ಜುಲೈ 2 ರಂದು ವಿಕ್ರಾಂತ ರೋಣ ಚಿತ್ರದ 'ರಾಜಕುಮಾರಿ' ಲಿರಿಕಲ್ ಸಾಂಗ್ ಬಿಡುಗಡೆ

ತೆರೆಗೆ ಅಪ್ಪಳಿಸುವ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಚಿತ್ರ ವಿಕ್ರಾಂತ್ ರೋಣ, ಹೌದು ನಮ್ಮ ಪ್ರೀತಿಯ ಬಾದಾಷಾ ಕಿಚ್ಚ ಸುದೀಪ್ ಅಭಿನಯಿಸಿರುವ ಈ ಸಿನಿಮಾ ಈಗ ರಾ ರಾ ರಕ್ಕಮ್ಮ ಸಾಂಗ್, ಟೀಸರ್, ಟ್ರೈಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದು ಎಲ್ಲರ ಮನಗೆದ್ದಿದೆ.

Written by - K Karthik Rao | Edited by - Manjunath N | Last Updated : Jun 30, 2022, 09:28 PM IST
  • ಇದಕ್ಕೂ ಮುನ್ನ ಈಗ ಹೊಸ ಅಪ್ಡೆಟ್ ನೀಡಿರುವ ಚಿತ್ರ ತಂಡವು ಈಗ ಲಿರಿಕಲ್ ಸಾಂಗ್ ನ್ನು ಬಿಡುಗಡೆ ಮಾಡಲು ಸನ್ನದ್ದವಾಗಿದೆ.
  • ಅನೂಪ್ ಭಂಡಾರಿಯವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇದೆ ಜುಲೈ 28 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
ಜುಲೈ 2 ರಂದು ವಿಕ್ರಾಂತ ರೋಣ ಚಿತ್ರದ 'ರಾಜಕುಮಾರಿ' ಲಿರಿಕಲ್ ಸಾಂಗ್ ಬಿಡುಗಡೆ title=

ಬೆಂಗಳೂರು: ತೆರೆಗೆ ಅಪ್ಪಳಿಸುವ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ಚಿತ್ರ ವಿಕ್ರಾಂತ್ ರೋಣ, ಹೌದು ನಮ್ಮ ಪ್ರೀತಿಯ ಬಾದಾಷಾ ಕಿಚ್ಚ ಸುದೀಪ್ ಅಭಿನಯಿಸಿರುವ ಈ ಸಿನಿಮಾ ಈಗ ರಾ ರಾ ರಕ್ಕಮ್ಮ ಸಾಂಗ್, ಟೀಸರ್, ಟ್ರೈಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದು ಎಲ್ಲರ ಮನಗೆದ್ದಿದೆ.

ಅಭಿಮಾನಿಗಳಂತೂ ಈ ಚಿತ್ರದ ಬಿಡುಗಡೆಗಾಗಿ ಕಾಯ್ದು ಕುಳಿತಿದ್ದಾರೆ.ಇನ್ನೊಂದೆಡೆಗೆ ಎಷ್ಟರ ಮಟ್ಟಿಗೆ ಈ ಚಿತ್ರ ಕ್ರೇಜ್ ಸೃಷ್ಟಿಸಿದೆ ಎಂದರೆ ಈ ಚಿತ್ರದ ಪ್ರತಿ ಅಪ್ ಡೇಟ್ಗಳು ಅಭಿಮಾನಿಗಳನ್ನು ಪುಳಕಿತರನ್ನಾಗಿ ಮಾಡುತ್ತವೆ.ಅನೂಪ್ ಭಂಡಾರಿಯವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇದೆ ಜುಲೈ 28 ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಇದನ್ನೂ ಓದಿ-Maharashtra Political Crisis : ಮಹಾ ನೂತನ ಸಿಎಂ ಆಗಿ ಫಡ್ನವಿಸ್, ಉಪಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ!

ಇದಕ್ಕೂ ಮುನ್ನ ಈಗ ಹೊಸ ಅಪ್ಡೆಟ್ ನೀಡಿರುವ ಚಿತ್ರ ತಂಡವು ಈಗ ಲಿರಿಕಲ್ ಸಾಂಗ್ ನ್ನು ಬಿಡುಗಡೆ ಮಾಡಲು ಸನ್ನದ್ದವಾಗಿದೆ.ಈಗ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿರುವ ಚಿತ್ರ ತಂಡವು 'ಲುಲ್ಲಬೈ ಸಾಂಗ್ ರಾಜಕುಮಾರಿ ರಿಲಿಕ್ ಸಾಂಗ್' ನ್ನು ಇದೇ ಜುಲೈ 02 ರಂದು ಕನ್ನಡದಲ್ಲಿ, ಜುಲೈ 03  ರಂದು ಮಲಯಾಳಂ, ಜುಲೈ 04  ರಂದು ತೆಲುಗು, ಜುಲೈ 05 ರಂದು ಹಿಂದಿ, ಹಾಗೂ ಜುಲೈ 06 ಕ್ಕೆ ತಮಿಳಿನಲ್ಲಿ ಬಿಡುಗಡೆಗೊಳ್ಳುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದೆ.

ಈಗಾಗಲೇ ರಾ ರಾ ರಕ್ಕಮ್ಮ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನಮನ್ನಣೆ ಪಡೆದು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದು ಸದ್ದುಮಾಡಿದೆ.ಇನ್ನೂ ರಾಜಕುಮಾರಿ ಹಾಡು ಯಾವ ರೀತಿ ಕ್ಲಿಕ್ ಆಗುತ್ತೆ ಎನ್ನುವುದನ್ನು ನಾವು ಕಾಡುನೊಡ್ಬೇಕು.ಇದೇ ಜುಲೈ 28ಕ್ಕೆ ತೆರೆಗೆ ಅಪ್ಪಳಿಸಲು ವಿಕ್ರಾಂತ್ ರೊಣ ಸಕಲ ಸಿದ್ದತೆಯೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News