Bigg boss kannada​ : ಬಿಗ್ ಬಾಸ್ ಕನ್ನಡ ಸೀಸನ್‌ 10 ದಿನದಿಂದ ದಿನಕ್ಕೂ ಹಲವಾರು ಕುತೂಹಲಕ್ಕೆ ಕಾರಣವಾಗುತ್ತಿದೆ. ಮೊನ್ನೆಯವರೆಗೂ ಜೋಡಿ ಹಕ್ಕಿಗಳಂತೆ ಇದ್ದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಬೆಂಕಿ ಭುಗಿಲೆದ್ದಿದೆ. ವಿನಯ್‌ ಗೌಡ ತಂಡ ಸೇರಿರುವ ಸಂಗೀತಾ ಕಾರ್ತಿಕ್ ಅವರನ್ನು ಬದ್ಧ ವೈರಿಗಳಂತೆ ಕಾಣುತ್ತಿದ್ದಾರೆ. ಇದೀಗ ವಿನಯ್‌ ಬಗ್ಗೆ ಒಳ್ಳೆಯ ಮಾತನಾಡುವ ಮೂಲಕ ಕಾರ್ತಿಕ್ ಮಹೇಶ್‌ಗೆ ಶಾಕ್‌ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಕಳೆದ ವಾರ ಸಂಗೀತಾ ಮತ್ತು ಕಾರ್ತಿಕ್ ಜೊಡಿ ನೋಡಿ ಪ್ರೇಕ್ಷಕರು, ಗೆಳೆಯರು ಅಂದ್ರೆ ಹೀಗೆ ಇರ್ಬೇಕಪ್ಪ ಅಂತ ಹೇಳಿಕೊಳ್ಳುತ್ತಿದ್ದರು. ಆದ್ರೆ ಯಾವಾಗ ಸಂಗೀತಾ ವಿನಯ್‌ ಗೌಡ ಗುಂಪು ಸೇರಿಕೊಂಡು ಕಾರ್ತಿಕ್ ತಲೆ ಬೊಳಿಸಿದ್ರೋ ಅವಾಗಿನಿಂದ ಪ್ರೇಕ್ಷಕರು ಅವರ ಮೇಲೆ ಕೋಪಗೊಂಡಿದ್ದಾರೆ.


ಇದನ್ನೂ ಓದಿ: ನಟ ರಣಬೀರ್‌ ಟ್ಯಾಟೂ ನೋಡಿ ಶಾಕ್‌ ಆದ ಫ್ಯಾನ್ಸ್‌..! ಸಖತ್‌ ವೈರಲ್‌ ಆಗ್ತಿದೆ ಈ ವಿಡಿಯೋ


ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ವಿನಯ್‌ಗೌಡ ಹೊಸ ಹೊಸ ಆಟ ಶುರು ಮಾಡಿದ್ದು, ಕಾರ್ತಿಕ್ ಉರಿಸೋಕೆ ಸಂಗೀತಾ ಜೊತೆ ತುಂಬಾ ಕ್ಲೋಸ್‌ ಆಗುತ್ತಿದ್ದಾರೆ. ಇಂದು ಕಿಚ್ಚನ ಪಂಚಾಯಿತಿ ನಡೆಯಲಿದೆ. ಈಗಾಗಲೇ ಈ ಕುರಿತ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ಸಂಗೀತಾ ವಿನಯ್‌ನ ಹೊಗಳಿರುವ ಮಾತುಗಳಿವೆ.



ಯಸ್‌... ವಾರದ ಕತೆ ಕಿಚ್ಚನ ಜೊತೆ ಶೋಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಈ ವಾರದಲ್ಲಿ ಮನೆಯಲ್ಲಿ ನಡೆದ ಸರಿ ತಪ್ಪುಗಳನ್ನು ಕಿಚ್ಚ ಸುದೀಪ್‌ ತೂಗಿ ನೋಡಿ ಸರಿಯಾದ ತೀರ್ಪು ನೀಡಲಿದ್ದಾರೆ. ಈ ಕುರಿತು ಪ್ರೋಮೋ ಬಿಡಗಡೆಯಾಗಿದ್ದು, ಮನೆ ಮಂದಿಗೆ ಹೆಚ್ಚಾಗಿ ಸಂಗೀತಾಗೆ ಕಿಚ್ಚ ನೀತಿ ಪಾಠ ಮಾಡಲಿದ್ದಾರೆ ಎಂದು ಗೊತ್ತಾಗುತ್ತದೆ.


ಇದನ್ನೂ ಓದಿ:ಅವಳಿಗಾಗಿ ತಮ್ಮ ನೆಚ್ಚಿನ ಮನೆ ಬಿಟ್ಟುಕೊಟ್ಟ ನಟ ಅಮಿತಾಬ್ ಬಚ್ಚನ್..! ಕಾರಣ ಏನು..?


ಪ್ರೋಮೋದಲ್ಲಿ, ಆ ವಾರ ಕಾರ್ತಿಕ್ ಜೊತೆಗೆ ಈ ವಾರ ವಿನಯ್‌ ಜೊತೆಗೆ, ಎನ್‌ ಡಿಫರೆನ್ಸ್ ಅನಿಸುತ್ತೆ ಸಂಗೀತಾ ಅವರೆ ಎಂಬ ಕಿಚ್ಚನ ಮಾತಿಗೆ, ಸಂಗೀತಾ.. ವಿನಯ್‌ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ, ವೇರಿ ಕೂಲ್‌ ಆಗಿದ್ದಾನೆ ಅನಿಸುತ್ತೆ. ಕಾರ್ತಿಕ್‌ ಪ್ರತಿ ಸರಿ ನಾನು ಅವರ ಜೊತೆ ಜಗಳ ಮಾಡೋಕೆ ಬರ್ತೀದಿನಿ ಅಂತ ತಿಳ್ಕೋತಾರೆ ಅಂತ ಉತ್ತರ ಕೊಟ್ಟಿದ್ದು, ಕಾರ್ತಿಕ್‌ಗೆ ಶಾಕ್‌ ನೀಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.