ಯುವರಾಜ್ ಚಿತ್ರದ ಶೂಟಿಂಗ್ ಬಗ್ಗೆ ಅಪ್ಪು ಕಂಡಿದ್ದ ಕನಸ್ಸೇನು.‌?

Yuva : ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ " ಯುವ" ಅವತಾರದಲ್ಲಿ ಅಬ್ಬರಿಸೋದು ಪಕ್ಕಾ ಆಗಿದೆ.ಟೈಟಲ್ ಫಿಕ್ಸ್ ಮಾಡ್ಕೊಂಡ್ ಅದ್ದೂರಿ ಯಾಗಿ  ಮುಹೂರ್ತ ಮುಗಿಸಿರುವ ಹೊಂಬಾಳೆ ಬಳಗ ಅಪ್ಪುಬರ್ತ್ಡೇದಿನವೇ ಯುವ ಚಿತ್ರದ ಶೂಟಿಂಗ್ ಪ್ಲಾನ್ ಮಾಡಿದ್ರು...ಅದ್ರೆ ಈಗ ಮತ್ತೆ ಪ್ಲಾನ್ ಚೇಂಜ್ ಮಾಡಿ.. ಅಪ್ಪು ಆಸೆಯಂತೆಚಿತ್ರದ ಶೂಟಿಂಗ್ ಶುರು ಮಾಡಲು ನಿರ್ಧಾರ ಮಾಡಿದ್ದಾರೆ..  

Written by - YASHODHA POOJARI | Last Updated : Mar 10, 2023, 02:26 PM IST
  • ಯುವರಾಜ್ ಚಿತ್ರದ ಶೂಟಿಂಗ್ ಬಗ್ಗೆ ಅಪ್ಪು ಕಂಡಿದ್ದ ಕನಸ್ಸೇನು.‌?
  • ಸಂತೋಷ್ ಆನಂದ್ ರಾಮ್ ಟೀಮ್ ಈಗಾಗಲೇ ಪ್ರೀ ಪ್ರೋಡಕ್ಷನ್ಸ್ ಕೆಲಸ ಕಂಪ್ಲೀಟ್ ಮಾಡಿದೆ.
  • ಯುವಾರಜ್ ನನ್ನು ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಆಗಿ ಇಂಟರ್ಡ್ಯೂಸ್ ಮಾಡೊಕೆ ಪವರ್ ಸ್ಟಾರ್ ಪಕ್ಕಾ ಪ್ಲಾನ್ ಮಾಡ್ಕೊಂಡು.
ಯುವರಾಜ್ ಚಿತ್ರದ ಶೂಟಿಂಗ್ ಬಗ್ಗೆ ಅಪ್ಪು ಕಂಡಿದ್ದ ಕನಸ್ಸೇನು.‌?  title=

ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ಅವರನ್ನು ಫೈನಲ್ ಮಾಡ್ಕೊಂಡಿಂದ ಸಂತೋಷ್ ಆನಂದ್ ರಾಮ್. ಇನ್ನೇನು ಆ ವಿಚಾರವನ್ನು ಅಧಿಕೃತವಾಗಿ ಅನೌನ್ಸ್ ಮಾಡಬೇಕು ಅಷ್ಟರಲ್ಲಿ ರುಕ್ಮಿಣಿ ವಸಂತ್ ಸಂತೋಷ್ ಅಂದು ಕೊಂಡ ಡೇಟ್ ನಲ್ಲಿ ಫ್ರೀ ಇಲ್ಲದಕಾರಣ.ಯುವ ನಾಯಕಿಯಾಗಿ ಸಪ್ತಮಿಗೌಡವನ್ನು ಕನ್ಫರ್ಮ್ ಮಾಡ್ಕೊಂಡು ಏಪ್ರಿಲ್ 2ನೇ ತಾರೀಖಿನಿಂದ ಯುವ ಚಿತ್ರದ ಹಾಗಾದ್ರೆ ಯುವರಾಜ್ ಚಿತ್ರದ ಶೂಟಿಂಗ್ ಬಗ್ಗೆ ಅಪ್ಪು ಕಂಡಿದ್ದ ಕನಸ್ಸೇನು.‌? ಆ ಕನಸ್ಸಿಗೆ ನೀರೆರೆಯಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಪ್ಲಾನ್ ಮಾಡಿದ್ದು ಯಾಕೆ ಅಂತ ತಿಳ್ಕೋ ಬೇಕಾದ್ರೆ ಮುಂದೆ ಓದಿ ಪವರ್ ಸ್ಟಾರ್  ಅಗಲಿಕೆ ನಂತ್ರ ಯುವರಾಜ್ ದೊಡ್ಮನೆ ಅಭಿಮಾನಿಗಳಿಗೆ  ಅಪ್ಪು ಅಂತೆ ಕಾಣ್ತಿದ್ದಾರೆ. ಅಲ್ಲದೆ  ಅಪ್ಪುಗಾಗಿ ರೆಡಿಯಾಗಿದ್ದ ಕತೆಯಲ್ಲಿ ಯುವರಾಜ್ "ಯುವ" ಎಂಟ್ರಿ ಕೊಡ್ತಾರೆ  ಅನ್ನೋ ಸಮಾಚಾರ ಅಪ್ಪು ಅಭಿಮಾನಿಗಳ ಅಂಗಳ ಸೇರಿದ್ಮೇಲೆ ಯುವ ಚಿತ್ರದ ಮೇಲೆ ನಿರೀಕ್ಷೆ ಬೆಟ್ಟದಂತೆ ಬೆಳೆದು ನಿಂತಿದೆ..ಯಾವಗ ಅಪ್ಪು ಮಾಡ ಬೇಕಿದ್ದ ಪಾತ್ರದಲ್ಲಿ ಯುವರಾಜ್ ಯಾವ ರೀತಿ ಕಾಣಿಸ್ತಾರೆ..ಆ ಪಾತ್ರಕ್ಕೆ ಯಾವ ರೀತಿ ಜೀವ ತುಂಬಾರೆ ಅನ್ನೋ ಕಾತರ ಗಗನದೆತ್ತರಕ್ಕೆ ಬೆಳೆದುನಿಂತಿದೆ. ಇನ್ನು ಸಂತೋಷ್ ಆನಂದ್ ರಾಮ್  ಟೀಮ್ ಈಗಾಗಲೇ ಪ್ರೀ ಪ್ರೋಡಕ್ಷನ್ಸ್ ಕೆಲಸ ಕಂಪ್ಲೀಟ್ ಮಾಡಿದೆ..ಅಲ್ಲದೆ ಅಪ್ಪು ಹುಟ್ಟು ಹಬ್ಬಕ್ಕೆ ಶೂಟಿಂಗ್ ಶುರು ಮಾಡಲು ಪ್ಲಾನ್ ಕೂಡ ಮಾಡಿದ್ರು..ಅದ್ರೆ ಯುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ರುಕ್ಮಿಣಿ ವಸಂತ್  ಡೇಟ್ ಕ್ಲಾಶ್ ಆದ ಕಾರಣ ಸಡನ್ಆಗಿ ನಾಯಕಿಯನ್ನ ಬದಲಿಸಿ..ಕನಕಪುರದ ಕನಕಾಂಬರಿ ಸಪ್ತಮಿಗೌಡ ಅವರನ್ನು ವೆಲ್ ಕಮ್ ಮಾಡಿರುವ ಯುವ ಚಿತ್ರತಂಡ ಪವರ್ ಸ್ಟಾರ್ ಆಸೆಯಂತೆ ಯುವ ಶೂಟಿಂಗ್ ಶುರು ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

2021 ರಲ್ಲಿ ಯುವಾರಜ್ ನನ್ನು ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಆಗಿ ಇಂಟರ್ಡ್ಯೂಸ್ ಮಾಡೊಕೆ ಪವರ್ ಸ್ಟಾರ್ ಪಕ್ಕಾ ಪ್ಲಾನ್ ಮಾಡ್ಕೊಂಡು..ಯುವ ರಣಧೀರ ಕಂಠೀರವ ಟೀಸರ್ ಲಾಂಚ್ ಮಾಡಿದ್ರು..ಅಲ್ಲದೆ ಅಣ್ಣಾವ್ರ ಹುಟ್ಟು ಹಬ್ಬಕ್ಕೆ ಈ ಚಿತ್ರವನ್ನು ಅನೌನ್ಸ್ ಮಾಡೊ ಅಲೋಚನೆಯಲ್ಲಿದ್ರು ಅಪ್ಪು..ಅದ್ರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿ ಅಪ್ಪು ಪರಮಾತ್ಮನಾಗಿ ಅಭಿಮಾನಿಗಳ ಹೃದಯದರಮನೆಯಲ್ಲಿ ನೆಲಸಿಬಿಟ್ರು.. ಅದರೆ ಅಪ್ಪು ಅವರನ್ನು ಹೆಚ್ಚಾಗಿ ಗೌರವಿಸೊದ್ರ ಜೊತೆ ಪ್ರೀತಿಸ್ತಿದ್ದ ಹೊಂಬಾಳೆ ಫಿಲಂಸ್ ಅಪ್ಪು ಇಲ್ಲದಿದ್ರೆ ಏನಂತೆ ಅವರು ನಮ್ಮ ಕೆಲಸದಲ್ಲಿ ಇರ್ತಾರೆ..ಯುವ ಚಿತ್ರವನ್ನು ನಾವೇ ಮಾಡ್ತಿವಿ ಅಂತ ಯುವರಾಜ್ ನನ್ನು ಲಾಂಚ್ ಮಾಡೋದಾಗಿ ಅನೌನ್ಸ್ ಮಾಡಿ..ಈಗ ಚಿತ್ರದ ಟೈಟಲ್ ಅನ್ನು ರಿವೀಲ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ..ಅದರ ಜೊತೆಗೆ ಈಗ ಯುವ ಚಿತ್ರದ ಶೂಟಿಂಗ್ ಅನ್ನು ಅಪ್ಪು ಹುಟ್ಟಿದ ಹಬ್ಬಕ್ಕೆ ಬದಲಾಗಿ ಅಪ್ಪು ಯುವರಾಜ್ ನನ್ನು ಲಾಂಚ್ ಮಾಡಬೇಕೆಂದು ಕೊಂಡಿದ್ದ ತಿಂಗಳಿನಲ್ಲೇ ಶೂಟಿಂಗ್ ಶುರು ಮಾಡಲು ಶೆಡ್ಯೂಲ್ ಫಿಕ್ಸ್ ಮಾಡಿದ್ದಾರೆ.

