Tribble Riding: ಶೀಘ್ರವೇ ಗೋಲ್ಡನ್ ಸ್ಟಾರ್ ಗಣೇಶ್ ಕೊಡ್ತಾರೆ ಭಯಂಕರ ಸುದ್ದಿ..!
ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ತ್ರಿಬಲ್ ರೈಡಿಂಗ್’ ಚಿತ್ರದ ‘ಯಟ್ಟಾ ಯಟ್ಟಾ ಯಟ್ಟಾ’ ಎಂಬ ಹಾಡು ಈಗಾಗಲೇ ಅಪಾರ ಜನಮೆಚ್ಚುಗೆ ಗಳಿಸಿದೆ.
ಬೆಂಗಳೂರು: ಚಂದನವನದಲ್ಲಿ ಸಖತ್ ರಿಚ್ ಮತ್ತು ಅದ್ಭುತ ಸ್ಟೋರಿ ಹೊಂದಿರೋ ಸಿನಿಮಾಗಳು ರಿಲೀಸ್ ಆಗುತ್ತಲೇ ಇವೆ. ಇಡೀ ಚಿತ್ರರಂಗವೇ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡೋ ಹಾಗೇ ನಮ್ಮ ಕನ್ನಡ ಇಂಡಸ್ಟ್ರಿ ಬೆಳೆದು ನಿಂತಿದೆ. ಸಾಲು ಸಾಲು ಅತ್ಯದ್ಭುತ ಕನ್ನಡ ಸಿನಿಮಾಗಳು ಇತ್ತೀಚಿಗೆ ಎಲ್ಲೆಡೆ ಸದ್ದು ಮಾಡುತ್ತಿವೆ. ಇದೀಗ ಆ ಪಟ್ಟಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಅದುವೇ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ "ತ್ರಿಬಲ್ ರೈಡಿಂಗ್".
ಹೌದು, ‘ತ್ರಿಬಲ್ ರೈಡಿಂಗ್’ ಟೈಟಲ್ಲೇ ಒಂಥರಾ ಥ್ರಿಲ್ ಕೊಡುತ್ತೆ. ‘ಗಾಳಿಪಟ-2’ ಸಕ್ಸಸ್ ಬಳಿಕ ಇಲ್ಲಿಯವರೆಗೆ ಮಾಡಿದ ಅಷ್ಟೂ ಪಾತ್ರಗಳಿಗಿಂತ ಇಲ್ಲಿ ಕಂಪ್ಲೀಟ್ ಭಿನ್ನವಾಗಿ ಕಾಣಲು ಗಣಿ ಕೂಡ ಸಜ್ಜಾಗಿದ್ದಾರೆ. ಮೂವರು ನಾಯಕಿಯರ ಜೊತೆ ಗಣೇಶ್ ‘ಚೆಲ್ಲಾಟ’ ಆಡ್ತಾರಾ...? ‘ಮುಂಗಾರುಮಳೆ’ಯಲ್ಲಿ ನೆನೆದು ಪಂಚಿಂಗ್ ಡೈಲಾಗ್ ಹೇಳ್ತಾರಾ...? ಅಥವಾ ‘ತ್ರಿಬಲ್ ರೈಡಿಂಗ್’ ಹೋಗಿ ಗಾಳಿಪಟ ಹಾರಿಸುತ್ತಾರಾ..? ಹೀಗೆ ಹಲವು ಪ್ರಶ್ನೆಗಳನ್ನು ಫ್ಯಾನ್ಸ್ ಕೇಳುತ್ತಿದ್ದಾರೆ. ಯಾವಾಗ ‘ತ್ರಿಬಲ್ ರೈಡಿಂಗ್’ ಸಿನಿಮಾ ರಿಲೀಸ್ ಮಾಡ್ತೀರಾ ಗಣೇಶ್ ಸರ್ ಅಂತಾ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಭೂಮಿಕಾ ಚಿತ್ರಮಂದಿರದಲ್ಲಿ "ಕಾಳಿಪ್ರಸಾದ್" ಚಿತ್ರಕ್ಕೆ ಚಾಲನೆ
ಮೂಲಗಳ ಪ್ರಕಾರ ‘ತ್ರಿಬಲ್ ರೈಡಿಂಗ್’ ಸಿನಿಮಾ ನೋಡಲು ನೀವು ರೆಡಿಯಾಗಬಹುದು. ಅತೀ ಶೀಘ್ರದಲ್ಲಿಯೇ ಈ ಸಿನಿಮಾ ರಿಲೀಸ್ ಆಗೋ ಸೂಚನೆ ‘ಜೀ ಕನ್ನಡ ನ್ಯೂಸ್’ಗೆ ಸಿಕ್ಕಿದೆ. ‘ತ್ರಿಬಲ್ ರೈಡಿಂಗ್’ ಚಿತ್ರದ ‘ಯಟ್ಟಾ ಯಟ್ಟಾ ಯಟ್ಟಾ’ ಎಂಬ ಶೀರ್ಷಿಕೆಯ ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮೂವರು ನಾಯಕಿಯರಾದ ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ಮತ್ತು ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ಇದು ಈಗಾಗಲೇ ಅಪಾರ ಜನಮೆಚ್ಚುಗೆ ಗಳಿಸಿದೆ.
ರ್ಯಾಪರ್ ಚಂದನ್ ಶೆಟ್ಟಿ ಮತ್ತು ಮಂಗ್ಲಿ ಹಾಡಿರುವ ಸಾಯಿ ಕಾರ್ತಿಕ್ ಸಂಯೋಜನೆಯ ಈ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್‌ನಲ್ಲಿ ಸದ್ಯ ಈ ಸಾಂಗ್ ಟ್ರೆಂಡಿಂಗ್‍ನಲ್ಲಿದೆ. ಮಹೇಶ್ ಗೌಡ ನಿರ್ದೇಶನದ ಈ ಚಿತ್ರವನ್ನು ಇದೇ ಮೊದಲ ಬಾರಿಗೆ ರಾಮ್ ಗೋಪಾಲ್ ಅವರು ನಿರ್ಮಿಸಿದ್ದಾರೆ. ‘ತ್ರಿಬಲ್ ರೈಡಿಂಗ್’ ಆಕ್ಷನ್, ಥ್ರಿಲ್ಲರ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಸಿನಿಮಾ ಆಗಿದೆ. ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಉಮೇಶ್ ಮತ್ತು ಡಿಂಗ್ರಿ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Sudeep and Gayle : ಸೂಪರ್ T10 ಕ್ರಿಕೆಟ್ ಲೀಗ್ ಕುರಿತು ಬಿಗ್ ಅಪ್‌ಡೇಟ್ ಕೊಟ್ಟ ಕಿಚ್ಚ ಸುದೀಪ್.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.