Kabzaa : ಉಪ್ಪಿ, ಕಿಚ್ಚ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌.. ಫೆ.26ಕ್ಕೆ ʼಕಬ್ಜʼ ಸಿನಿಮಾದ ನ್ಯೂ ಸಾಂಗ್ ರಿಲೀಸ್..!

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಕಬ್ಜ ಸಿನಿಮಾದ ಕಮರ್ಷಿಯಲ್‌ ಸಾಂಗ್‌ ಬಿಡುಗಡೆಗೆ ಡೇಟ್‌ ಫಿಕ್ಸ್‌ ಆಗಿದೆ. ನಿರ್ದೇಶಕ ಆರ್. ಚಂದ್ರು ತವರೂರು ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು ಕಬ್ಜ ಸಿನಿಮಾದ ಸಾಂಗ್‌ ಬಿಡುಗಡೆಯಾಗಲಿದೆ. ಕನ್ನಡದ ಹೆಮ್ಮೆಯ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ಸಾಧ್ಯತೆ ಇದೆ. 

Written by - YASHODHA POOJARI | Edited by - Krishna N K | Last Updated : Feb 21, 2023, 06:46 PM IST
  • ಕಬ್ಜ ಸಿನಿಮಾದ ಕಮರ್ಷಿಯಲ್‌ ಸಾಂಗ್‌ ಬಿಡುಗಡೆಗೆ ಡೇಟ್‌ ಫಿಕ್ಸ್‌.
  • ನಿರ್ದೇಶಕ ಆರ್. ಚಂದ್ರು ತವರೂರಿನಲ್ಲಿ ಕಬ್ಜಾ ಸಾಂಗ್‌ ರಿಲೀಸ್‌.
  • ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು ಕಬ್ಜ ಸಿನಿಮಾದ ಸಾಂಗ್‌ ಬಿಡುಗಡೆಯಾಗಲಿದೆ.
Kabzaa : ಉಪ್ಪಿ, ಕಿಚ್ಚ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌.. ಫೆ.26ಕ್ಕೆ ʼಕಬ್ಜʼ ಸಿನಿಮಾದ ನ್ಯೂ ಸಾಂಗ್ ರಿಲೀಸ್..! title=

Kabzaa new song release date : ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಕಬ್ಜ ಸಿನಿಮಾದ ಕಮರ್ಷಿಯಲ್‌ ಸಾಂಗ್‌ ಬಿಡುಗಡೆಗೆ ಡೇಟ್‌ ಫಿಕ್ಸ್‌ ಆಗಿದೆ. ನಿರ್ದೇಶಕ ಆರ್. ಚಂದ್ರು ತವರೂರು ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು ಕಬ್ಜ ಸಿನಿಮಾದ ಸಾಂಗ್‌ ಬಿಡುಗಡೆಯಾಗಲಿದೆ. ಕನ್ನಡದ ಹೆಮ್ಮೆಯ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ಸಾಧ್ಯತೆ ಇದೆ. 

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹೆಮ್ಮೆಯ ಬಹು ನಿರೀಕ್ಷಿತ ಪ್ಯಾನ್ ಇಂಡಯಾ ಸಿನಿಮಾ "ಕಬ್ಬ". ಆರ್ ಚಂದ್ರು ನಿರ್ದೇಶಿಸಿರುವ "ಕಬ್ಜ" ಚಿತ್ರದ ಕಮರ್ಷಿಯಲ್ ಸಾಂಗ್ ಹಾಗೂ ಜೂಟ್ ಬಾಕ್ಸ್ ಇದೇ ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಬಿಡುಗಡೆಯಾಗಲಿದೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. 

ಇದನ್ನೂಓದಿ: Rishabh Shetty: ಇನ್ಮುಂದೆ ರಿಷಬ್ ಶೆಟ್ಟಿ ಫೋನ್ ಆಫ್ ಆಗುತ್ತೆ..! ಶಾಕಿಂಗ್ ಹೇಳಿಕೆ ಕೊಟ್ಟ ಡಿವೈನ್ ಸ್ಟಾರ್

ಶಿಡ್ಲಘಟ್ಟ ಆರ್ ಚಂದ್ರು ಅವರ ತವರೂರು. ತಮ್ಮೂರಿನಲ್ಲಿ "ಕಬ್ಜ" ಚಿತ್ರದ ಅದ್ದೂರಿ ಸಮಾರಂಭ ಆಯೋಜಿಸಿರುವ ಆರ್ ಚಂದ್ರು, ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂದ್ರ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ "ಕಬ್ಜ" ಚಿತ್ರ ಮಾರ್ಚ್ 17 ರಂದು ತೆರೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News