ಇದನ್ನೂ ಓದಿ-Naresh-Pavithra Lokesh: ಅದ್ಧೂರಿಯಾಗಿ 3ನೇ ಮದುವೆಯಾದ ಪವಿತ್ರ, ನರೇಶ್‌ಗೆ 4ನೇ ಮದುವೆ ಸಂಭ್ರಮ..!

ಅಪ್ಪು ಹೃದಯದ ಬಡಿತ ಸಡನ್ ಆಗಿ ನಿಲ್ಲದಿದ್ರೆ ಯುವರಾಜ್ ಮೊದಲ ಚಿತ್ರ ಅಣ್ಣಾವ್ರ ಹುಟ್ಟಿದ ತಿಂಗಳು ಏಪ್ರಿಲ್ ನಲ್ಲಿ  ಅನೌನ್ಸ್ ಮಾಡಲು ಪುನೀತ್ ರಾಜ್ ಕುಮಾರ್ ಅಲೋಚನೆ ಮಾಡಿದ್ರು..ಅದ್ರೆ ಅಷ್ಟರಲ್ಲಿ ಯಾರೂ ಕನಸಲ್ಲೂ ಊಹೆ ಮಾಡದಂತಹ ದುರ್ಘಟನೆ ನಡೆದ ಕಾರಣ ಕೊಂಚ ತಡವಾಗಿ ಯುವ ಚಿತ್ರ ಅನೌನ್ಸ್ ಆಗಿದೆ..ಅಪ್ಪು ಹುಟ್ಟು ಹಬ್ಬಕ್ಕೆ ಚಿತ್ರದ ಮುಹೂರ್ತ ಮಾಡಿ ಅದೇ ದಿನ ಯುವ ಚಿತ್ರದ ಶೂಟಿಂಗ್  ಶುರು ಮಾಡಲು ಪ್ಲಾನ್ ಮಾಡಿದ್ದ ಸಂತೋಷ್ ಆನಂದ್ ರಾಮ್ , ಕಾರಣಾಂತರದಿಂದ ಮಾರ್ಚ್  ಮೂರಕ್ಕೆ ಯುವ ಚಿತ್ರದ ಮುಹೂರ್ತ ಮಾಡಿ ಮುಗಿಸಿದ್ದಾರೆ.. ಅಲ್ಲದೆ ಅಪ್ಪು ಹುಟ್ಟು ಹಬ್ಬಕ್ಕೆ ಯುವ ಜೊತೆ ಶೂಟಿಂಗ್ ಅಖಾಡಕ್ಕೆ ಇಳಿಯ ಬೇಕಿದ್ದ ಸಂತೋಷ್ ಆನಂದ್ ರಾಮ್ ಈಗ ಚಿತ್ರದ ಶೂಟಿಂಗ್ ಅನ್ನು ಏಪ್ರಿಲ್ ನಿಂದ ಶುರು ಮಾಡಲು ಶೆಡ್ಯೂಲ್ ಹಾಕಿದ್ದಾರೆ...

ಶೂಟಿಂಗ್ ಶುರು ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.. ಅಲ್ಲದೆ ಯುವರಾಜ್ ಚಿತ್ರವನ್ನು ಕನ್ನಡದಲ್ಲಿ ಮಾತ್ರ ಮಾಡಲು ಪ್ಲಾನ್ ಮಾಡಿರುವ ಹೊಂಬಾಳೆ ಬಳಗ ಬೆಂಗಳೂರಿನಲ್ಲಿ ಮೊದಲ ಶೆಡ್ಯೂಲ್ ಪ್ಲಾನ್ ಮಾಡಿಕೊಂಡಿದೆ..

ಇದನ್ನೂ ಓದಿ-ರಾಮಾಚಾರಿ ಸಿನಿಮಾಗೆ ಮಾರ್ಗ್ರೇಟ್ ಡೈರೆಕ್ಷನ್‌ ಮಾಡೋದು ಕನ್ಫರ್ಮ್..!

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News