ಜೇಮ್ಸ್..‌ ಜೇಮ್ಸ್..‌ ಜೇಮ್ಸ್...‌ ಎಲ್ಲೆಲ್ಲೂ ಜೇಮ್ಸ್‌ನದ್ದೇ (James) ಮಾತುಕತೆ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ ಜೇಮ್ಸ್‌ ಮಾರ್ಚ್‌ 17 ರಂದು ಅಪ್ಪು ಹುಟ್ಟುಹಬ್ಬದಂದು ತೆರೆಗೆ ಬಂದಿತು. ಆ ಬಳಿಕ ನಡೆದ ಜೇಮ್ಸ್‌ ಜಾತ್ರೆಗೆ ಇಡೀ ಕರುನಾಡೇ ಸಾಕ್ಷಿಯಾಯಿತು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: BeastvsKGF2: 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ಸಜ್ಜಾದ 'ಬೀಸ್ಟ್'.. ರೇಸ್‌ನಲ್ಲಿ ಗೆಲ್ಲೋರು ಯಾರು?


ಹೌದು, ಅಪ್ಪು ಅಂದ್ರೆ ಅದೊಂದು ಎಮೊಷನ್‌. ಅಪ್ಪು (Appu Fan) ಅಂದ್ರೆ ಅಪ್ಪುಗೆ. ಅವರ ಆ ನಗುವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇನ್ನೂ ಆ ವ್ಯಕ್ತಿತ್ವವನ್ನು ವರ್ಣಿಸಲಂತೂ ಮಾತುಗಳೆ ಸಾಲಲ್ಲ. ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿಯೇ ಬದುಕಿದ ದೊಡ್ಮನೆಯ ಕುಡಿ ಡಾ.ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅಗಲಿಕೆಯ ನೋವು ಜನಮಾನಸದಲ್ಲಿ ಹಾಗೆ ಉಳಿದಿದೆ. ಇದೇ ಕಾರಣಕ್ಕೆ ಅದೆಷ್ಟೋ ಜನ ಜೇಮ್ಸ್‌ ಸಿನಿಮಾವನ್ನು ಒಂದು ಚಿತ್ರವಾಗಿ ನೋಡದೆ ಅಪ್ಪುವಿನ ಹಬ್ಬವನ್ನಾಗಿ ಸೆಲಿಬ್ರೆಟ್‌ ಮಾಡಿದ್ರು.


ಮೊದಲ ದಿನವೇ ಭರ್ಜರಿ ಕಲೆಕ್ಷನ್...‌ ಸಖತ್‌ ರಿಸ್ಪಾನ್ಸ್‌ ಪಡೆದುಕೊಂಡಿತು ಜೇಮ್ಸ್‌ ಚಿತ್ರ. ರಿಲೀಸ್‌ ಆಗಿ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ಕಲೆ ಹಾಕುವ ಮೂಲಕ ಬಾಕ್ಸಾಫೀಸ್‌ನಲ್ಲಿ (Box office) ದಾಖಲೆ ಬರೆಯಿತು. ಮೊದಲ ದಿನದ 32 ಕೋಟಿ ರೂಪಾಯಿ ಕಲೆಕ್ಷನ್, ಸ್ಯಾಟೆಲೈಟ್ ರೈಟ್ಸ್ ಮತ್ತು ಓಟಿಟಿ ರೈಟ್ಸ್.. ಇವೆಲ್ಲವೂ ಸೇರಿ ಜೇಮ್ಸ್ (James) ಸಿನಿಮಾ ಅದಾಗಲೇ 100 ಕೋಟಿ ಕ್ಲಬ್ ಸೇರಿದೆ ಅಂತಲೂ ಅಂದಾಜಿಸಲಾಗುತ್ತಿದೆ.


ಇದನ್ನೂ ಓದಿ: KGF Chapter 2: ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ಕನಸಿನಲ್ಲಿ ನೋಡಿದೆ ಎಂದ ವಿದೇಶಿ ಅಭಿಮಾನಿ..!


ಚೇತನ್ ಕುಮಾರ್ (Chetan Kumar) ನಿರ್ದೇಶನದ ಜೇಮ್ಸ್ ಚಿತ್ರ ಈಗಲೂ ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಜೇಮ್ಸ್ ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಥಿಯೇಟರ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಪುನೀತ್‌ ರಾಜ್‌ಕುಮಾರ್ ಅವರನ್ನ ನೋಡಲು ಕ್ಲಾಸ್ - ಮಾಸ್ ಎಂಬ ಭೇದಭಾವ ಇಲ್ಲದೆ ಅಭಿಮಾನಿಗಳು ಥಿಯೇಟರ್‌ಗಳ ಕಡೆ ಮುಖ ಮಾಡುತ್ತಿದ್ದಾರೆ.  


ಸಿನಿಮಾ ಬಿಡುಗಡೆಯಾಗಿ ಹತ್ತು ದಿನ ಕಳೆದರೂ ಜೇಮ್ಸ್‌ ಹವಾ ಮಾತ್ರ ಕಡಿಮೆಯಾಗಿಲ್ಲ. ಹೀಗೆ ಅಪ್ಪು ಅಭಿನಯದ ಈ ಸಿನಿಮಾ ನೂರು ದಿನ ಭರ್ಜರಿ ಪ್ರದರ್ಶನ ಕಾಣಲಿ ಎಂಬುದೇ ಎಲ್ಲರ ಆಶಯ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.