Viral Photo : ಅನುಷ್ಕಾ ಶರ್ಮಾ ಶೇರ್ ಮಾಡಿದ ಫೋಟೋದಲ್ಲಿ ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಮಗಳು!

ಈ ಫೋಟೋದಲ್ಲಿ, ಅನುಷ್ಕಾ ಮತ್ತು ವಿರಾಟ್ ಜೋಡಿಯು ಅದ್ಭುತವಾಗಿ ಕಾಣುತ್ತಿದೆ, ಹಾಗೆಯೇ ಕನ್ನಡಿಗ ಕೆಎಲ್ ರಾಹುಲ್ ಅನ್ನ ಅಥಿಯಾ ಶೆಟ್ಟಿ ಹಂಟಿಕೊಂಡು ನಿಂತಿದ್ದಾರೆ.  ಇವರಿಬ್ಬರ ಮಧ್ಯ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆ ಆದ್ರೆ ಈ ಫೋಟೋ ನೋಡಿದ್ರೆ ಇಬ್ಬರ ಮದ್ಯ ಏನೂ ಇದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

Written by - Channabasava A Kashinakunti | Last Updated : Jul 30, 2021, 04:37 PM IST
  • ಅನುಷ್ಕಾ ಶರ್ಮಾ ಇತ್ತೀಚೆಗೆ ಇಂತಹ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ,
  • ಕೆಎಲ್ ರಾಹುಲ್ ಅನ್ನ ಅಥಿಯಾ ಶೆಟ್ಟಿ ಹಂಟಿಕೊಂಡು ನಿಂತಿದ್ದಾರೆ
  • ಅಥಿಯಾ ಶೆಟ್ಟಿ ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಲವ್ ಬಗ್ಗೆ ತುಂಬಾ ಚರ್ಚೆ
Viral Photo : ಅನುಷ್ಕಾ ಶರ್ಮಾ ಶೇರ್ ಮಾಡಿದ ಫೋಟೋದಲ್ಲಿ ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಮಗಳು!

ನವದೆಹಲಿ : ಬಾಲಿವುಡ್ ನಟಿ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ಇಂತಹ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ, ಅದು ಪೋಸ್ಟ್ ಆದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ, ಅನುಷ್ಕಾ ಮತ್ತು ವಿರಾಟ್ ಜೋಡಿಯು ಅದ್ಭುತವಾಗಿ ಕಾಣುತ್ತಿದೆ, ಹಾಗೆಯೇ ಕನ್ನಡಿಗ ಕೆಎಲ್ ರಾಹುಲ್ ಅನ್ನ ಅಥಿಯಾ ಶೆಟ್ಟಿ ಹಂಟಿಕೊಂಡು ನಿಂತಿದ್ದಾರೆ.  ಇವರಿಬ್ಬರ ಮಧ್ಯ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆ ಆದ್ರೆ ಈ ಫೋಟೋ ನೋಡಿದ್ರೆ ಇಬ್ಬರ ಮದ್ಯ ಏನೂ ಇದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಅನುಷ್ಕಾ ಶರ್ಮಾ ಅವರ ಗುಂಪು ಫೋಟೋ :

ಅನುಷ್ಕಾ ಶರ್ಮಾ(Anushka Sharma) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋವನ್ನ  ಹಂಚಿಕೊಂಡಿದ್ದಾರೆ. ಈ ಈ ಫೋಟೋದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಅನೇಕ ಆಟಗಾರರು ತಮ್ಮ ಹೆಂಡತಿಯರೊಂದಿಗೆ ಕಾಣಿಸಿಕೊಂಡಿದ್ದಾರೆ, ಆದರೆ ಈ ಎಲ್ಲದರ ಮಧ್ಯೆ, ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಮಗಳು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ರಾಜ್ ಕುಂದ್ರಾ ಬಂಧನದ ಬಳಿಕ ಒಂದೊಂದೇ ಪ್ರಾಜೆಕ್ಟ್ ಗಳನ್ನು ಕಳೆದುಕೊಳ್ಳುತ್ತಿರುವ ಶಿಲ್ಪಾಶೆಟ್ಟಿ

ಕೆಎಲ್ ರಾಹುಲ್ ಜೊತೆ ಅಥಿಯಾ : 

