ಬದುಕಿರುವಾಗಲೇ ಗಾಯಕಿ ಶಕೀರಾ ಪ್ರತಿಮೆ ನಿರ್ಮಾಣ..! ಬೆಲ್ಲಿ ಡ್ಯಾನ್ಸಿಂಗ್ ಪೋಸ್‌ನಲ್ಲಿ ಸಿಂಗರ್‌ ಶಿಲ್ಪ

Singer Shakira : ಖ್ಯಾತ ಗಾಯಕಿ ಶಕೀರಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. 21 ಅಡಿ ಶಿಲ್ಪವನ್ನು ಮ್ಯಾಗ್ಡಲೇನಾ ನದಿಯ ದಡದಲ್ಲಿರುವ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ.

Written by - Krishna N K | Last Updated : Dec 28, 2023, 06:17 PM IST
  • ಖ್ಯಾತ ಗಾಯಕಿ ಶಕೀರಾ ಅವರ ಕಂಚಿನ ಪ್ರತಿಮೆ ನಿರ್ಮಾಣ.
  • 21 ಅಡಿ ಶಕೀರಾ ಶಿಲ್ಪ ಅನಾವರಣಗೊಂಡಿದೆ.
  • ಮ್ಯಾಗ್ಡಲೇನಾ ನದಿಯ ದಡದಲ್ಲಿರುವ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ.
ಬದುಕಿರುವಾಗಲೇ ಗಾಯಕಿ ಶಕೀರಾ ಪ್ರತಿಮೆ ನಿರ್ಮಾಣ..! ಬೆಲ್ಲಿ ಡ್ಯಾನ್ಸಿಂಗ್ ಪೋಸ್‌ನಲ್ಲಿ ಸಿಂಗರ್‌ ಶಿಲ್ಪ title=

Shakira Statue : ವಿಶ್ವ ಪ್ರಸಿದ್ಧ ಖ್ಯಾತ ಗಾಯಕಿ ಶಕೀರಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಮಂಗಳವಾರ ಗಾಯಕಿಯ ಪೋಷಕರ ಸಮ್ಮುಖದಲ್ಲಿ ಮ್ಯಾಗ್ಡಲೇನಾ ನದಿಯ ದಡದಲ್ಲಿರುವ ಉದ್ಯಾನವನದಲ್ಲಿ 6.5 ಮೀಟರ್ (21 ಅಡಿ) ಶಿಲ್ಪವನ್ನು ಅನಾವರಣಗೊಳಿಸಲಾಯಿತು.

ಗ್ರ್ಯಾಮಿ-ವಿಜೇತೆ ಕೊಲಂಬಿಯಾದ ಗಾಯಕಿ ಶಕೀರಾ, ವಿಶ್ವದ ಖ್ಯಾತ ಸಂಗೀತಗಾರರಲ್ಲಿ ಒಬ್ಬರು. ಶಕೀರಾ ಹುಟ್ಟೂರು ಬ್ಯಾರನ್‌ಕ್ವಿಲ್ಲಾದಲ್ಲಿ ಅವರ ದೈತ್ಯ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಬೆಲ್ಲಿ ನೃತ್ಯದ ಭಂಗಿಯಲ್ಲಿರುವ ಅವರ ಪ್ರತಿಮೆಯನ್ನು ನಗರದ ಮೇಯರ್ ಜೈಮ್ ಪುಮರೆಜೊ ಅನಾವರಣಗೊಳಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Shakira (@shakira)

ಇದನ್ನೂ ಓದಿ: ಕರೀನಾಗಿಂತ ಮುಂಚೆ ʼಆ ನಟಿʼ ಜೊತೆ ಓಡಿ ಹೋಗಿದ್ದ ಸೈಫ್‌ ಆಲಿ ಖಾನ್‌..! ಮಕ್ಕಳೂ ಆಗಿದ್ದವು

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಕೀರಾ, ತಮ್ಮ ಪ್ರತಿಮೆ ನಿಲ್ಲಿಸಿದ್ದಕ್ಕೆ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ಬ್ಯಾರನ್‌ಕ್ವಿಲ್ಲಾ ಯಾವಾಗಲೂ ತನ್ನ ಮನೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಫೋಟೋಗಳನ್ನು ಗಾಯಕಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News