Naresh Pavitra Lokesh Marriage : ನಟಿ ಪವಿತ್ರಾ ಲೋಕೇಶ್ ಕಳೆದ ಕೆಲವು ದಿನಗಳಿಂದ ತೆಲುಗು ರಾಜ್ಯಗಳು ಮತ್ತು ಕರ್ನಾಟಕದಲ್ಲಿ ಹಾಟ್ ಟಾಪಿಕ್ ಅಗಿದ್ದಾರೆ. ಅಲ್ಲದೆ, ಇಂದು ನಟ ನರೇಶ್ ಅವರನ್ನು ಮದುವೆಯಾಗಿರುವ ವಿಡಿಯೋ ಒಂದು ಹಂಚಿಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಆದ್ರೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇದೀಗ ಮತ್ತೊಂದು ವಿಡಿಯೋ ಶೇರ್‌ ಮಾಡುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಅಲ್ಲದೆ, ನೆಟ್ಟಿಗರು ಯಾರು ಈ ಪವಿತ್ರಾ ಲೋಕೇಶ್‌, ಅವರ ಮೊದಲ ಗಂಡ ಯಾರು, ಕುಟುಂಬದ ಹಿನ್ನಲೆ ಏನು ಅಂತ ಹುಡುಕಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಪವಿತ್ರಾ ಲೋಕೇಶ್ ಬಗ್ಗೆ ಹೇಳುವುದಾದರೆ.. ಅವರು ಕನ್ನಡದಲ್ಲಿ ಕಿರುತೆರೆ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರಲ್ಲೂ ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ವಿಶೇಷವಾಗಿ ಪೋಷಕ ಪಾತ್ರಗಳೊಂದಿಗೆ ಪ್ರಸಿದ್ಧರಾದರು. ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಪವಿತ್ರಾ ತಂದೆ ಮೈಸೂರು ಲೋಕೇಶ್ ಕನ್ನಡ ರಂಗಭೂಮಿ ಮತ್ತು ಖ್ಯಾತ ಸಿನಿಮಾ ನಟರಾಗಿದ್ದರು. ತಂದೆಯ ಪರಂಪರೆಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.


ಇದನ್ನೂ ಓದಿ:ಯುವರಾಜ್ ಚಿತ್ರದ ಶೂಟಿಂಗ್ ಬಗ್ಗೆ ಅಪ್ಪು ಕಂಡಿದ್ದ ಕನಸ್ಸೇನು.‌?


ಸದ್ಯ ಹಲವು ಹೀರೋಗಳಿಗೆ ತಾಯಿಯ ಪಾತ್ರ ಮಾಡುತ್ತಿರುವ ಪವಿತ್ರಾ ವಯಸ್ಸು 44. ಅವರು 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1994ರಲ್ಲಿ ಅಂಬರೀಶ್ ಅಭಿನಯದ ‘ಮಿಸ್ಟರ್ ಅಭಿಷೇಕ್’ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಅದೇ ವರ್ಷ ‘ಬಂಗಾರದ ಕಲಶ’ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅದಾಗಲೇ ಸೌಂದರ್ಯ, ನಟನೆಯಿಂದ ಇಂಡಸ್ಟ್ರಿಯಲ್ಲಿದ್ದ ಹೀರೋಗಳಿಗಿಂತ ಎತ್ತರಕ್ಕೆ ಬೆಳೆದಿದ್ದ ಆಕೆಗೆ ಸರಿಯಾದ ಅವಕಾಶಗಳು ಸಿಗಲಿಲ್ಲ.


5.10 ಇಂಚು ಎತ್ತರವಿರುವುದರಿಂದ ಪವಿತ್ರಾ ಲೋಕೇಶ್ ನಾಯಕಿ ನಿರೀಕ್ಷೆ ಕಷ್ಟವಾಯಿತು. ಕನ್ನಡದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚಿದ್ದಾರೆ. 2006 ರ ಚಲನಚಿತ್ರ 'ನಾಯಿ ನೆರಳು' ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು. ಪವಿತ್ರಿ ಲೋಕೇಶ್ ಅವರ ಪತಿ ಸುಚೀಂದ್ರ ಪ್ರಸಾದ್ ಕೂಡ ಕನ್ನಡ ಖಾತ ನಟ. 