ಈ ಫೋಟೋದಲ್ಲಿ ಕಾಣಿಸಿಕೊಂಡ ಆಟಗಾರರು, ಬಿಸಿಸಿಐ ಹಿರಿಯ ನಿರ್ಮಾಪಕ ರಾಜಲ್ ಅರೋರಾ, ಕ್ರಿಕೆಟರ್  ಕೆಎಲ್ ರಾಹುಲ್(KL Rahul), ಬಾಲಿವುಡ್ ನಟಿ ಅಥಿಯಾ ಶೆಟ್ಟಿ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ, ಕ್ರಿಕೆಟಿಗ ಇಶಾಂತ್ ಶರ್ಮಾ, ಅವರ ಪತ್ನಿ ಪ್ರತಿಮಾ, ಕ್ರಿಕೆಟಿಗ ಉಮೇಶ್ ಯಾದವ್ ಮತ್ತು ಅವರ ಪತ್ನಿ ತಾನ್ಯಾ ವಾಧ್ವಾ.

 
 
 
 

 
 
 
 
 
 
 
 
 
 
 

A post shared by AnushkaSharma1588 (@anushkasharma)

ಸಂಬಂಧಕ್ಕೆ ಮುದ್ರೆ ಹಾಕಿಲ್ಲ :

ಅಥಿಯಾ ಶೆಟ್ಟಿ ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಲವ್ ಬಗ್ಗೆ ತುಂಬಾ ಚರ್ಚೆಗೆ ಒಳಗಾಗಿದ್ದಾರೆ. ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಅಥಿಯಾ ಶೆಟ್ಟಿ(Athiya Shetty) ಅಫೇರ್ ಇರುವುದು ಈಗ ನಿಜವಾಗುತ್ತಿದೆ. ಅವರಿಬ್ಬರೂ ಈ ಸಂಬಂಧದ ಬಗ್ಗೆ ಅಧಿಕೃತ ಮುದ್ರೆ ಹಾಕಿಲ್ಲವಾದರೂ, ಅವರು ಸೋಶಿಯಲ್ ಮೀಡಿಯಾ ಮೂಲಕ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಥಿಯಾ ರಾಹುಲ್ ಜೊತೆಗಿನ ಫೋಟೋಗಳನ್ನ ಹಂಚಿಕೊಂಡು ಅವನು ನೆಚ್ಚಿನ ವ್ಯಕ್ತಿ ಎಂದು ಹೇಳಿದರೆ, ರಾಹುಲ್ ಕೂಡ ಅಥಿಯಾ ಫೋಟೋಗಳ ಬಗ್ಗೆ ಆಗಾಗ್ಗೆ ಪ್ರತಿಕ್ರಿಯಿಸುತ್ತಾರೆ.

ಇದನ್ನೂ ಓದಿ : ಜಮೀನು ಖರೀದಿ ವಿಚಾರದಲ್ಲಿ ಶಿಲ್ಪಾ ಶೆಟ್ಟಿ ತಾಯಿಗೂ ಮೋಸ; ಕೋರ್ಟ್ ಮೆಟ್ಟಿಲೇರಿದ ಸುನಂದಾ ಶೆಟ್ಟಿ

ಸುನಿಲ್ ಅವರ ನೆಚ್ಚಿನ ರಾಹುಲ್ :

ಅಥಿಯಾ ಮತ್ತು ರಾಹುಲ್ ಕೆಲವು ಸಮಯದಿಂದ ಇಂಗ್ಲೆಂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಸುನಿಲ್ ಶೆಟ್ಟಿ(Sunil Shetty) ಅವರ ಮಗ ಮತ್ತು ಅಥಿಯ ಸಹೋದರ ಅಹನ್ ಶೆಟ್ಟಿ ಜೊತೆಗಿನ ಕೆಲವು ಫೋಟೋಗಳನ್ನ ರಾಹುಲ್ ಸೋಶಿಯಲ್ಹಂ ಮೀಡಿಯಾದಲ್ಲಿ ಚಿಕೊಂಡಿದ್ದಾರೆ. ಅಂದಿನಿಂದ, ಅವರ ಸಂಬಂಧದ ಸುದ್ದಿಯು ಮುಂಚೂಣಿಗೆ ಬರುತ್ತಿದೆ. ಸುನಿಲ್ ಶೆಟ್ಟಿ ಸಂದರ್ಶನವೊಂದರಲ್ಲಿ ರಾಹುಲ್ ಮತ್ತು ಅಥಿಯಾ ಬಗ್ಗೆ ಹೇಳಿದ್ದರು, ಇಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣುತ್ತಾರೆ. ಅಷ್ಟೇ ಅಲ್ಲ, ಸುನಿಲ್ ಕೂಡ ರಾಹುಲ್ ಅವರನ್ನು ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಕರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News