ಜೀ ಕನ್ನಡದಲ್ಲಿ ಅಕ್ಟೋಬರ್ 15 ರಂದು ವಿಕ್ರಾಂತ್ ರೋಣ ಚಿತ್ರದ ಅದ್ಧೂರಿ World Television premiere

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಒಂದು ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಹೊಸತೊಂದು ಪ್ಯಾಂಟಸಿ ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡ ಹೋದ ಹೆಗ್ಗಳಿಕೆ ಹೊಂದಿದೆ.

Written by - Zee Kannada News Desk | Last Updated : Oct 13, 2022, 10:06 PM IST
  • ಇದೀಗ ಕನ್ನಡದ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡ ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾವನ್ನು ಅದ್ಧೂರಿಯಾಗಿ World Television premiere ಮಾಡಲಿದೆ.
ಜೀ ಕನ್ನಡದಲ್ಲಿ ಅಕ್ಟೋಬರ್ 15 ರಂದು ವಿಕ್ರಾಂತ್ ರೋಣ ಚಿತ್ರದ ಅದ್ಧೂರಿ World Television premiere title=

ಬೆಂಗಳೂರು: ವಿಕ್ರಾಂತ್ ರೋಣ , ಕನ್ನಡ ಸಿನಿ ಪ್ರಿಯರು ಹಿಂದೆಂದೂ ಕಾಣದಂತ 3D ಅನುಭವ ನೀಡಿದಂತ ಅತ್ಯದ್ಭುತ ದೃಶ್ಯ ವೈಭವ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಒಂದು ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಹೊಸತೊಂದು ಪ್ಯಾಂಟಸಿ ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡ ಹೋದ ಹೆಗ್ಗಳಿಕೆ ಹೊಂದಿದೆ.

ಇದೀಗ ಕನ್ನಡದ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡ ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾವನ್ನು ಅದ್ಧೂರಿಯಾಗಿ World Television premiere ಮಾಡಲಿದೆ. 

ಏಕಕಾಲಕ್ಕೆ ಹಲವಾರು ಭಾಷೆಗಳಲ್ಲಿ ತೆರೆಕಂಡು ಅದ್ಭುತ ಯಶಸ್ಸುಗಳಿಸಿರುವ ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ.ರಂಗೀತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಇದರ ನಿರ್ದೇಶನದ ಜವಾಬ್ಧಾರಿ ಹೊತ್ತು ಯಶಸ್ವಿಯಾಗಿದ್ದರೇ ಜಾಕ್ ಮಂಜು ಅವರು ಹಣಹೂಡಿಕೆ ಮಾಡಿದ್ದಾರೆ.

ಚಂದನವನದ ಸದ್ಯದ ಟ್ರೆಂಡ್ ಸೆಟ್ಟಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ  ಸಂಯೋಜನೆ ಹಾಗು ವಿಲಿಯಮ್ ಡೇವಿಡ್ ಅವರ ಭರ್ಜರಿ ಛಾಯಾಗ್ರಹಣವಿದೆ. ಬಹುಕೋಟಿ ವೆಚ್ಚದ ಈ ಚಿತ್ರದ ಹಂಚಿಕೆ ಜವಾಬ್ಧಾರಿಯನ್ನು ದೇಶದ ಅತಿದೊಡ್ಡ ಮನರಂಜನಾ ಸಂಸ್ಥೆಯಾದ ಜೀ ಸ್ಟುಡಿಯೋಸ್ ವಹಿಸಿದಿದ್ದು ವಿಶೇಷ .

ಇನ್ನು ವಿಕ್ರಾಂತ್ ರೋಣ ಚಿತ್ರ ಶ್ರೀಮಂತ ತಾರಾಗಣಕ್ಕೆ ಸಾಕ್ಷಿಯಾಗಿದ್ದು ಕಿಚ್ಚ ಸುದೀಪ್ ಸೇರಿದಂತೆ  ನಿರೂಪ್ ಭಂಡಾರಿ , ನೀತಾ ಅಶೋಕ್ , ಜಾಕ್ವಲಿನ್ ಫರ್ನಾಂಡಿಸ್ ಹಾಗು ಇನ್ನು ಅನೇಕರು ಇದರ ಭಾಗವಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟ ಹಾರಿಸಿದ ಹೆಮ್ಮೆಯ ವಿಷಯಕ್ಕೆ ಪಾತ್ರವಾಗಿದೆ ಈ ಚಿತ್ರತಂಡ.

ಇನ್ನು ಕಿಚ್ಚ ಸುದೀಪ್ ಅವರು ಜಾಕ್ವಲಿನ್ ಫರ್ನಾಂಡಿಸ್  " ಜೊತೆ ಹೆಜ್ಜೆ ಹಾಕಿರುವ ರಾರಾ ರಕ್ಕಮ್ಮ ಹಾಡು"  ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದು ಈಗಲೂ ಸೋಷಿಯಲ್ ಮೀಡಿಯಾದಲ್ಲಿ , ರೀಲ್ಸ್ ಗಳಲ್ಲಿ ಅತಿಹೆಚ್ಚು ಬಳಕೆಯಲ್ಲಿದೆ.

ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾ ಅದ್ಧೂರಿಯಾಗಿ World Television premiere ಆಗುತ್ತಿದ್ದು ಮನೆಮಂದಿಯಲ್ಲಾ ಕೂತು ನೋಡಿ ವಿಶೇಷವಾದ ಪ್ಯಾಂಟಸಿ ಲೋಕಕ್ಕೆ ಹೋಗಿ ಎಂಜಾಯ್ ಮಾಡಿ ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News