Famous Reels Stars Breakup: ಸುಮಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಟಿಕ್‌ಟಾಕ್‌ ಜೋಡಿ ಪ್ರತಿದಿನ ರೀಲ್ಸ್‌ ಮಾಡುವ ಮೂಲಕ ಎಲ್ಲರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಇವರಿಬ್ಬರ ಪ್ರೇಮ ಸಂಬಂಧ ಮಧ್ಯೆ ಬಿರುಕು ಉಂಟಾಗಿದ್ದು, ಬ್ರೇಕಪ್‌ ಮಾಡಿಕೊಂಡಿರುವುದಾಗಿ ತಿಳಸಿದ್ದಾರೆ. ಕಾರಣ ಏನಿರಬಹುದು ಅಂತೀರಾ ಈ ಸ್ಟೋರಿ ಓದಿ...


COMMERCIAL BREAK
SCROLL TO CONTINUE READING

ಡಿಜಿಟಲ್‌ ಯುಗದಲ್ಲಿ ಪ್ರೀತಿ ಪ್ರೇಮ ಎಲ್ಲ ಸಾಮಾನ್ಯವಾಗಿದೆ. ಒಂದು ತಾಸಿಗೆ ಲವ್‌ ಇನ್ನೊಂದು ತಾಸಿಗೆ ಬ್ರೇಕಪ್‌ ಎನ್ನುವಂತಾಗಿದೆ. ಹಾಗಂತ ನಿಜವಾದ ಪ್ರೀತಿ ಆಗುವುದೇ ಇಲ್ಲ ಎಂದಲ್ಲ. ಆಗುತ್ತೆ, ಆದರೆ ಅದು ನೂರಾರು ಜೋಡಿಗಳಲ್ಲಿ, ಕೆಲವರಲ್ಲಿ ಮಾತ್ರ ನಿಜವಾದ ಪ್ರೀತಿ ಇರುತ್ತದೆ.  ಪ್ರೀತಿ ಕುರುಡು ಎನ್ನುವ ಮಾತಿನಂತೆ ಪ್ರೀತಿಸಿದವರನ್ನು ಹುಚ್ಚರಂತೆ ನಂಬುವವರು ಇದ್ದಾರೆ. ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸತ್ಯವಲ್ಲ... ಹಾಗಂತ ಎಲ್ಲವೂ ಸುಳ್ಳಲ್ಲ. ಎಲ್ಲವೂ ಸರಿ ಆದರೆ ಡಿಜಿಟಲ್‌ ಯುಗಕ್ಕೂ ಪ್ರೀತಿಗೂ ಏನು ಸಂಬಂಧ ಹೇಗೆ ಅವೆರಡು ಒಂದಕ್ಕೊಂದು ಲಿಂಕ್‌ ಆಗುತ್ತೆ ಅಂತೀರಾ ಉತ್ತರ ಇಲ್ಲಿದೆ....


ಇದನ್ನೂ ಓದಿ- ಭೋಜ್‌ಪುರಿ ಬ್ಯೂಟಿ ನಮ್ರತಾ ಮಲ್ಲ ಹಾಟ್‌ ಫೋಟೋಸ್‌ ವೈರಲ್‌ : ನೋಡಿ ಬೆರಗಾದ ಫ್ಯಾನ್ಸ್‌


ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮಿಡಿಯಾಗಳೇ ಎಷ್ಟೋ ಜನರ ಜೀವನವಾಗಿವೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಲು ಏನೇನೋ ಸರ್ಕಸ್‌ ಮಾಡುತ್ತಾರೆ. ಅದೇ ರೀತಿ ರೀಲ್ಸ್‌ ಮಾಡುವ ಮೂಲಕ ಫೇಮಸ್‌ ಆಗಿರುವ ಇಬ್ಬರು ಪ್ರೇಮಿಗಳು ಸದ್ಯ ದೂರವಾಗಿದ್ದಾರೆ. ಯಾರು ಆ ಕಪಲ್?‌ ದೂರವಾಗಲು ಕಾರಣವಾದ್ರು ಏನು? ಅನ್ನೋ ಪ್ರಶ್ನೆಗಳು ಸದ್ಯ ಎಲ್ಲರಲ್ಲಿಯೂ ಮೂಡಿವೆ.


ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮಾಡಿ ಖ್ಯಾತಿ ಪಡೆದಿರುವ ವರುಣ್‌ ಆರಾಧ್ಯಾ ಹಾಗೂ ವರ್ಷಾ ಕಾವೇರಿ ಸದ್ಯ ದೂರವಾಗಿರುವ ಜೋಡಿ ಹಕ್ಕಿಗಳು. ಅವರಿಬ್ಬರೂ ದೂರವಾಗಿರುವುದಕ್ಕೆ ಕಾರಣ ವರುಣ್‌ ಅವರು ಬೇರೆ ಯಾವುದೋ ಹುಡುಗಿಯ ಜೊತೆ ಸಂಬಂಧ ಹೊಂದಿರುವುದು ಎಂದು ಹೇಳಲಾಗುತ್ತಿದ್ದು, ಸದ್ಯ ಈ ಸುದ್ದಿ ಸೋಷಿಯಲ್‌ ಮಿಡಿಯಾಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.


ಇದನ್ನೂ ಓದಿ- 'ಸಲಾರ್' ಯಶಸ್ಸಿಗಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಶಾಂತ್ ನೀಲ್..! ವಿಡಿಯೋ ವೈರಲ್


ಇನ್ನು ಈ ಬಗ್ಗೆ ಸ್ವತಃ ವರ್ಷಾ ಕಾವೇರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವು ದೂರಾಗುತ್ತಿರುವ ವಿಷಯದ ಜೊತೆಗೆ ಕಾರಣವನ್ನು ತಿಳಿಸಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್‌ ಹರಿದಾಡುತ್ತಿದ್ದು, ಅದನ್ನು ನೋಡಿದ ನೆಟ್ಟಿಗರು ಆಕೆಗೆ ಧೈರ್ಯ ಹೇಳುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.