ಬೆಂಗಳೂರು : ಕನ್ನಡ ಸಿನಿಮಾಗಳು ಹಾಲಿವುಡ್‌ಗೂ ಶಾಕ್‌ ಕೊಡುವಷ್ಟರ ಮಟ್ಟಿಗೆ ಬೆಳೆದು ನಿಂತಿವೆ. ಅದರಲ್ಲೂ ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' (Vikrant Rona)ಸಿನಿಮಾ ಜಗತ್ತಿನಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿದೆ. ಇಂದು ಬೆಳಗ್ಗೆ 9.55ಕ್ಕೆ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಆಗಿದ್ದು, ಯುಟ್ಯೂಬ್‌ನಲ್ಲಿ ಸುನಾಮಿ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ಈ ಮೊದಲೇ ಊಹಿಸಿದಂತೆ 'ವಿಕ್ರಾಂತ್‌ ರೋಣ' ಟೀಸರ್‌ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಹೈಪ್‌ ಕ್ರಿಯೇಟ್‌ ಮಾಡಿದೆ. ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ, ಕನ್ನಡದ 'ವಿಕ್ರಾಂತ್‌ ರೋಣ' ( Vikrant Rona) ಈಗಾಗಲೇ ಮೋಷನ್‌ ಪೋಸ್ಟರ್‌ ಹಾಗೂ ವಿಡಿಯೋ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈಗ 'ವಿಕ್ರಾಂತ್‌ ರೋಣ' ಟೀಸರ್‌ ದಾಖಲೆಗಳನ್ನ ಪುಡಿ ಪುಡಿ ಮಾಡಲು ಮುನ್ನುಗ್ಗುತ್ತಿದೆ.


ಇದನ್ನೂ ಓದಿ : ಕನ್ನಡ ಟ್ರೇಲರ್ ರಿಲೀಸ್ ಮಾಡಲಿದ್ದಾರೆ ನಟ ಸುದೀಪ್..! ಎಲ್ಲೆಲ್ಲೂ 'ವಿಕ್ರಾಂತ್ ರೋಣ' ಹವಾ..!


ಹಾಲಿವುಡ್‌ನಲ್ಲೂ ಹವಾ..!
'ವಿಕ್ರಾಂತ್‌ ರೋಣ' ಚಿತ್ರದ ಮತ್ತೊಂದು ಸ್ಪೆಷಲ್‌ ಸಮಾಚಾರ ಏನಂದ್ರೆ, ಹಾಲಿವುಡ್‌ನಲ್ಲೂ ಹವಾ ಎಬ್ಬಿಸಲಿದೆ ನಟ ಸುದೀಪ್‌ ಅವರ ಸಿನಿಮಾ (Vikrant Rona in Hollywood). ಇದೇ ಮೊದಲ ಬಾರಿಗೆ ಕನ್ನಡ ಚಿತ್ರ ಇಂಗ್ಲಿಷ್‌ ಭಾಷೆಯಲ್ಲೂ ಡಬ್‌ ಆಗಿ ಅಖಾಡಕ್ಕೆ ಇಳಿಯುತ್ತಿದೆ. ಈ ಮೂಲಕ ಆಂಗ್ಲರಿಗೂ ಕನ್ನಡ ಸಿನಿಮಾ ತೋರಿಸಲು ಸಜ್ಜಾಗಿದೆ 'ವಿಕ್ರಾಂತ್‌ ರೋಣ' ಟೀಂ. 'ವಿಕ್ರಾಂತ್‌ ರೋಣ' ಶೂಟಿಂಗ್‌ ಆರಂಭ ಆದಾಗಿನಿಂದಲೂ ಸಾಕಷ್ಟು ಗಮನ ಸೆಳೆದಿತ್ತು. ಬ್ಲಾಕ್‌ ಬಸ್ಟರ್‌ ಹಿಟ್‌ ಆಗುವ ಮುನ್ಸೂಚನೆ ನೀಡಿತ್ತು. ಇದೀಗ ಟೀಸರ್‌ ರಿಲೀಸ್‌ ಆಗಿದ್ದು, ನಿರೀಕ್ಷೆಗಳ ಶಿಖರ ಮುಗಿಲು ಮುಟ್ಟಿದೆ (Vikrant Rona teaser release).


 


#VikrantRonaReleaseTeaser: ಹಾಲಿವುಡ್ ನಲ್ಲೂ ಕಿಚ್ಚ ಸುದೀಪ್ ಹವಾ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.