ಕನ್ನಡ ಟ್ರೇಲರ್ ರಿಲೀಸ್ ಮಾಡಲಿದ್ದಾರೆ ನಟ ಸುದೀಪ್..! ಎಲ್ಲೆಲ್ಲೂ 'ವಿಕ್ರಾಂತ್ ರೋಣ' ಹವಾ..!

Written by - Malathesha M | Last Updated : Apr 2, 2022, 12:53 AM IST
  • ಹಾಲಿವುಡ್ ಟೀಸರ್ ರಿಲೀಸ್ ಮಾಡಲು ಭಾರತ ಕ್ರಿಕೆಟ್ ತಂಡದ ಮಾಜಿ ಓಪನರ್, ಭರ್ಜರಿ ಬ್ಯಾಟ್ಸ್‌ಮನ್ ಸೆಹವಾಗ್ ಎಂಟ್ರಿ ಕೊಡಲಿದ್ದು, ಇದರ ನಡುವೆ ಮತ್ತೊಂದು ವಿಶೇಷತೆ ಏನಪ್ಪಾ ಅಂದ್ರೆ ಕನ್ನಡದ ಟೀಸರ್ ಅನ್ನ ಖುದ್ದು ನಟ ಸುದೀಪ್ ಅವರೇ ರಿಲೀಸ್ ಮಾಡಲಿದ್ದಾರೆ.
 ಕನ್ನಡ ಟ್ರೇಲರ್ ರಿಲೀಸ್ ಮಾಡಲಿದ್ದಾರೆ ನಟ ಸುದೀಪ್..! ಎಲ್ಲೆಲ್ಲೂ 'ವಿಕ್ರಾಂತ್ ರೋಣ' ಹವಾ..! title=

ಎಲ್ಲೆಲ್ಲೂ 'ವಿಕ್ರಾಂತ್ ರೋಣ' ಹವಾ ಜೋರಾಗಿದೆ. ಕನ್ನಡ ನೆಲದ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಟೀಸರ್ ಇನ್ನೂ ಕೆಲವೇ ಗಂಟೆಗಳಲ್ಲಿ ರಿಲೀಸ್ ಆಗಲಿದ್ದು, ಇದೇ ಹೊತ್ತಲ್ಲಿ ತಮ್ಮ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಸಿಹಿಸುದ್ದಿ ನೀಡಿದ್ದಾರೆ. ಅದೇನು ಅಂತಾ ಮುಂದೆ ತಿಳಿಯೋಣ ಬನ್ನಿ.

ಇದನ್ನೂ ಓದಿ: #VikrantRonaReleaseTeaser: ಹಾಲಿವುಡ್ ನಲ್ಲೂ ಕಿಚ್ಚ ಸುದೀಪ್ ಹವಾ..!

ಇಂದು ಬೆಳಗ್ಗೆ 9.55ಕ್ಕೆ 'ವಿಕ್ರಾಂತ್‌ ರೋಣ' (Vikrant Rona) ಸಿನಿಮಾ ಟೀಸರ್ ರಿಲೀಸ್‌ ಆಗಲಿದೆ.‌ ಈ ಕಾರ್ಯಕ್ರಮದಲ್ಲಿ ಹಲವು ಭಾಷೆಯಲ್ಲಿ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ (Vikrant Rona Release Teaser) ಆಗಲಿದೆ.  ಟೀಸರ್‌ ರಿಲೀಸ್‌ಗೆ ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್ ಲಾಲ್ & ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ ಸಾಥ್‌ ನೀಡಲಿದ್ದಾರೆ. ಮತ್ತೊಂದು ಕಡೆ ತಮಿಳು ಭಾಷೆಯ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ಗೆ ನಟ ಸಿಂಬು ಸಾಥ್‌ ನೀಡಲಿದ್ದಾರೆ. ಇದರ ಜೊತೆಗೆ 'ವಿಕ್ರಾಂತ್‌ ರೋಣ' ಹಿಂದಿ ಟೀಸರ್‌ ಬಿಡುಗಡೆಗೆ ನಟ ಸಲ್ಮಾನ್‌ ಖಾನ್‌ ಸಾಥ್‌ ಕೊಡಲಿದ್ದಾರೆ. ಹಾಗೇ ಹಾಲಿವುಡ್ ಟೀಸರ್ ರಿಲೀಸ್ ಮಾಡಲು ಭಾರತ ಕ್ರಿಕೆಟ್ ತಂಡದ ಮಾಜಿ ಓಪನರ್, ಭರ್ಜರಿ ಬ್ಯಾಟ್ಸ್‌ಮನ್ ಸೆಹವಾಗ್ ಎಂಟ್ರಿ ಕೊಡಲಿದ್ದು, ಇದರ ನಡುವೆ ಮತ್ತೊಂದು ವಿಶೇಷತೆ ಏನಪ್ಪಾ ಅಂದ್ರೆ ಕನ್ನಡದ ಟೀಸರ್ ಅನ್ನ ಖುದ್ದು ನಟ ಸುದೀಪ್ ಅವರೇ ರಿಲೀಸ್ ಮಾಡಲಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ..ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಫ್ಯಾನ್ಸ್‌ ಸಂಭ್ರಮ..?

ಇಲ್ಲಿಯವರೆಗೂ ಯುಗಾದಿ ಸಂಭ್ರಮದಲ್ಲಿದ್ದ ನಟ ಸುದೀಪ್ ಅಭಿಮಾನಿ ಬಳಗಕ್ಕೆ ಈ ಶುಭ ಸಮಾಚಾರ ಮತ್ತೊಂದು ಹಬ್ಬವನ್ನು ಕಣ್ಣೆದುರು ತೆರೆದಿಡುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಫ್ಯಾನ್ಸ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ 'ವಿಕ್ರಾಂತ್‌ ರೋಣ' ಟೀಸರ್ ಯೂಟ್ಯೂಬ್‌ನಲ್ಲಿ ಸುನಾಮಿ ಎಬ್ಬಿಸೋದು ಪಕ್ಕಾ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News