ಮುಂಬೈ: ಚಲನಚಿತ್ರ ನಿರ್ಮಾಪಕಿ-ನೃತ್ಯ ನಿರ್ದೇಶಕಿ ಫರಾ ಖಾನ್ ಕುಂದರ್ ಬುಧವಾರ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿದೆಮತ್ತು ಶೀಘ್ರದಲ್ಲೇ ಚೇತರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ಮೈ ಹೂನ್ ನಾ", "ಓಂ ಶಾಂತಿ ಓಂ" ಮತ್ತು "ಹ್ಯಾಪಿ ನ್ಯೂ ಇಯರ್" ನಂತಹ ಚಿತ್ರಗಳಿಗೆ ಹೆಸರುವಾಸಿಯಾದ , ಫರಾ ಖಾನ್ ಕುಂದರ್ (Farah Khan Kunder) ಸಂಪೂರ್ಣವಾಗಿ ಲಸಿಕೆ ಹಾಕಿದರೂ ಆಕೆ ವೈರಸ್‌ಗೆ ತಗುಲಿರುವುದಾಗಿ ಅವರು ಹೇಳಿದ್ದಾರೆ.


ಇದನ್ನೂ ಓದಿ: ಕರಣ್ ಜೋಹರ್ ಮದುವೆಯಾಗಲು ಬಯಸಿದ್ದ ನಿರ್ಮಾಪಕಿ ಫರಾಹ್ ಖಾನ್...!


"ಡಬಲ್ ವ್ಯಾಕ್ಸಿನೇಷನ್ ಮಾಡಲಾಗಿದ್ದರೂ ಮತ್ತು ಹೆಚ್ಚಾಗಿ ಡಬಲ್ ವ್ಯಾಕ್ಸ್ಡ್ ಜನರೊಂದಿಗೆ ಕೆಲಸ ಮಾಡುತ್ತಿದ್ದರೂ, ನನಗೆ ಕೋವಿಡ್‌ ಇರುವುದು ಧೃಢಪಟ್ಟಿದೆ.ಪರೀಕ್ಷೆಗೆ ಒಳಗಾಗಲು ನಾನು ಸಂಪರ್ಕ ಹೊಂದಿದ ಎಲ್ಲರಿಗೂ ಈಗಾಗಲೇ ತಿಳಿಸಿದ್ದೇನೆ" ಎಂದು 56 ವರ್ಷದ ನಿರ್ಮಾಪಕಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.ಹಣ್ಣು ಖರೀದಿ ವೇಳೆ Farah Khan ಮಾಡಿರುವ ಎಡವಟ್ಟು ; ವೈರಲ್ ಆಗುತ್ತಿದೆ ವಿಡಿಯೋ


"ಆದಾಗ್ಯೂ, ನಾನು ಯಾರನ್ನಾದರೂ ಮರೆತಿದ್ದರೆ (ವೃದ್ಧಾಪ್ಯ ಮತ್ತು ಮರೆಯಾಗುತ್ತಿರುವ ಸ್ಮರಣೆಯಿಂದಾಗಿ), ದಯವಿಟ್ಟು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇದೆ" ಎಂದು ಅವರು ಹೇಳಿದರು.


ಫರಾ ಪ್ರಸ್ತುತ "ಜೀ ಕಾಮಿಡಿ ಶೋ" ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕುಂದ್ರಾ ಜೊತೆ ಡ್ಯಾನ್ಸ್ ರಿಯಾಲಿಟಿ ಶೋಗೆ ಸಹ ಚಿತ್ರೀಕರಿಸಿದ್ದರು.


ಮಂಗಳವಾರ, ಮುಂಬೈ 323 ಹೊಸ COVID -19 ಪ್ರಕರಣಗಳನ್ನು ವರದಿ ಮಾಡಿವೆ  ಈಗ ಒಟ್ಟು ಪ್ರಕರಣಗಳ ಸಂಖ್ಯೆ 7,44,155  ಮತ್ತು ಸಾವಿನ ಸಂಖ್ಯೆ 15,977 ಕ್ಕೆ ತಲುಪಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