'ಸಲಾರ್' ಯಶಸ್ಸಿಗಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಶಾಂತ್ ನೀಲ್..! ವಿಡಿಯೋ ವೈರಲ್

Salaar new release date : ಸ್ಟಾರ್‌ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಹೆಸರಿನಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಡಾರ್ಲಿಂಗ್ ಪ್ರಭಾಸ್‌ ಅಭಿಮಾನಿಗಳು ಖಷಿಯಾಗಿದ್ದು, ಹಾಗೆಯೇ ಚಿತ್ರದ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಪ್ಪ ಅಂತ ಕೇಳಿಕೊಳ್ಳುತ್ತಿದ್ದಾರೆ.

Written by - Krishna N K | Last Updated : Sep 7, 2023, 08:00 PM IST
  • 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಸಿನಿಮಾ 'ಸಾಲಾರ್'.
  • ಸಲಾರ್‌ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದ್ದು, ರಿಲೀಸ್‌ಗಾಗಿ ಫ್ಯಾನ್ಸ್‌ ಕಾಯುತ್ತಿದ್ದಾರೆ.
  • ಸಧ್ಯ ಪ್ರಶಾಂತ್‌ ನೀಲ್‌ ಸಲಾರ್‌ ಯಶಸ್ಸಿಗೆ ದೇವರ ಮೊರೆ ಹೋಗಿರುವ ವಿಡಿಯೋ ಒಂದು ವೈರಲ್‌ ಆಗಿದೆ.
'ಸಲಾರ್' ಯಶಸ್ಸಿಗಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಶಾಂತ್ ನೀಲ್..! ವಿಡಿಯೋ ವೈರಲ್ title=

Prashanth Neel : 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ 'ಸಾಲಾರ್' ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ಸತತ ಸೋಲು ಅನುಭವಿಸುತ್ತಿರುವ ಡಾರ್ಲಿಂಗ್‌ ಪ್ರಭಾಸ್‌ಗೆ ಈ ಸಿನಿಮಾ ಬಹಳ ನಿರ್ಣಾಯಕವಾಗಿದೆ. ಹೀಗಿರುವಾಗ ಪ್ರಶಾಂತ್‌ ನೀಲ್‌ ದೇವಸ್ಥಾನದಲ್ಲಿ ಸಲಾರ್‌ ಯಶಸ್ಸಿಗೆ ದೇವರ ಮೊರೆ ಹೋಗಿರುವ ವಿಡಿಯೋ ಒಂದು ವೈರಲ್‌ ಆಗಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.

ಹೌದು... ‘ಕೆಜಿಎಫ್’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಸದ್ಯ ಪ್ಯಾನ್ ಇಂಡಿಯಾ ಹೀರೋ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆ ‘ಸಲಾರ್’ ಎಂಬ ಅದ್ಧೂರಿ ಆ್ಯಕ್ಷನ್ ಎಂಟರ್ ಟೈನರ್ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾದ ಮೇಲೆ ಈಗಾಗಲೇ ಒಂದು ರೇಂಜ್‌ ನಿರೀಕ್ಷೆಗಳಿವೆ. ಚಿತ್ರ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಮೊದಲೇ ಘೋಷಿಸಿದ್ದರು.

ಇದನ್ನೂ ಓದಿ: ಹಿಂದಿಯಲ್ಲಿ ದಾಖಲೆ ಬರೆದ ನಿಖಿಲ್ : 100 ಮಿಲಿಯನ್ ವೀಕ್ಷಣೆ ಕಂಡ 'ರೈಡರ್'

ಆದರೆ ಗ್ರಾಫಿಕ್ಸ್ ಕೆಲಸ ವಿಳಂಬವಾದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಸಲಾರ್ ಬಿಡುಗಡೆಯನ್ನು ಮುಂದೂಡುವ ಬಗ್ಗೆ ಚಿತ್ರತಂಡ ಎರಡು ಅಥವಾ ಮೂರು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಹೊಸ ಬಿಡುಗಡೆ ದಿನಾಂಕವನ್ನೂ ಪ್ರಕಟಿಸುವ ಸಾಧ್ಯತೆಯೂ ಇದೆ. 

ಇದರ ನಡುವೆ 'ಸಾಲಾರ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪ್ರಶಾಂತ್ ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕೃಷ್ಣಾಷ್ಟಮಿಯಂದು ಪ್ರಶಾಂತ್ ನೀಲ್ ಕುಟುಂಬ ಸಮೇತ ಸತ್ಯಸಾಯಿ ಜಿಲ್ಲೆಯ ನೀಲಕಂಠಪುರಕ್ಕೆ ತೆರಳಿದ್ದರು. ಅಲ್ಲಿ ತಂದೆಯ ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಆ ಗ್ರಾಮದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಆದರೆ ಪೂಜೆಯ ಅಂಗವಾಗಿ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನೊಂದಿಗೆ 'ಸಲಾರ್‌' ಹೆಸರನ್ನ ಹೇಳಿದ್ದು ಅಚ್ಚರಿ ಮೂಡಿಸಿತ್ತು. ಅಷ್ಟರ ಮಟ್ಟಿಗೆ ಚಿತ್ರ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. 

ಇದನ್ನೂ ಓದಿ: ಬೆಡ್‌ರೂಮ್‌ನಲ್ಲಿ ಸೋನು ಗೌಡ ಹಾಟ್‌ ಹಾಟ್‌ ಪೋಸ್‌.. ಫೋಟೋಸ್‌ ವೈರಲ್‌

ಪ್ರಶಾಂತ್ ನೀಲ್ 'ಸಲಾರ್' ಚಿತ್ರವನ್ನು ತಮ್ಮ ಕುಟುಂಬದ ಸದಸ್ಯ ಎಂದು ಪರಿಗಣಿಸಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ್ದಕ್ಕೆ ಡಾರ್ಲಿಂಗ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರಿಂದಾಗಿ ಡಾರ್ಲಿಂಗ್‌ ಫ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಟೀಸರ್‌ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ, ಅತಿ ಕಡಿಮೆ ಸಮಯದಲ್ಲಿ ಯೂಟ್ಯೂಬ್‌ನಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿತು.

ಇದರೊಂದಿಗೆ 'ಸಾಲಾರ್' ಮೇಲಿನ ನಿರೀಕ್ಷೆಗಳು ಹೆಚ್ಚಾದವು. ಡಾರ್ಲಿಂಗ್ ಅಭಿಮಾನಿಗಳು ಚಿತ್ರದ ರಿಲೀಸ್‌ ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೂ. 250 ಕೋಟಿಗಳ ಬೃಹತ್ ಬಜೆಟ್‌ನಲ್ಲಿ ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ಸಲಾರ್‌ ಭಾಗ-1 ಸೀಜ್ ಫೈರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News