'ಡ್ಯಾನ್ಸ್ ದಿವಾನೆ 3' ಜಡ್ಜ್ ಧರ್ಮೇಶ್ ಯೆಲಾಂಡೆಗೆ ಕರೋನಾ ಪಾಸಿಟಿವ್, Madhuri Dixit ವರದಿಯಲ್ಲೇನಿದೆ?

ದೇಶಾದ್ಯಂತ ಮತ್ತೊಮ್ಮೆ ಕರೋನಾ ಕಾರ್ಮೋಡ ಕವಿದಿದೆ. ಇತ್ತೀಚಿಗೆ ಹಲವು ಕ್ರಿಕೆಟ್ ತಾರೆಯರು, ಸಿನಿಮಾ ಕಲಾವಿದರೂ ಕೂಡ ಕರೋನಾ ಹಿಡಿತಕ್ಕೆ ಸಿಲುಕಿರುವ ಬಗ್ಗೆ ವರದಿಗಳಾಗಿವೆ. ಈ ಮಧ್ಯೆ ಪ್ರಸಿದ್ದ ಡಾನ್ಸ್ ಶೋ 'ಡ್ಯಾನ್ಸ್ ದಿವಾನೆ 3' ಜಡ್ಜ್ ಧರ್ಮೇಶ್ ಯೆಲಾಂಡೆ ಕೂಡ ಕರೋನಾ ಪಾಸಿಟಿವ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Apr 8, 2021, 01:25 PM IST
  • ಪ್ರಸಿದ್ಧ ನೃತ್ಯ ಸಂಯೋಜಕ ಧರ್ಮೇಶ್ ಯೆಲಾಂಡೆಗೆ ಕರೋನಾ ದೃಢ
  • ಪ್ರಸಿದ್ಧ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನೆ 3' ರ ಜಡ್ಜ್ ಆಗಿರುವ ಧರ್ಮೇಶ್ ಯೆಲಾಂಡೆ
  • ಇದೇ ಶೋನ ಮತ್ತೋರ್ವ ಜಡ್ಜ್ ಆಗಿರುವ ಪ್ರಸಿದ್ಧ ನಟಿ ಮಾಧುರಿ ದೀಕ್ಷಿತ್ ಅವರ ಕರೋನಾ ವರದಿಯಲ್ಲಿ ಏನಿದೆ?
'ಡ್ಯಾನ್ಸ್ ದಿವಾನೆ 3' ಜಡ್ಜ್ ಧರ್ಮೇಶ್ ಯೆಲಾಂಡೆಗೆ ಕರೋನಾ ಪಾಸಿಟಿವ್, Madhuri Dixit ವರದಿಯಲ್ಲೇನಿದೆ? title=
Dharmesh Yelande tested Corona positive

ನವದೆಹಲಿ: ಕರೋನಾವೈರಸ್ ಮತ್ತೊಮ್ಮೆ ಜನರಲ್ಲಿ ಭೀತಿ ಸೃಷ್ಟಿಸಿದ್ದು ದಿನೇ ದಿನೇ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ಪ್ರಸಿದ್ಧ ಡ್ಯಾನ್ಸ್ ಕೊರಿಯೋಗ್ರಾಫರ್ ಮತ್ತು ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನೆ 3' (Dance Deewane 3)ರ ಜಡ್ಜ್ ಆಗಿರುವ ಧರ್ಮೇಶ್ ಯೆಲಾಂಡೆ  (Dharmesh Yelande) ಕೂಡ ಕರೋನಾ ಪಾಸಿಟಿವ್ ಆಗಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಹಿನ್ನಲೆಯಲ್ಲಿ ಧರ್ಮೇಶ್ 'ಡ್ಯಾನ್ಸ್ ದಿವಾನೆ 3'ರ ಮುಂದಿನ ಕೆಲವು ಎಪಿಸೋಡ್ ಗಳಲ್ಲಿ ಕಾಣಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.

