ನವದೆಹಲಿ : ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಮನೆಯಿಂದ ಹೊರಬಂದಾಗಲೆಲ್ಲಾ ಅವರು ತಮ್ಮ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ. ಆಗಸ್ಟ್ 30 ಅವರ ಜೀವನದಲ್ಲಿ ಬಹಳ ವಿಶೇಷವಾದ ದಿನ. ಯಾಕೆ ಅಂದರೆ ಅಂದು ಅವರ ಮಗ ಅಗಸ್ತ್ಯ ಹುಟ್ಟಿದ ದಿನ, ನಾಳೆಗೆ ಸರಿಯಾಗಿ 1 ವರ್ಷ ತುಂಬಿತು. ಅವರ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಈ ಕುರಿತು ಕೆಲವು ಫೋಟೊಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಅದಕ್ಕೆ ಅಭಿಮಾನಿಗಳು ಆ ಫೋಟೊಗಳಿಗೆ  ಅವರು ಮತ್ತೆ ತಾಯಿಯಾಗಲಿದ್ದಾರೆ ಎಂದು ಭಾವಿಸಿ ಶುಭ ಹಾರೈಸಿದ್ದಾರೆ.


COMMERCIAL BREAK
SCROLL TO CONTINUE READING

ನತಾಶಾ ಮತ್ತೆ ತಾಯಿಯಾಗಲಿದ್ದಾರೆ?


ಹಾರ್ದಿಕ್ ಪಾಂಡ್ಯ(Hardik Pandya) ಅವರ ಪತ್ನಿ ನತಾಶಾ ಸ್ಟ್ಯಾಂಕೋವಿಚ್ ಅವರು ಗರ್ಭಿಣಿಯಾಗಿರುವ ಕೆಲವು ಹಳೆಯ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಹಳೆಯದಾಗಿದ್ದು. ಇವುಗಳನ್ನ ಅವರು ತಮ್ಮ ಮಗನ ಹುಟ್ಟುಹಬ್ಬದಂದು ಈ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆದರೆ ಅಭಿಮಾನಿಗಳನ್ನು ನೋಡಿ ಆಕೆ ಮತ್ತೆ ತಾಯಿಯಾಗಲಿದ್ದಾರೆ ಎಂದು ಶುಭಹಾರೈಸುತ್ತಿದ್ದಾರೆ.


HC To Shilpa Shetty:'ಇದೆಂಥಾ ಮಾನ ಹಾನಿ?', ಮಾಧ್ಯಮ ವರದಿಗಾರಿಕೆ ಪ್ರಶ್ನಿಸಿ HC ತಲುಪಿದ ಶಿಲ್ಪಾ ಶೆಟ್ಟಿಗೆ ಶಾಕ್ ನೀಡಿದ ನ್ಯಾಯಾಲಯ


ಅಗಸ್ತ್ಯಗೆ ನಾಳೆಗೆ 1 ವರ್ಷ :


ಅದೇ ಸಮಯದಲ್ಲಿ, ನತಾಶಾ ಸ್ಟ್ಯಾಂಕೋವಿಕ್(Natasa Stankovic) ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನ  ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಅಗಸ್ತ್ಯರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.


ಹಾರ್ದಿಕ್ ಪಾಂಡ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಹಾರ್ದಿಕ್ ಅವರು ತಮ್ಮ ಮಗನೊಂದಿಗೆ ಕಳೆದ ಎಲ್ಲಾ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.


'ಪ್ರೀತಿ ಎಂದರೇನು ಎಂದು ನೀವು ಹೇಳಿದ್ದೀರಿ'


ಹಾರ್ದಿಕ್ ಪಾಂಡ್ಯಈ ವೀಡಿಯೊದ ಶೀರ್ಷಿಕೆಯಲ್ಲಿ 'ನಿಮಗೆ ಒಂದು ವರ್ಷ, ಅಗಸ್ತ್ಯ(Agastya) ನೀನು ನನ್ನ ಹೃದಯ ಮತ್ತು ಆತ್ಮ ಎಂದು ನಾನು ನಂಬಲು ಸಾಧ್ಯವಿಲ್ಲ. ಪ್ರೀತಿ ಏನೆಂದು ನೀವು ಹೇಳಿದ್ದೀರಿ, ನನಗೂ ಅಷ್ಟಾಗಿ ತಿಳಿದಿರಲಿಲ್ಲ. ನೀನು ನನ್ನ ಜೀವನದ ದೊಡ್ಡ ಆಶೀರ್ವಾದ ಮತ್ತು ನೀನು ಇಲ್ಲದ ದಿನವನ್ನು ನಾನು ಊಹಿಸಲು ಸಾಧ್ಯವಿಲ್ಲ. ಮನಸ್ಸಿನಿಂದ ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.



ಇದನ್ನೂ ಓದಿ : Viral Photo : ಅನುಷ್ಕಾ ಶರ್ಮಾ ಶೇರ್ ಮಾಡಿದ ಫೋಟೋದಲ್ಲಿ ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಮಗಳು!


ಗುಜರಾತ್‌ನಲ್ಲಿ ಜನಿಸಿದ  ಅಗಸ್ತ್ಯ :


ಹಾರ್ದಿಕ್ ಪಾಂಡ್ಯ ನತಾಶಾ ಸ್ಟ್ಯಾಂಕೋವಿಕ್‌ಗೆ ಪ್ರಸ್ತಾಪಿಸಿದ ನಂತರ 2020 ರ ಆರಂಭದಲ್ಲಿ ದುಬೈ(Dubai)ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಸೆಲೆಬ್ರಿಟಿ ದಂಪತಿಗಳು ತಮ್ಮ ಮಗ ಅಗಸ್ತ್ಯನನ್ನ 30 ಜುಲೈ 2020 ರಂದು ಈ ಜಗತ್ತಿಗೆ ಸ್ವಾಗತಿಸಿದರು. ಈ ಮಗು ಗುಜರಾತ್‌ನ ಆನಂದ ಜಿಲ್ಲೆಯ ಆಕಾಂಕ್ಷ ಆಸ್ಪತ್ರೆಯಲ್ಲಿ ಜನಿಸಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