಾರೆ.. ಗೌತಮಿ ಜಾಧವ್‌ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು ಕನ್ನಡದ ‘ಸತ್ಯ’ ಸೀರಿಯಲ್‌.  

7 /7

ಇನ್ನು ‘ಕಿನಾರೆ’ ಶೂಟಿಂಗ್ ವೇಳೆ ಕ್ಯಾಮರಾಮ್ಯಾನ್ ಅಭಿಷೇಕ್ ಕಾಸರಗೋಡು ಜೊತೆ ಗೌತಮಿ ಸ್ನೇಹವಾಗಿ, ಪ್ರೀತಿ ಚಿಗುರಿತ್ತು. ಕುಟುಂಬಸ್ಥರ ಒಪ್ಪಿಗೆ ಮೆರೆಗೆ ಡಿ.31, 2019 ರಂದು ಗೌತಮಿ ಜಾಧವ್ - ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.