ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಇದೇ ತಿಂಗಳು ಅಂದರೆ ಜುಲೈ 28ರಂದು ಬಿಡುಗಡೆಯಾಗಲಿದೆ. ಈಗಾಗಲೇ ‘ರಾರಾ ರಕ್ಕಮ್ಮ’ ಹಾಡು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ರಿಲೀಸ್ ಆದ ದಿನದಿಂದಲೂ ಈ ಹಾಡು ಸಖತ್ ಸೌಂಡ್ ಮಾಡುತ್ತಿದ್ದು, ಇಂದಿಗೂ ಟ್ರೆಂಡಿಂಗ್‍ನಲ್ಲಿದೆ. ಸುದೀಪ್ ಜೊತೆಗೆ ಸೊಂಟ ಬಳುಕಿಸಿರುವ ಖ್ಯಾತ ಹಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

‘ರಾರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸುವ ಮೂಲಕ ಕಿಚ್ಚ ಸುದೀಪ್ ಜೊತೆಗೆ ನಟಿ ಜಾಕ್ವಲಿನ್ ಫರ್ನಾಂಡೀಸ್ ಮನಮೋಹಕ ನೃತ್ಯ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ತುಂಬಾ ಇದೇ ಹಾಡಿನ ಹವಾ ಜೋರಾಗಿದೆ. ‘ವಿಕ್ರಾಂತ್ ರೋಣ’ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ಜಾಕ್ವಲಿನ್ ಕನ್ನಡಿಗ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಇದೀಗ ಈ ಬಾಲಿವುಡ್ ನಟಿ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಸುದ್ದಿಯಾಗಿದ್ದಾರೆ.


ಇದನ್ನೂ ಓದಿ: Allu Arjun-Rashmika ಜೊತೆ 'ಪುಷ್ಪಾ 2' ರಲ್ಲಿ ನಟಿಸಬೇಕೆ? ತಕ್ಷಣ ಈ ಕೆಲಸ ಮಾಡಿ


ಹೌದು, ಬಾಲಿವುಡ್ ನಟಿ ಜಾಕ್ವಲಿನ್ ತಮ್ಮ ಪುಟ್ಟ ಅಭಿಮಾನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ರಾಯಪುರದ ಸಿದ್ದಿ ಎಂಬ ಪುಟ್ಟ ಅಭಿಮಾನಿಯ ಜನ್ಮದಿನದಂದು ಹೃದಯಪೂರ್ವಕ ಶುಭಾಶಯ ತಿಳಿಸುವ ಮೂಲಕ ನಟಿ ಜಾಕ್ವಲಿನ್ ಸರಳತೆ ಮೆರೆದಿದ್ದಾರೆ.


ತಮ್ಮೂರಿನ ವಿದ್ಯಾರ್ಥಿಗಳಿಗೆ "777 ಚಾರ್ಲಿ" ಸಿನಿಮಾ ತೋರಿಸಲು ಮುಂದಾದ ಕಿರಣ್ ರಾಜ್


ಅಭಿಮಾನಿಗೆ ಶುಭಾಶಯ ತಿಳಿಸಿ ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗೆ ಬಾಲಿವುಡ್ ನಟಿ ಶುಭಾಶಯ ಕೋರಿದ್ದಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