BBK 10 : ಸಂಗೀತಾ ಜೊತೆಗೆ ವಿನಯ್ ಪತ್ನಿ ರಹಸ್ಯ ಮಾತು..! ಗಂಡನ ತಂಟೆಗೆ ಬರ್ಬೇಡ ಅಂತ ವಾರ್ನಿಂಗ್ ಕೊಟ್ರಾ..?
Vinay Sangeetha Bigg boss : ವಿನಯ್ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. ಬೆಳಿಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆದರೆ ಸಂಗೀತಾ ಜೊತೆ ವಿನಯ್ ಪತ್ನಿ ರಹಸ್ಯವಾಗಿ ಮಾತನಾಡಿದ್ದು, ಕುತೂಹಲ ಮೂಡಿಸುತ್ತಿದೆ.
Bigg Boss Kannada 10 : ಪ್ರತಿದಿನವನ್ನೂ ಬಿಗ್‌ಬಾಸ್ ಒಂದು ಹಾಡಿನೊಂದಿಗೆ ಶುರುಮಾಡುತ್ತಾರೆ. ಆ ಹಾಡಿಗೆ ಖುಷಿಯಿಂದ ಕುಣಿಯುತ್ತ ಸ್ಪರ್ಧಿಗಳು ಬೆಳಗನ್ನು ಬರಮಾಡಿಕೊಳ್ಳುತ್ತಾರೆ. ಇದು ವಾಡಿಕೆ, ಆದರೆ ಬಿಗ್‌ಬಾಸ್ ಮನೆಯಲ್ಲಿ ಈ ಬೆಳಗು ಬರೀ ಹಾಡಿನ ಬೆಳಗಾಗಿರಲಿಲ್ಲ. ಅದೇನು ಎಂಬುದು ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಜಾಹೀರಾಗಿದೆ.
ಉಳಿದ ಸ್ಪರ್ಧಿಗಳಿಗಿಂತ ವಿನಯ್ ಗೌಡ ಅವರಿಗಂತೂ ಈ ಬೆಳಗು ತುಂಬ ವಿಶೇಷವೂ ಸ್ಮರಣೀಯವೂ ಆಗಿದೆ. ಏಕೆಂದರೆ ಬೆಳಗಿನ ಹಾಡಿಗೆ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. ಬೆಳಿಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅವರು ಮುಖ ನಗುವಿನಿಂದ ಅರಳಿದೆ. ‘ವಿಲನ್ ಮುಖದಲ್ಲೀಗ ಹೀರೊ ಕಳೆ ಬಂದಿದೆ’ ಎಂದು ತನಿಷಾ ಛೇಡಿಸಿದ್ದಾರೆ.
ಇದನ್ನೂ ಓದಿ: ಬದುಕಿರುವಾಗಲೇ ವಿಶ್ವ ಪ್ರಸಿದ್ಧ ಗಾಯಕಿ ಶಕೀರಾ ಪ್ರತಿಮೆ ನಿರ್ಮಾಣ.!
ಮನೆಯ ಸ್ಪರ್ಧಿಗಳನ್ನೆಲ್ಲ ಮಾತಾಡಿಸಿದ ವಿನಯ್ ಪತ್ನಿ ಸಂಗೀತಾ ಅವರ ಬಳಿ ಪ್ರತ್ಯೇಕವಾಗಿ ಮಾತಾಡಬೇಕು ಎಂದು ಕರೆದಿದ್ದಾರೆ. ಹಾಗಾದರೆ ಅವರು ಸಂಗೀತಾ ಬಳಿ ಏನು ಮಾತಾಡಿದ್ದಾರೆ? ಅದಕ್ಕ ಸಂಗೀತಾ ಹೇಗೆ ಪ್ರತಿಕ್ರಿಯಿಸುತ್ತಾರೆ? ಸಂಗೀತಾ-ವಿನಯ್ ಜಗಳ ಎರಡನೇ ವಾರದಿಂದಲೇ ಶುರುವಾಗಿ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಹಲವು ಸಲ ಇದು ಅತಿರೇಕಕ್ಕೂ ಹೋಗಿದೆ.
ಈ ಬಗ್ಗೆ ವಿನಯ್ ಪತ್ನಿ ಮನೆಯ ಹೊರಗಡೆಯೂ ನೋವು ತೋಡಿಕೊಂಡಿದ್ದರು. ಈ ವಿಷಯದ ಬಗ್ಗೆ ಅವರು ಸಂಗೀತಾ ಬಳಿ ಮಾತಾಡುತ್ತಾರಾ? ವಿನಯ್ ಪತ್ನಿ ಜೊತೆಗಿನ ಮಾತುಕತೆ ಸಂಗೀತಾ ಅವರನ್ನು ಕುಗ್ಗಿಸುತ್ತದೆಯೇ? ಈ ವಾರದಲ್ಲಿ ಅನ್ಯೋನ್ಯವಾಗಿಯೇ ಇದ್ದ ವಿನಯ್-ಸಂಗೀತಾ ಮಧ್ಯೆ ಮತ್ತೆ ಬಿರುಕು ಮೂಡಲಿದೆಯೇ? ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್‌ಬಾಸ್ ಅನ್ನು ವೀಕ್ಷಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.