BBK 10 : ತುಕಾಲಿ ಸಂತು ಚಡ್ಡಿ ನೋಡಿ ಬಿಗ್ಬಾಸ್ ಕ್ಯಾಮರಾಮೆನ್ ಆಸ್ಪತ್ರೆಗೆ ದಾಖಲು..!
Bigg Boss tukali Santhosh : ಕಿಚ್ಚ ತುಂಬಾ ಕೂಲ್ ಆಗಿದ್ದಾರೆ. ದೊಡ್ಮನೆ ಮಂದಿಗೆ ಜೊತೆ ಫನ್ನಿ ಫನ್ನಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಬಿಗ್ಹೌಸ್ನಲ್ಲಿ ತುಂಬಾ ಕ್ಲೀನ್ ಯಾರು ಎನ್ನುವ ವಿಚಾರ ಬಂದಾಗ ತುಕಾಲಿ ಸಂತು ಹೆಸರು ಬರುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ನೋ.. ನೋ.. ಅಂತ ಬೋರ್ಡ್ ತೋರಿಸಿದರು.
Bigg Boss Kannada Season 10 : ಬಿಗ್ಬಾಸ್ ಕನ್ನಡ ಸೀಸನ್ 10 ಶೋನ ಮೊದಲ ವೀಕೆಂಡ್ ಸಂಚಿಕೆ ತುಂಬಾ ಇಂಟ್ರಸ್ಟಿಂಗ್ ಆಗಿತ್ತು. ಇಂದು ಎರಡನೇ ದಿನದ ಶೋ ಸಖತ್ ಕ್ಯೂರಿಯಾಸಿಟಿಯಾಗಿದೆ ಅಂತ ಪ್ರೋಮೊ ನೋಡಿದ್ರೆ ಗೊತ್ತಾಗುತ್ತೆ. ಮನೆ ಮಂದಿಯ ಸರಿ ತಪ್ಪುಗಳನ್ನು ಆಲಿಸುತ್ತಿರುವ ಕಿಚ್ಚ ಸುದೀಪ್ ನಿತಿ ಪಾಠದ ಜೊತೆಗೆ ಒಂದಿಷ್ಟು ಫನ್ ಕೂಡ ಮಾಡುತ್ತಿದ್ದಾರೆ. ಇದೇ ವೇಳೆ ತುಕಾಲಿ ಸಂತು ಚಡ್ಡಿ ವಿಚಾರವೂ ಸಹ ಪ್ರಸ್ತಾಪವಾಗಿದೆ.
ಹೌದು.. ಜಗಳ, ಪ್ರೀತಿ, ದ್ವೇಷ ದೊಡ್ಮನೆಯಲ್ಲಿ ಹರಿದಾಡುತ್ತಿದೆ. ಸ್ಪರ್ಧಿಗಳು ಪರಸ್ಪರ ದೋಷಾರೋಪಗಳನ್ನು ಮಾಡುತ್ತಿದ್ದಾರೆ. ನಿನ್ನೆ ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ಗೆ ಕಿಚ್ಚ ಬೆಂಬಲ ನೀಡಿ ಮನೆಮಂದಿಗೆ ನೀತಿ ಪಾಠ ಮಾಡಿದರು. ಅಲ್ಲದೆ ಪ್ರತಾಪ್ ನಗುವಿಗೆ ಸುದೀಪ್ ಕಾರಣವಾದ್ರು.
ಇದನ್ನೂ ಓದಿ: ಪ್ರತಾಪ್ ಬೆಂಬಲಕ್ಕೆ ನಿಂತ ಕರುನಾಡು..! ಬಿಗ್ಬಾಸ್ನಲ್ಲಿ ʼಡ್ರೋನ್ʼ ಗೆಲ್ಲೋದು ಪಕ್ಕಾ
ಇನ್ನು ಇಂದಿನ ಸಂಚಿಕೆ ಸಖತ್ ಫನ್ನಿಯಾಗಿದೆ ಅನಿಸುತ್ತೆ ಕಾರಣ, ಈ ಸಂಚಿಕೆಯಲ್ಲಿ ಕಿಚ್ಚ ತುಂಬಾ ಕೂಲ್ ಆಗಿದ್ದಾರೆ. ದೊಡ್ಮನೆ ಮಂದಿಗೆ ಜೊತೆ ಫನ್ನಿ ಫನ್ನಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಬಿಗ್ಹೌಸ್ನಲ್ಲಿ ತುಂಬಾ ಕ್ಲೀನ್ ಯಾರು ಎನ್ನುವ ವಿಚಾರ ಬಂದಾಗ ತುಕಾಲಿ ಸಂತು ಹೆಸರು ಬರುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ನೋ.. ನೋ.. ಅಂತ ಬೋರ್ಡ್ ತೋರಿಸಿದರು.
ಅಲ್ಲದೆ, ನೀವು ಇದೀರಾ ಅಂತ ಇವತ್ತು ಸ್ನಾನ ಮಾಡಿ ಮೈತುಂಬಾ ಬಟ್ಟೆ ಹಾಕಿದಾನೆ ಅಂತ ಸ್ಪರ್ಧಿಗಳು ಕಿಚ್ಚನಿಗೆ ದೂರಿದರು. ಈ ವೇಳೆ, ವಿನಯ್ಗೌಡ್ ಮೊನ್ನೆ ಸಂತು ಚಡ್ಡಿ ನೋಡಿ ಕ್ಯಾಮರಾ ಡೌನ್ ಆಯ್ತು ಅಂತ ಹೇಳಿದ್ದು ಕೇಳಿ ಸುದೀಪ್, ಹೌದು ನಿನ್ನೆ ನನಗೆ ಕ್ಯಾಮರಾಮನ್ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಕಾಲ್ ಮಾಡಿ ಹೇಳಿದ್ರು ಬಹುಷಃ ಚಡ್ಡಿ ನೋಡಿ ಶಾಕ್ ಆಗಿರಬೇಕು ಅಂತ ಕಿಚ್ಚ ಕಿಚಾಯಿಸಿದರು. ಈ ವೇಳೆ ದೊಡ್ಮನೆ ಮಂದಿ ಬಿದ್ದು ಬಿದ್ದು ನಕ್ಕರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.