ಟಿಕ್..ಟಿಕ್..ಟಿಕ್.. ಬರುತಿದೆ ’ಮಾರ್ಟಿನ್’ ಟೀಸರ್: ನೋಡೋಕೆ ನೀವು ರೆಡಿನಾ....?

ಇದೀಗ ಕಂಪ್ಲೀಟ್ ಟಿಕೆಟ್ ಸೋಲ್ಡ್ ಔಟ್ ಅನ್ನೋ ಮಾಹಿತಿ ಸಿಗುತ್ತಿದೆ. ಬೆಂಗಳೂರಿನ ವೀರೇಶ್ ಥೀಯೇಟರ್ ನಲ್ಲಿ ಫೆಬ್ರವರಿ 23ರಂದು ಟೀಸರ್ ರಿಲೀಸ್ ಗೆ ಸಿದ್ಧತೆ ಭರ್ಜರಿಯಾಗೇ ನಡೀತಿದೆ. ಇದರಿಂದ ಬಂದ ಹಣವನ್ನ ಗೋಶಾಲೆಗಳಿಗೆ ಬಳಸಲು ಮಾರ್ಟಿನ್ ಸಿನಿ ತಂಡ ಪ್ಲಾನ್ ಮಾಡಿಕೊಂಡಿದೆ. ಇದು ಅಭಿಮಾನಿಗಳಿಗೆ ಎಳನೀರು ಕುಡಿದಷ್ಟು ಖುಷಿ ಕೊಟ್ಟಿದೆ.

Written by - YASHODHA POOJARI | Edited by - Bhavishya Shetty | Last Updated : Feb 21, 2023, 07:18 PM IST
    • ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಗೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದಿದೆ
    • ಬೆಂಗಳೂರಿನ ವೀರೇಶ್ ಥೀಯೇಟರ್ ನಲ್ಲಿ ಫೆಬ್ರವರಿ 23ರಂದು ಟೀಸರ್ ರಿಲೀಸ್ ಗೆ ಸಿದ್ಧತೆ ಭರ್ಜರಿಯಾಗೇ ನಡೀತಿದೆ.
    • ಇದರಿಂದ ಬಂದ ಹಣವನ್ನ ಗೋಶಾಲೆಗಳಿಗೆ ಬಳಸಲು ಮಾರ್ಟಿನ್ ಸಿನಿ ತಂಡ ಪ್ಲಾನ್ ಮಾಡಿಕೊಂಡಿದೆ.
ಟಿಕ್..ಟಿಕ್..ಟಿಕ್.. ಬರುತಿದೆ ’ಮಾರ್ಟಿನ್’ ಟೀಸರ್: ನೋಡೋಕೆ ನೀವು ರೆಡಿನಾ....?  title=
martin

ಟಿಕ್..ಟಿಕ್..ಟಿಕ್… ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾ ಮಾರ್ಟಿನ್ ಸಿನಿಮಾದ ಟೀಸರ್ ನೋಡಲು..! ಬಹಳ ದಿನಗಳಿಂದ ಮಾರ್ಟಿನ್ ಚಿತ್ರದ ಅಪ್ಡೇಟ್ ಕೊಡ್ರಿ ಸ್ವಾಮಿ ಅಂತ ಡೈರೆಕ್ಟರ್ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಬಳಿ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಗೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿದಿದಿದೆ. ಸೋ ಮಾರ್ಟಿನ್ ಸಿನಿಮಾದ ಟೀಸರ್ ನ ಥೀಯೇಟರ್ ನಲ್ಲಿ ನೋಡಲು VIP ಗಳು ಅಂದ್ರೆ ಧ್ರುವ ಸರ್ಜಾ ಫ್ಯಾನ್ಸ್ ಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Kabzaa : ಉಪ್ಪಿ, ಕಿಚ್ಚ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌.. ಫೆ.26ಕ್ಕೆ ʼಕಬ್ಜʼ ಸಿನಿಮಾದ ನ್ಯೂ ಸಾಂಗ್ ರಿಲೀಸ್..!

