Sridevi Death Anniversary: ಹಿಂದಿ ಚಿತ್ರರಂಗದ ಶ್ರೇಷ್ಠ ನಟಿ ಶ್ರೀದೇವಿ ತಮ್ಮ ಸೌಂದರ್ಯ, ನಟನೆ, ಹಾವಭಾವದಿಂದಲೇ ಅತ್ಯಂತ ಜನಪ್ರಿಯತೆಯನ್ನು ಪಡೆದವರು. ಬಾಲ್ಯದಿಂದ ಕೊನೆಯ ಸಮಯದವರೆಗೆ ಲೆಕ್ಕವಿಲ್ಲದಷ್ಟು ಚಲನಚಿತ್ರಗಳಲ್ಲಿ ಕೆಲಸ ಮಾಡಿದವರು. ಅದೆಷ್ಟೋ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಭೂಲೋಕ ಸುಂದರಿ, ಅದೊಂದು ದಿನ ಸದ್ದಿಲ್ಲದೆ ಇಹಲೋಕ ತ್ಯಜಿಸಿದ್ದರು. ಅಳಿಸಲಾಗದ ನೆನಪುಗಳನ್ನು ಹೃದಯದಲ್ಲಿ ಬಿಟ್ಟು ಕೊನೆಯಿಸಿರೆಳೆದಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟಿಕ್..ಟಿಕ್..ಟಿಕ್.. ಬರುತಿದೆ ’ಮಾರ್ಟಿನ್’ ಟೀಸರ್: ನೋಡೋಕೆ ನೀವು ರೆಡಿನಾ....?


ಶ್ರೀದೇವಿ ಅವರು ಬಾಲ್ಯದಿಂದಲೂ ಕಲೆಯ ಮಗಳಾಗಿ ಬೆಳೆದವರು. ಇನ್ನು ಇವರ ಸಿನಿ ಬದುಕಿಗೆ ತಿರುವು ನೀಡಿದ್ದು ಅದೊಂದು ಪಾತ್ರ.


ಶ್ರೀದೇವಿ ತಮ್ಮ ವೃತ್ತಿಜೀವನವನ್ನು ದಕ್ಷಿಣ ಚಿತ್ರರಂಗದಿಂದ ಪ್ರಾರಂಭಿಸಿದರು. ಅವರ ಮೂಲ ಸಹ ದಕ್ಷಿಣ ಭಾರತವೇ ಆಗಿದೆ. ಬಾಲ ಕಲಾವಿದರಾಗಿ ನಟನೆಗೆ ಕಾಲಿಟ್ಟ ಅವರಿಗೆ ಹಲವು ಚಿತ್ರಗಳ ಆಫರ್ ಬರತೊಡಗಿತು. 13 ವರ್ಷದವಳಿದ್ದಾಗ ‘ಮಂಡ್ರು ಮುಡಿಚು’ ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಮಲತಾಯಿ ಪಾತ್ರ ಮಾಡಬೇಕಿತ್ತು. ಆ ಸಮಯದಲ್ಲಿ ಆಕೆಗೆ ಕೇವಲ 13 ವರ್ಷ ವಯಸ್ಸಾಗಿತ್ತು. ಅವರ ಮಲಮಗ ಸೂಪರ್ ಸ್ಟಾರ್ ರಜನಿಕಾಂತ್. ರಜನಿ ವಯಸ್ಸಿಗಿಂದ ಶ್ರೀದೇವಿ ಅದೆಷ್ಟೋ ವರ್ಷ ಸಣ್ಣವರಾಗಿದ್ದರು. ಈ ಪಾತ್ರ ಮತ್ತು ಈ ಚಿತ್ರವು ಸೂಪರ್ ಹಿಟ್ ಆಗಿದ್ದು, ಈ ಚಿತ್ರದ ಸೆಟ್‌ನಿಂದಲೇ ಇಬ್ಬರೂ ಸ್ನೇಹಿತರಾದರು.


ಒಂದು ಸಿನಿಮಾದಲ್ಲಿ ತಾಯಿ-ಮಗನ ಪಾತ್ರ ಮಾಡಿದ್ದ ಇವರು, ಮತ್ತೊಂದು ಸಿನಿಮಾದಲ್ಲಿ ತೆರೆ ಮೇಲೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇದಾದ ನಂತರ ಇಬ್ಬರೂ ಸುಮಾರು 20 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲ ‘ಮಂಡ್ರು ಮುಡಿಚು’ ಚಿತ್ರದಲ್ಲಿ ರಜನಿಕಾಂತ್ ಗಿಂತ ಹೆಚ್ಚು ಸಂಭಾವನೆ ಪಡೆದಿದ್ದು ಶ್ರೀದೇವಿ. ಶ್ರೀದೇವಿಗೆ 5,000 ರೂ., ರಜನಿಕಾಂತ್ 2,000 ರೂ.


ಇದನ್ನೂ ಓದಿ: ಫೆ.26ರಂದು ‘ಕಬ್ಜ’ ಕಮರ್ಷಿಯಲ್ ಸಾಂಗ್ ರಿಲೀಸ್: ಅದ್ಧೂರಿ ಸಮಾರಂಭಕ್ಕೆ ಲಕ್ಷಕ್ಕೂ ಅಧಿಕ ಜನ ಭಾಗಿ ಸಾಧ್ಯತೆ


ಶ್ರೀದೇವಿ ಅವರು 24 ಫೆಬ್ರವರಿ 2018 ರಂದು ನಿಧನರಾದರು. ದುಬೈನಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಆಕೆ ಬಾತ್‌ ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಪ್ರಜ್ಞೆ ತಪ್ಪಿ ಬಾತ್‌ ಟಬ್‌ನಲ್ಲಿ ಬಿದ್ದಿದ್ದರೋ ಅಥವಾ ಸ್ನಾನ ಮಾಡುವಾಗ ಇದ್ದಕ್ಕಿದ್ದಂತೆ ಮೂರ್ಛೆ ಹೋದರೋ ಯಾವುದು ತಿಳಿದಿಲ್ಲ. ಈ ರಹಸ್ಯವು ಶ್ರೀದೇವಿ ಜೊತೆಗೆಯೇ ಹೋಯಿತು…


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