ನವದೆಹಲಿ:  ಕೆಲದಿನಗಳ ಹಿಂದಷ್ಟೇ ಡ್ಯಾನ್ಸ್ ದಿವಾನೆ-3 ಜಡ್ಜ್ ಧರ್ಮೇಶ್ ಯೆಲಾಂಡೆ ಕರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಇದೇ ಕಾರ್ಯಕ್ರಮದ ನಿರೂಪಕ ರಾಘವ್ ಜುಯಲ್ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತಂತೆ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಘವ ಜುಯೆಲ್ (Raghav Juyal) , ಜ್ವರ-ಕೆಮ್ಮು ಕಂಡು ಬಂದ ನಂತರ ನಾನು ಕೋವಿಡ್ -19 (Covid 19) ಪರೀಕ್ಷೆಗೆ ಒಳಪಟ್ಟಿದ್ದು ನನಗೆ ಸೋಂಕು ದೃಢಪಟ್ಟಿದೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ದಯವಿಟ್ಟು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಸುರಕ್ಷಿತವಾಗಿರಿ ಎಂದು ಬರೆದಿದ್ದಾರೆ.


ರಂಜಾನ್ ಸಭೆಗೆ ನಿಷೇಧ ಹೇರಬೇಕೆಂದು ಹೇಳಿ ಟ್ವೀಟ್ ಡಿಲಿಟ್ ಮಾಡಿದ ಕಂಗನಾ..!


ಏಪ್ರಿಲ್ ಆರಂಭದವರೆಗೂ, ರಾಘವ್ ಜುಯೆಲ್ ಅವರು ಮಾಧುರಿ ದೀಕ್ಷಿತ್(Madhuri Dixit) , ಧರ್ಮೇಶ್ ಯೆಲಾಂಡೆ ಮತ್ತು ತುಷಾರ್ ಕಾಲಿಯಾ ಅವರೊಂದಿಗೆ ಡ್ಯಾನ್ಸ್ ದಿವಾನೆ 3 ಕಾರ್ಯಕ್ರಮದ ಚಿತ್ರೀಕರಣದಲ್ಲಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳಲು ಪ್ರಾರಂಭಿಸುತ್ತಿದ್ದಂತೆ, ಸರ್ಕಾರವು ಮೇ 1 ರವರೆಗೆ 15 ದಿನಗಳ ಕಾಲ ರಾಜ್ಯದಲ್ಲಿ ಚಲನಚಿತ್ರ ಮತ್ತು ಟಿವಿ ಚಿತ್ರೀಕರಣಗಳನ್ನು ನಿಷೇಧಿಸಿತು. ಆದಾಗ್ಯೂ, ಕರ್ಫ್ಯೂ ಡ್ಯಾನ್ಸ್ ದಿವಾನೆ 3 ರ ಮೇಲೆ ಪರಿಣಾಮ ಬೀರಲಿಲ್ಲ, ಏಕೆಂದರೆ ತಯಾರಕರು ಈ ಮೊದಲೇ ಹಲವು ಎಪಿಸೋಡ್‌ಗಳ ಚಿತ್ರೀಕರಣ ಮುಗಿಸಿದ್ದರು.

ಇದನ್ನೂ ಓದಿ - Covid-19 Cases in India: ಕರೋನಾವೈರಸ್ ಹರಡುವಿಕೆಯಲ್ಲಿ ಅಮೇರಿಕಾ ವಿರುದ್ಧ ಭಾರತ ಹೊಸ ದಾಖಲೆ


ಅದೇ ಸಮಯದಲ್ಲಿ, 'ಬಿಗ್ ಬಾಸ್' ಖ್ಯಾತಿಯ ಅರ್ಷಿ ಖಾನ್ ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ  'ಖತ್ರೋನ್ ಕೆ ಖಿಲಾಡಿ' ವಿಜೇತರಾಗಿದ್ದ ಶಾಂತನು ಮಹೇಶ್ವರಿಯವರಿಗೂ ಕರೋನಾ ಸೋಂಕು ದೃಢಪಟ್ಟಿರುವುದಾಗಿ ಈ ಹಿಂದೆ ವರದಿಯಾಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.