Aamir Khan With Kiran Rao : ಜಿಯೋ ಸ್ಟುಡಿಯೋಸ್ ಪ್ರಸ್ತುತ ಪಡಿಸುತ್ತಿರುವ ಕಿರಣ್ ರಾವ್ ನಿರ್ದೇಶನದ ʼಲಾಪತಾ ಲೇಡಿಸ್ʼ ಮೂಲಕ ಅಮೀರ್‌ಖಾನ್ ಅವರೊಂದಿಗೆ ರಾವ್ ಮತ್ತೇ ಒಂದಾಗುತ್ತಿದ್ದಾರೆ. ಈ ಸಿನಿಮಾ ಜನವರಿ 5, 2024 ರಂದು ರಿಲೀಸ್‌ಗೆ ಸಿದ್ಧವಾಗಿದೆ. ಇವರ ನಿರ್ದೇಶನದ ಚೊಚ್ಚಲ ಸಿನಿಮಾ ʼಧೋಬಿ ಘಾಟ್ʼ ನಂತರ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಒಂದು ದಶಕದ ನಂತರ ನಿರ್ದೇಶಕರಾಗಿ ಮತ್ತೇ ಪುನರಾಗಮನ ಮಾಡಿದ್ದಾರೆ.
ಈಗಾಗಲೇ ಅಮಿರ್ ಖಾನ್ ಮತ್ತು ಕಿರಣ್ ರಾವ್ ಅವರ ಪಾರ್ಟನರ್ಶಿಪ್‌ನಿಂದಾಗಿ ಸಿನಿಮಾ ಅಭಿಮಾನಿಗಳಲ್ಲಿ ಕೂತುಹಲವನ್ನುಂಟು ಮಾಡಿದೆ. ಚಿತ್ರದಲ್ಲಿ ನಿತಾಂಶಿ ಗೋಯಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ, ಛಾಯಾ ಕದಮ್ ಮತ್ತು ರವಿ ಕಿಶನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಿಯೋ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿರುವ 'ಲಾಪತಾ ಲೇಡೀಸ್' ಅನ್ನು ಕಿರಣ್ ರಾವ್ ನಿರ್ದೇಶಿಸಿ, ಅಮೀರ್ ಖಾನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ.
Ab milega #LaapataaLadies ka pata 5th January 2024 ko, aapke nazdiki cinema gharon mein.
Directed by #KiranRao
Original Story by #BiplabGoswami
Screenplay & Dialogues by #SnehaDesaiAdditional Dialogues by #DivyanidhiSharma
Produced by #Aamirkhan #KiranRao #JyotiDeshpande pic.twitter.com/LfEZBP8rtH
— Aamir Khan Productions (@AKPPL_Official) September 7, 2023
ಇದನ್ನು ಓದಿ- ಬಾನದಾರಿಯಲ್ಲಿ ವಿಭಿನ್ನವಾದ ಸಿನಿಮಾ
ಬಿಪ್ಲಬ್ ಗೋಸ್ವಾಮಿಯವರ ಪ್ರಶಸ್ತಿ ವಿಜೇತ ಕಥೆಯನ್ನು ಆಧರಿಸಿದ ಚಿತ್ರಕಥೆಯೊಂದಿಗೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಲನಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ ಬರೆದಿದ್ದಾರೆ ಮತ್ತು ಹೆಚ್ಚುವರಿ ಸಂಭಾಷಣೆಗಳನ್ನು ದಿವ್ಯನಿಧಿ ಶರ್ಮಾ ಬರೆದಿದ್ದಾರೆ.
ಸಿನಿಮಾವು 2001ರಲ್ಲಿ ಭಾರತದ ಗ್ರಾಮೀಣ ಭಾಗಗಳಲ್ಲಿ 'ಲಾಪತಾ ಲೇಡೀಸ್' ಇಬ್ಬರು ಯುವ ವಧುಗಳು ರೈಲಿನಿಂದ ಕಳೆದುಹೋದಾಗ ಉಂಟಾಗುವ ಅವ್ಯವಸ್ಥೆಯನ್ನು ಅನುಸರಿಸುತ್ತದೆ. ಪ್ರೇಕ್ಷಕರು ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿರುವಾಗ ನಿರ್ಮಾಪಕರು ಅಂತಿಮವಾಗಿ ಸಿನಿಮಾ ರಿಲೀಸ್ ಡೇಟ್ ತಿಳಿಸಿದ್ದಾರೆ. ಬಿಡುಗಡೆಗೂ ಮುಂಚೆಯೇ ಸೆಪ್ಟೆಂಬರ್ 8 ರಂದು ಪ್ರತಿಷ್ಠಿತ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (TIFF) ನಲ್ಲಿ ಗ್ರ್ಯಾಂಡ್ ಪ್ರಿಮಿಯರ್ನಲ್ಲಿ 'ಲಾಪತಾ ಲೇಡೀಸ್' ಅನ್ನು ಸಹ ಪ್ರದರ್ಶಿಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.