ಇದೀಗ ಕಂಪ್ಲೀಟ್ ಟಿಕೆಟ್ ಸೋಲ್ಡ್ ಔಟ್ ಅನ್ನೋ ಮಾಹಿತಿ ಸಿಗುತ್ತಿದೆ. ಬೆಂಗಳೂರಿನ ವೀರೇಶ್ ಥೀಯೇಟರ್ ನಲ್ಲಿ ಫೆಬ್ರವರಿ 23ರಂದು ಟೀಸರ್ ರಿಲೀಸ್ ಗೆ ಸಿದ್ಧತೆ ಭರ್ಜರಿಯಾಗೇ ನಡೀತಿದೆ. ಇದರಿಂದ ಬಂದ ಹಣವನ್ನ ಗೋಶಾಲೆಗಳಿಗೆ ಬಳಸಲು ಮಾರ್ಟಿನ್ ಸಿನಿ ತಂಡ ಪ್ಲಾನ್ ಮಾಡಿಕೊಂಡಿದೆ. ಇದು ಅಭಿಮಾನಿಗಳಿಗೆ ಎಳನೀರು ಕುಡಿದಷ್ಟು ಖುಷಿ ಕೊಟ್ಟಿದೆ.

ನಿಮ್ಗೆ ಗೊತ್ತೇ ಇದೆ ಎಪಿ.ಅರ್ಜುನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಟ್ಟಿಗೆ ಸೇರಿದ್ರು ಅಂದ್ರೆ ಅಲ್ಲಿ ಡಬಲ್ ಡಬಲ್ ಮ್ಯಾಜಿಕ್ ಇದ್ದೇ ಇರುತ್ತೆ ಅಂತ.ಹಾಗೆಯೇ ಇದೀಗ ಮಾರ್ಟಿನ್ ಅನ್ನೋ ಅತ್ಯದ್ಭುತ ಸಿನಿಮಾವನ್ನ ನಮ್ಮ ಇಂಡಸ್ಟ್ರಿಯಿಂದ ಪ್ಯಾನ್ ಇಂಡಿಯಾ ಲೆವೆಲ್ಲಿಗೆ ಕೊಡಲು ಎಪಿ.ಅರ್ಜುನ್ ಕಂಪ್ಲೀಟ್ ಆಗಿ ಸಿದ್ದವಾಗಿದ್ದಾರೆ. ಸೋ ಫೆ. 23 ರಂದು ರಿಲೀಸ್ ಆಗೋ ಟೀಸರ್ ನೋಡಿ ಸಿನಿಮಾ ಹೆಂಗೇ ಕಿಕ್ ಕೊಡುತ್ತೆ ಅನ್ನೋದನ್ನ ನಾವು ಈಗಲೇ ಲೆಕ್ಕಾ ಹಾಕಬಹುದು ಅಲ್ಲವೇ ಏನಂತೀರಾ..?

ನೂರು ಕೋಟಿ ವೆಚ್ಚದಲ್ಲಿ ಮೂಡಿ ಬಂದಿರುವ ಮಾರ್ಟಿನ್  ಚಿತ್ರವನ್ನು ಬೆಂಗೂಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಮಾರ್ಟಿನ್ ಚಿತ್ರದ ಕ್ಲೈಮ್ಯಾಕ್ಸ್‌ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್‌ ಲಕ್ಷ್ಮಣ್‌ ಕಂಪೋಸ್‌ ಮಾಡಿದ್ದಾರೆ

ಇದನ್ನೂ ಓದಿ: Rishabh Shetty: ಇನ್ಮುಂದೆ ರಿಷಬ್ ಶೆಟ್ಟಿ ಫೋನ್ ಆಫ್ ಆಗುತ್ತೆ..! ಶಾಕಿಂಗ್ ಹೇಳಿಕೆ ಕೊಟ್ಟ ಡಿವೈನ್ ಸ್ಟಾರ್

ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿರೋದು ಚಿತ್ರದ ಮತ್ತೊಂದು ಹೈಲೇಟ್ ಆಗಿದೆ. ಫೆ.23 ಕ್ಕೆ ಚಿತ್ರದ ಟೀಸರ್ ಜೊತೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಪ್ಲಾನ್ ಮಾಡಿರುವ ಮಾರ್ಟಿನ್ ಚಿತ್ರತಂಡ ಈ ಸಮ್ಮರ್ ಗೆ ಮಾರ್ಟಿನ್ ನ ಬೆಳ್ಳಿತೆರೆ ಮೇಲೆ ಕರ್ಕೊಂಡ್ ಬರೋಕೆ ಪ್ಲಾನ್ ಮಾಡಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.v

Trending News