The Kerala Story Show: ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರ ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಗೆ ಮುನ್ನವೇ ವಿವಾದಗಳಲ್ಲಿ ಸಿಲುಕಿಕೊಂಡಿತ್ತು. ವಿಶ್ವದ ಎಲ್ಲಾ ದೇಶಗಳಲ್ಲಿ ತೆರೆ ದಿ ಕೇರಳ ಸ್ಟೋರಿ ಸಿನಿಮಾ ತೆರೆ ಕಂಡಿದೆ. ಆದರೆ ಹಲವೆಡೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಇತ್ತೀಚಿಗೆ ಮಾರಿಷಸ್‌ನಲ್ಲಿ ನಡೆದ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್ ನಲ್ಲಿ ಜಗತ್ತಿನಾದ್ಯಂತ ಭಯೋತ್ಪಾದಕ ಚಟುವಟಿಕೆಗಳ ನಿಷೇಧಿತ ಸಂಘಟನೆಯಾದ ಐಸಿಸ್ ಇ-ಮೇಲ್ ಮೂಲಕ ಬಾಂಬ್‌ ಬೆದರಿಕೆ ಹಾಕಿದೆ. ಚಿತ್ರ ಪ್ರದರ್ಶನ ನಿಲ್ಲಿಸದಿದ್ದರೆ ಥಿಯೇಟರ್‌ ಸ್ಫೋಟಿಸುತ್ತೇವೆ ಎಂದು ಮೇಲ್‌ನಲ್ಲಿ ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಗಿಣಿ ಹೊಸ ಫೋಟೋಶೂಟ್, ಯಾರವ್ವ ಇವಳು ಚೆಲುವೆ ಚೆಲುವೆ ನನ್ನಾ ಕಣ್ಣೇ ಬಿತ್ತು ಎಂದ ಫ್ಯಾನ್ಸ್!


ಇದೇ ವೇಳೆ ವಿಪುಲ್ ಶಾ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚಿತ್ರದ ಬಗ್ಗೆ ಟೆನ್ಷನ್ ಕೂಡ ಇದೆ ಮತ್ತು ಈ ಕಾರಣದಿಂದಾಗಿ ದಿ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ತೋ ಸೇನ್ ಅವರ ಆರೋಗ್ಯವು ಇತ್ತೀಚೆಗೆ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಅದೇ ಸಮಯದಲ್ಲಿ, ವ್ಯಕ್ತಿಯೊಬ್ಬರು ಕೋಪದಿಂದ ಚಿತ್ರದ ನಟಿ ಅದಾ ಶರ್ಮಾ ಅವರ ವೈಯಕ್ತಿಕ ಸಂಪರ್ಕ ಸಂಖ್ಯೆಯನ್ನು Instagram ನಲ್ಲಿ ಹರಿಬಿಟ್ಟಿದ್ದರು. ಇದಾದ ನಂತರ ಅನೇಕರು ಅದಾ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡರು. ಏತನ್ಮಧ್ಯೆ, ಮಾರಿಷಸ್ ಥಿಯೇಟರ್ ಐಸಿಸ್ ಕಳುಹಿಸಿದ್ದ ಇ-ಮೇಲ್ ಅನ್ನು ವಿಪುಲ್‌ ಶಾಗೆ ರವಾನಿಸಿದೆ. ನಾವು ಈ ಸಿನಿಮಾ ಹಾಲ್‌ಗೆ ಬಾಂಬ್ ಹಾಕಲಿದ್ದೇವೆ ಮತ್ತು ನಾಳೆ ಎಲ್ಲರಿಗೂ ಒಳ್ಳೆಯ ಚಿತ್ರವನ್ನು ತೋರಿಸುತ್ತೇವೆ. ಶುಕ್ರವಾರ ಥಿಯೇಟರ್‌ಗಳಲ್ಲಿ ಕೇರಳ ಸ್ಟೋರಿ ಪ್ಲೇ ಆಗುವಾಗ, MCine ನಲ್ಲಿ ಬಾಂಬ್ ಇರುತ್ತದೆ ಎಂದು ಮೇಲ್‌ ಮಾಡಿದ್ದಾರೆ. 


ಇದನ್ನೂ ಓದಿ: ರಾಘವನ ಹಂಬಲದಲ್ಲಿ ಜಾನಕಿ.. 'ಸೋಲ್ ಆಫ್ ದಿ ಫಿಲ್ಮ್' ಈ ರಾಮ್‌ ಸಿಯಾ ರಾಮ್‌ ಹಾಡು!


ವಾಸ್ತವವಾಗಿ, ದಿ ಕೇರಳ ಸ್ಟೋರಿ ಈಗ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಐಸಿಸ್ ಮುಸ್ಲಿಮೇತರ ಹುಡುಗಿಯರನ್ನು ಹೇಗೆ ತಮ್ಮ ಕಪಿಮುಷ್ಠಿಯಲ್ಲಿ ಸಿಲುಕಿಸಿ ಮತಾಂತರ ಮಾಡುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಂತರ ಅವರನ್ನು ಭಯೋತ್ಪಾದಕರನ್ನಾಗಿ ಬಳಸಿಕೊಳ್ಳುತ್ತದೆ ಅಥವಾ ಲೈಂಗಿಕ ಗುಲಾಮರನ್ನಾಗಿ ಮಾಡುತ್ತದೆ ಎಂಬುದನ್ನು ಹೇಳಲಾಗಿದೆ. ದಿ ಕೇರಳ ಸ್ಟೋರಿಯು ಮೂವರು ಹುಡುಗಿಯರ ಕಥೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕೇರಳದ 32,000 ಹುಡುಗಿಯರು ಐಸಿಸ್ ಸಂಚಿಗೆ ಬಲಿಯಾಗಿದ್ದಾರೆ ಎಂದು ನಿರ್ಮಾಪಕರು ಬಿಡುಗಡೆಗೂ ಮುನ್ನ ಹೇಳಿಕೊಂಡಿದ್ದರು. ಆದರೂ ಅನೇಕರು ನಿರ್ಮಾಪಕರ ಮಾತನ್ನು ಒಪ್ಪದೇ, ಇದು ಪ್ರಚಾರದ ಗಿಮಿಕ್‌ ಎಂದು ಕರೆದರು. 


ಇದನ್ನೂ ಓದಿ:  ಬಟ್ಟೆ ಇಲ್ಲದೆ ಬೆಡ್‌ ಮೇಲೆ ಮಲಗಿರುವ ಅರ್ಜುನ್ ಕಪೂರ್ ಫೋಟೋ ಶೇರ್‌ ಮಾಡಿದ ಮಲೈಕಾ ಅರೋರಾ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.