ಅಬ್ಬಬ್ಬಾ..ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಫ್ಯಾನ್ಸ್‌ ಸಂಭ್ರಮ..?

Written by - Malathesha M | Last Updated : Apr 1, 2022, 06:36 PM IST
  • ನಾಳೆ ಯುಗಾದಿ ಹಬ್ಬದ ಜೊತೆಗೆ 'ವಿಕ್ರಾಂತ್‌ ರೋಣ' ಸಂಭ್ರಮವೂ ಜೋರಾಗಿ ಇರಲಿದೆ.
  • 'ವಿಕ್ರಾಂತ್‌ ರೋಣ' ಫಸ್ಟ್‌ ಲುಕ್‌ ಹಾಗೂ ವಿಡಿಯೋ ನೋಡಿದ ಮೇಲೆ ದೇಶಾದ್ಯಂತ ಸಂಚಲನ ಸೃಷ್ಟಿಯಾಗಿದೆ.
ಅಬ್ಬಬ್ಬಾ..ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಫ್ಯಾನ್ಸ್‌ ಸಂಭ್ರಮ..? title=

ಒಂದು.. ಎರಡು.. ಮೂರು.. ಹೀಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ಕೌಂಟ್‌ಡೌನ್‌ ಶುರುಮಾಡಿದ್ದಾರೆ.ಯಾಕಂದ್ರೆ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಆಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ನಾಳೆ ಬೆಳಗ್ಗೆ 9.55ಕ್ಕೆ 'ವಿಕ್ರಾಂತ್‌ ರೋಣ' ಸಿನಿಮಾ ಟೀಸರ್ ರಿಲೀಸ್‌ ಆಗಲಿದೆ.‌ ಹೀಗಾಗಿ ಯುಗಾದಿ ಸಂಭ್ರಮದ ಜೊತೆಗೆ 'ವಿಕ್ರಾಂತ್‌ ರೋಣ' ಸಂಭ್ರಮವೂ ಕಳೆಗಟ್ಟಿದೆ.

ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ, ಕನ್ನಡದ 'ವಿಕ್ರಾಂತ್‌ ರೋಣ (Vikrant Rona)' ಈಗಾಗಲೇ ಮೋಷನ್‌ ಪೋಸ್ಟರ್‌ ಹಾಗೂ ವಿಡಿಯೋ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.ಕನ್ನಡ ಸಿನಿಮಾ ಅಭಿಮಾನಿಗಳು ಯಾವಾಗ 'ವಿಕ್ರಾಂತ್‌ ರೋಣ' ಕಣ್ತುಂಬಿಕೊಳ್ಳುವುದು ಅಂತಾ ಕಾಯುತ್ತಿದ್ದಾರೆ.ಈ ಹೊತ್ತಲ್ಲೇ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಆಗುತ್ತಿದ್ದು, ಫ್ಯಾನ್ಸ್‌ ಮೈಯಲ್ಲಿ ಕರೆಂಟ್‌ ಹರಿಯೋದು ಪಕ್ಕಾ ಆಗಿದೆ.

ಇದನ್ನೂ ಓದಿ: ನಟ ಕಿಚ್ಚ ಸುದೀಪ್‌ಗೆ ಸಲ್ಮಾನ್‌ ಖಾನ್‌ ಸಾಥ್..! ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಹವಾ..? 

ಹಾಲಿವುಡ್‌ನಲ್ಲೂ ಹವಾ..!

'ವಿಕ್ರಾಂತ್‌ ರೋಣ' ಚಿತ್ರದ ಮತ್ತೊಂದು ಸ್ಪೆಷಲ್‌ ಸಮಾಚಾರ ಏನಂದ್ರೆ, ಹಾಲಿವುಡ್‌ನಲ್ಲೂ ಹವಾ ಎಬ್ಬಿಸಲಿದೆ ನಟ ಸುದೀಪ್‌ (Kiccha Sudeep) ಅವರ ಸಿನಿಮಾ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರ ಇಂಗ್ಲಿಷ್‌ ಭಾಷೆಯಲ್ಲೂ ಡಬ್‌ ಆಗಿ ಅಖಾಡಕ್ಕೆ ಇಳಿಯುತ್ತಿದೆ. ಈ ಮೂಲಕ ಆಂಗ್ಲರಿಗೂ ಕನ್ನಡ ಸಿನಿಮಾ ತೋರಿಸಲು ಸಜ್ಜಾಗಿದೆ 'ವಿಕ್ರಾಂತ್‌ ರೋಣ' ಟೀಂ.'ವಿಕ್ರಾಂತ್‌ ರೋಣ' ಶೂಟಿಂಗ್‌ ಆರಂಭ ಆದಾಗಿನಿಂದಲೂ ಸಾಕಷ್ಟು ಗಮನ ಸೆಳೆದಿತ್ತು.ಬ್ಲಾಕ್‌ ಬಸ್ಟರ್‌ ಹಿಟ್‌ ಆಗುವ ಮುನ್ಸೂಚನೆ ನೀಡಿತ್ತು.ಇನ್ನು 'ವಿಕ್ರಾಂತ್‌ ರೋಣ' ಫಸ್ಟ್‌ ಲುಕ್‌ ಹಾಗೂ ವಿಡಿಯೋ ನೋಡಿದ ಮೇಲೆ ದೇಶಾದ್ಯಂತ ಸಂಚಲನ ಸೃಷ್ಟಿಯಾಗಿದೆ.

ಇದನ್ನೂ ಓದಿ: Vikrant Rona:ವಿಕ್ರಾಂತ್ ರೋಣ ತಂಡದಿಂದ ಬಿಗ್‌ ಅಪ್‌ಡೇಟ್‌! ಕಿಚ್ಚನ ಫ್ಯಾನ್ಸ್‌ಗೆ ಮತ್ತಷ್ಟು ವಿಶೇಷವಾಗಿರಲಿದೆ ಈ ಯುಗಾದಿ

ನಾಳೆ ಯುಗಾದಿ ಹಬ್ಬದ ಜೊತೆಗೆ 'ವಿಕ್ರಾಂತ್‌ ರೋಣ' ಸಂಭ್ರಮವೂ ಜೋರಾಗಿ ಇರಲಿದೆ. ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿಮಾನಿ ಬಳಗ ಟೀಸರ್‌ ಸಂಭ್ರಮವನ್ನು ಹಂಚಿಕೊಳ್ಳಲು ಸಜ್ಜಾಗಿದ್ದು, ನಾಳೆ ಕರುನಾಡಲ್ಲಿ ಎರಡೆರಡು ಹಬ್ಬ ಎದುರಾಗೋದು ಪಕ್ಕಾ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News