ಇದನ್ನೂ ಓದಿ:Naresh-Pavithra Lokesh: ಅದ್ಧೂರಿಯಾಗಿ 3ನೇ ಮದುವೆಯಾದ ಪವಿತ್ರ, ನರೇಶ್‌ಗೆ 4ನೇ ಮದುವೆ ಸಂಭ್ರಮ..!


ಅದಕ್ಕೂ ಮುನ್ನ ಪವಿತ್ರಾ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ಮದುವೆಯಾಗಿದ್ದರು. ಅದರ ನಂತರ, ಕುಟುಂಬ ಸಮಸ್ಯೆಯಿಂದಾಗಿ ವಿಚ್ಛೇದನ ನೀಡಿದರು. ಆ ಬಳಿಕ ಸುಚೀಂದ್ರ ಪ್ರಸಾದ್ ಜತೆ ವಾಸವಿದ್ದ ಆಕೆ 2018ರಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಟ ನರೇಶ್‌ಗೆ ಆಪ್ತರಾದರು. ಇತ್ತೀಚಿಗೆ ಇವರಿಬ್ಬರು ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದು ಜೀವನಕ್ಕೆ ಕಾಲಿಟ್ಟಿದ್ದಾರೆ. ನರೇಶ್ ಜೊತೆ ಇದು ಪವಿತ್ರಾ ಮೂರನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಡಿಯೋ ವೈರಲ್‌ ಆಗಿದೆ.


ಇನ್ನು ಪವಿತ್ರಾ ಲೋಕೇಶ್ ವಿಷಯಕ್ಕೆ ಬಂದರೆ.. ಆಕೆಯ ತಂದೆ ಮೈಸೂರು ಲೋಕೇಶ್ 10ನೇ ತರಗತಿಯಲ್ಲಿದ್ದಾಗ ಹಠಾತ್ತನೆ ಸಾವನ್ನಪ್ಪಿದ್ದರು. ಇದರೊಂದಿಗೆ ವಿದ್ಯಾಭ್ಯಾಸ ಮುಂದುವರಿಸುತ್ತಲೇ ಸಿನಿಮಾದತ್ತ ಹೆಜ್ಜೆ ಹಾಕಿದಳು. ಮೇಲಾಗಿ ಸಿನಿಮಾದಲ್ಲಿ ನಟಿಸುತ್ತಲೇ ಪದವಿ ಮುಗಿಸಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಒಮ್ಮೆ ಪ್ರಯತ್ನಿಸಿದರೂ ಫಲ ಸಿಗದ ಕಾರಣ ಸಿನಿಮಾವನ್ನೇ ವೃತ್ತಿಯನ್ನಾಗಿ ಆರಿಸಿಕೊಂಡು ಅದರಲ್ಲಿಯೇ ಮುಂದುವರಿದಳು. 


ಇದನ್ನೂ ಓದಿ:ರಾಮಾಚಾರಿ ಸಿನಿಮಾಗೆ ಮಾರ್ಗ್ರೇಟ್ ಡೈರೆಕ್ಷನ್‌ ಮಾಡೋದು ಕನ್ಫರ್ಮ್..!


ಸಿನಿಮಾಗಳಲ್ಲಿ ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಪಾತ್ರಗಳಲ್ಲಿ ಮಿಂಚಿದ್ದರೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕುಟುಂಬ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ತೆಲುಗು ಸಿನಿಮಾ ರಂಗಕ್ಕೆ ಕಾಲಿಟ್ಟ ಪವಿತ್ರಾ ಮೊದಲು ರವಿತೇಜಾ ಅಭಿನಯದ ಡೊಂಗೋಡು ಚಿತ್ರದಲ್ಲಿ ನಟಿಸಿದ್ದರು. ಆ ನಂತರ ತೆಲುಗಿನಲ್ಲಿ ತಾಯಿ, ತಂಗಿ, ಚಿಕ್ಕಮ್ಮನ ಪಾತ್ರಗಳಲ್ಲಿ ನಟಿಸಿ ಟಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. ಸದ್ಯ ನರೇಶ್‌ ಅವರ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.