18 ಸಿಬ್ಬಂದಿ ಕರೋನಾ ಪಾಸಿಟಿವ್ ಆಗಿದ್ದರು:
ಕೆಲವು ಸಮಯದ ಈ ಕಾರ್ಯಕ್ರಮದ 18 ಮಂದಿ ಸಿಬ್ಬಂದಿಗಳಲ್ಲಿ ಕರೋನಾ ದೃಢಪಟ್ಟಿತ್ತು. ಇದರ ನಂತರ,   'ಡ್ಯಾನ್ಸ್ ದಿವಾನೆ 3' (Dance Deewane 3) ಶೋ ಗೆ ಸಂಬಂಧಿಸಿದ ಉಳಿದ ಜನರಿಗೂ ಕರೋನಾ ಟೆಸ್ಟ್ ಮಾಡಿಸಲಾಯಿತು.  ಇದರಲ್ಲಿ ಜಡ್ಜ್ ಧರ್ಮೇಶ್ ಯೆಲಾಂಡೆ  (Dharmesh Yelande) ಮತ್ತು ಕಾರ್ಯಕ್ರಮದ ನಿರ್ಮಾಪಕ ಅರವಿಂದ ರಾವ್ ಅವರ ಕರೋನಾ ವರದಿ ಪಾಸಿಟಿವ್ ಎಂದು ಬಂದಿದೆ. ಮತ್ತೊಂದೆಡೆ, ಇದೇ ಶೋನ ಮತ್ತೋರ್ವ ಜಡ್ಜ್ ಆಗಿರುವ ಪ್ರಸಿದ್ಧ ನಟಿ ಮಾಧುರಿ ದೀಕ್ಷಿತ್ (Madhuri Dixit) ಮತ್ತು ಕಾರ್ಯಕ್ರಮದ ಆಂಕರ್ ರಾಘವ್ ಜುಯಲ್ (Raghav Juyal)ಅವರ ವರದಿ ನೆಗೆಟಿವ್ ಬಂದಿದೆ.

ಇದನ್ನೂ ಓದಿ - VIDEO : ವಿರಾಟ್ ಕೊಹ್ಲಿಯನ್ನು ಲಿಫ್ಟ್ ಮಾಡಿದ ಅನುಷ್ಕ ; ಫ್ಯಾನ್ಸ್ ನೀಡಿದ ಪ್ರತಿಕ್ರಿಯೆ ಹೀಗಿತ್ತು

ಧರ್ಮೇಶ್ ಬದಲಿಗೆ ಇವರು ಜಡ್ಜ್ ಆಗುವ ಸಾಧ್ಯತೆ:


ವಿಶೇಷವೆಂದರೆ, ಪ್ರಸ್ತುತ ತಮಗೆ ಕರೋನಾ (Coronavirus) ದೃಢಪಟ್ಟಿರುವ ಬಗ್ಗೆ ಧರ್ಮೇಶ್ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.  ಅದಾಗ್ಯೂ ಪ್ರಸಿದ್ಧ ಡಾನ್ಸ್ ದಿವಾನೆ ರಿಯಾಲಿಟಿ ಶೋನಲ್ಲಿ ಕೆಲ ಸಮಯದವರೆಗೆ ಧರ್ಮೇಶ್ ಯೆಲಾಂಡೆ ಬದಲಿಗೆ ಖ್ಯಾತ ನೃತ್ಯ ಸಂಯೋಜಕರಾದ  ಪುನೀತ್ ಪಾಠಕ್ (Puneet Pathak) ಅಥವಾ ಶಕ್ತಿ ಮೋಹನ್ (Shakti Mohan) ಜಡ್ಜ್ ಸ್ಥಾನ ಅಲಂಕರಿಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ - ಹಿಂದಿನದನ್ನು ನೆನೆದು ಪೋಟೋ ಶೇರ್ ಮಾಡಿದ ಮಾಧುರಿ ದೀಕ್ಷಿತ್ ಹೇಳಿದ್ದೇನು?

ಈ  ಸೆಲೆಬ್ರಿಟಿಗಳಿಗೂ ಕರೋನಾ ಪಾಸಿಟಿವ್:
ವಿಶೇಷವೆಂದರೆ ಧರ್ಮೇಶ್ ಅವರಲ್ಲದೆ ಬಾಲಿವುಡ್ ಪ್ರಸಿದ್ಧ ಕಲಾವಿದರಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಆಲಿಯಾ ಭಟ್, ರಣಬೀರ್ ಕಪೂರ್, ಅಕ್ಷಯ್ ಕುಮಾರ್, ಅಮೀರ್ ಖಾನ್(Aamir Khan), ಆರ್.ಕೆ. ಮಾಧವನ್, ಭೂಮಿ ಪೆಡ್ನೇಕರ್ ಅವರಿಗೂ ಕರೋನಾ ಪಾಸಿಟಿವ್ ಕಂಡು ಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News