ನವದೆಹಲಿ: ಕಾಶ್ಮೀರಿ ಪಂಡಿತರ ಕಥೆಯನ್ನು ಆಧರಿಸಿರುವ ‘ದಿ ಕಾಶ್ಮೀರ್ ಫೈಲ್ಸ್’(The Kashmir Files) ಚಿತ್ರ ಇತ್ತೀಚಿನ ದಿನಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಸಿನಿಮಾವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ(Vivek Agnihotri) ನಿರ್ದೇಶಿಸಿದ್ದಾರೆ. ಒಂದೆಡೆ ಜನರು ಈ ಸಿನಿಮಾವನ್ನು ಇಷ್ಟಪಡುತ್ತಿರುವಾಗಲೇ ಅನೇಕರು ವಿರೋಧಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ವಿವೇಕ್ ಅಗ್ನಿಹೋತ್ರಿ ಅವರಿಗೆ ಭಾರತದಾದ್ಯಂತ ಸಿಆರ್‌ಪಿಎಫ್ ರಕ್ಷಣೆಯೊಂದಿಗೆ ‘Y’ ಕೆಟಗರಿ ಭದ್ರತೆ(Y Category Security)ಯನ್ನು ನೀಡಿದೆ.


COMMERCIAL BREAK
SCROLL TO CONTINUE READING

ಕಾಶ್ಮೀರಿ ಪಂಡಿತರ ಜೀವನಾಧಾರಿತ ಸಿನಿಮಾ


ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ ನಡೆಸಿದವರಿಗೆ ಕಾಂಗ್ರೆಸ್ ಹತ್ತಿರವಾಗಿತ್ತು: ಬಿಜೆಪಿ


ಅನೇಕ ರಾಜ್ಯಗಳಿಂದ ತೆರಿಗೆ ವಿನಾಯಿತಿ ಘೋಷಣೆ


ಸದ್ಯ ಬಾಕ್ಸ್ ಆಫೀಸ್ ಧೂಳಿಪಟ ಮಾಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ(The Kashmir Files Film) ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗಿದೆ. ಈ ಸಿನಿಮಾ ನೋಡಿ ಬಹುತೇಕರು ಕಣ್ಣೀರಿಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ದೇಶದಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ ಮತ್ತು ಮಿಥುನ್ ಚಕ್ರವರ್ತಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಅದೇ ರೀತಿ ಕೆಲವರು ಈ ಚಿತ್ರಕ್ಕೆ ಭಾರತದಾದ್ಯಂತ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.  


ಗಳಿಕೆಯಲ್ಲಿ ದಾಖಲೆ ಬರೆಯುತ್ತಿರುವ ಚಿತ್ರ


ಈ ಚಿತ್ರ ಬಿಡುಗಡೆಯಾದ 6ನೇ ದಿನವಾದ ಬುಧವಾರ ಬಾಕ್ಸ್ ಆಫೀಸ್‌(Box Office)ನಲ್ಲಿ 19 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಒಂದೇ ದಿನದಲ್ಲಿ ಈ ಚಿತ್ರದ ಅತಿಹೆಚ್ಚಿನ ಗಳಿಕೆಯಾಗಿದೆ. ಏಕೆಂದರೆ ಮಂಗಳವಾರ 18 ಕೋಟಿ ರೂ. ಗಳಿಸಿತ್ತು. ಸದ್ಯದಲ್ಲೇ ಈ ಚಿತ್ರ 100 ಕೋಟಿ ರೂ. ಕ್ಲಬ್ ಸೇರಲಿದೆ. ಅನುಪಮ್ ಖೇರ್ ಕೂಡ ಈ ಚಿತ್ರದ ಗಳಿಕೆಯ ಅಂಕಿಅಂಶಗಳ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ. ಚಿತ್ರದ ಗಳಿಕೆಯ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಯಶಸ್ಸನ್ನು ಸಿನಿಮಾ ಲೋಕದ ಗೆಲುವು ಎಂದು ಬಣ್ಣಿಸಿದ್ದಾರೆ.


ಇದನ್ನೂ ಓದಿ: ಈ ಕಾರಣಕ್ಕೆ ನೋಡಬೇಕು "ದಿ ಕಾಶ್ಮೀರ್‌ ಫೈಲ್ಸ್‌"


ಮಾಹಿತಿಯ ಪ್ರಕಾರ ಈ ಸಿನಿಮಾ ಶುಕ್ರವಾರ 3.55 ಕೋಟಿ ರೂ., ಶನಿವಾರ 8.50 ಕೋಟಿ ರೂ., ಭಾನುವಾರ 15.10 ಕೋಟಿ ರೂ., ಸೋಮವಾರ 15.05 ಕೋಟಿ ರೂ. ಮಂಗಳವಾರ 18 ಕೋಟಿ ರೂ. ಮತ್ತು  ಬುಧವಾರ 19.05 ಕೋಟಿ ರೂ. ಒಟ್ಟು ಗಳಿಕೆ 79.25 ಕೋಟಿ ರೂ.ಗೆ ತಲುಪಿದೆ ಎಂದು ಹೇಳಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.