BeastvsKGF2: 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ಸಜ್ಜಾದ 'ಬೀಸ್ಟ್'.. ರೇಸ್‌ನಲ್ಲಿ ಗೆಲ್ಲೋರು ಯಾರು?

BeastvsKGF2: ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಚಿತ್ರ ರಿಲೀಸ್ ಆಗುತ್ತಿದೆ. 'ಕೆಜಿಎಫ್ 2' ಜೊತೆಗೆ ಬಾಕ್ಸಾಫೀಸ್ ಕಾಳಗ ಮಾಡಲು ತಮಿಳಿನ ದೊಡ್ಡ ಚಿತ್ರವೇ ಬರುತ್ತಿದೆ. ಆದರೆ ಈ ಎರಡು ಚಿತ್ರಗಳ ಪೈಕಿ ಹೆಚ್ಚು ಮಂದಿ ನೋಡಲಿಚ್ಛಿಸಿರುವ ಸಿನಿಮಾ ಯಾವುದು? ಇಲ್ಲಿದೆ ಉತ್ತರ. 

Written by - Chetana Devarmani | Last Updated : Mar 27, 2022, 02:25 PM IST
  • ಏಪ್ರಿಲ್ 13ಕ್ಕೆ 'ಬೀಸ್ಟ್', ಏಪ್ರಿಲ್ 14ಕ್ಕೆ 'ಕೆಜಿಎಫ್ 2'!
  • 'ಕೆಜಿಎಫ್ 2' ಜೊತೆಗೆ ಬಾಕ್ಸಾಫೀಸ್ ಕಾಳಗ
  • ಬಾಕ್ಸಾಫೀಸ್‌ ಕೊಳ್ಳೆ ಹೊಡೆಯಲು 'ಕೆಜಿಎಫ್ 2' ಸಜ್ಜು
  • 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ಸಜ್ಜಾದ 'ಬೀಸ್ಟ್'
BeastvsKGF2: 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ಸಜ್ಜಾದ 'ಬೀಸ್ಟ್'.. ರೇಸ್‌ನಲ್ಲಿ ಗೆಲ್ಲೋರು ಯಾರು?  title=
ಕೆಜಿಎಫ್ 2

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' (KGF2) ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಇದರ ಜೊತೆಗೆ ಬಾಕ್ಸಾಫೀಸ್ (Boxoffixe) ಕಾಳಗ ಮಾಡಲು ಯಾವ ಸಿನಿಮಾಗಳು ಧೈರ್ಯ ತೋರುತ್ತಿಲ್ಲ ಎಂಬ ಮಾತುಗಳ ನಡುವೆ 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು ತಮಿಳಿನ ಸ್ಟಾರ್ ನಟ ವಿಜಯ್ ಸಿನಿಮಾ ಸಜ್ಜಾಗಿದೆ.  

ಇದನ್ನೂ ಓದಿ:James: ‘ಜೇಮ್ಸ್’ ಸಿನಿಮಾ ಸರಿಯಿಲ್ಲ ಎಂದವನಿಗೆ ಚಳಿ ಬಿಡಿಸಿದ ‘ಅಪ್ಪು’ ಫ್ಯಾನ್ಸ್!

ಇತ್ತ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯಲು 'ಕೆಜಿಎಫ್ 2' ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ಅತ್ತ ತಮಿಳಿನ ಬಹು ನಿರೀಕ್ಷಿತ ಸಿನಿಮಾ 'ಬೀಸ್ಟ್' (beast) ಕೂಡ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಏಪ್ರಿಲ್‌ನಲ್ಲಿಯೇ ಕೇವಲ ಒಂದು ದಿನದ ಹಿಂದೆ ಮುಂದೆ ರಿಲೀಸ್ ಆಗಲಿವೆ.

'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನ ಮೊದಲು ಅಂದರೆ ಏಪ್ರಿಲ್ 13ಕ್ಕೆ 'ಬೀಸ್ಟ್' ರಿಲೀಸ್ ಆಗುತ್ತಿದೆ. ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಪಕ್ಕಾ ಎನ್ನಲಾಗುತ್ತಿದೆ.

ಕೆಜಿಎಫ್ 2 ಮತ್ತು ಬೀಸ್ಟ್ (Beast vs KGF2) ಎರಡು ಚಿತ್ರಗಳ ಮೇಲೆಯೂ ಸಾಕಷ್ಟು ನಿರೀಕ್ಷೆ ಇದೆ. 'ಬೀಸ್ಟ್' ಸಿನಿಮಾವನ್ನು ಏಪ್ರಿಲ್ 13ಕ್ಕೆ ರಿಲೀಸ್ ಆಗುತ್ತಿದ್ದು,  ಏಪ್ರಿಲ್ 14ರಂದು 'ಕೆಜಿಎಫ್ 2' ಚಿತ್ರ ರಿಲೀಸ್‌ ಆಗುತ್ತಿದೆ. ಈ ಚಿತ್ರಗಳಲ್ಲಿ ಯಾವ ಸಿನಿಮಾ ಹೆಚ್ಚು ಸದ್ದು ಮಾಡಲಿದೆ ಎನ್ನುವ ಚರ್ಚೆ ಜೋರಾಗಿದೆ. ಅದಕ್ಕೆ ಪೂರಕ ಎಂಬಂತೆ 'ಬೀಸ್ಟ್' ಚಿತ್ರಕ್ಕಿಂತಲೂ 'ಕೆಜಿಎಫ್ 2' ಚಿತ್ರವನ್ನು ನೋಡಲು ಜನ ಹೆಚ್ಚು ಆಸಕ್ತರಾಗಿದ್ದಾರೆ ಎಂದು ವರದಿಯೊಂದು ಬಂದಿದೆ.

ಇದನ್ನೂ ಓದಿ:KGF Chapter 2: ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ಕನಸಿನಲ್ಲಿ ನೋಡಿದೆ ಎಂದ ವಿದೇಶಿ ಅಭಿಮಾನಿ..!

ಒಟ್ಟಿನಲ್ಲಿ 'ಕೆಜಿಎಫ್ 2' ಚಿತ್ರಕ್ಕೆ ಸವಾಲೆಸೆಯಲು 'ಬೀಸ್ಟ್' ಸಜ್ಜಾಗಿದೆ. 'ಕೆಜಿಎಫ್ 2' ಜೊತೆಗೆ 'ಬೀಸ್ಟ್' ಬಾಕ್ಸಾಫೀಸ್ ಕಾಳಗ ಹೇಗಿರಲಿದೆ ಎಂಬುದನ್ನು ಕಾದು ನೋಡಲೇ ಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News