KGF Chapter 2: ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ಕನಸಿನಲ್ಲಿ ನೋಡಿದೆ ಎಂದ ವಿದೇಶಿ ಅಭಿಮಾನಿ..!

ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ.ಅಭಿಮಾನಿಗಳು ಮಾತ್ರ ಕೆಜಿಎಫ್ 2 (KGF Chapter 2) ಅಧಿಕೃತ ಟ್ರೇಲರ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Written by - Zee Kannada News Desk | Last Updated : Mar 26, 2022, 11:48 PM IST
  • ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ.ಅಭಿಮಾನಿಗಳು ಮಾತ್ರ ಕೆಜಿಎಫ್ 2 (KGF Chapter 2) ಅಧಿಕೃತ ಟ್ರೇಲರ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
  KGF Chapter 2: ಯಶ್ ಅಭಿನಯದ ಕೆಜಿಎಫ್ 2 ಚಿತ್ರವನ್ನು ಕನಸಿನಲ್ಲಿ ನೋಡಿದೆ ಎಂದ ವಿದೇಶಿ ಅಭಿಮಾನಿ..! title=

ಮುಂಬೈ: ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ.ಅಭಿಮಾನಿಗಳು ಮಾತ್ರ ಕೆಜಿಎಫ್ 2 (KGF Chapter 2) ಅಧಿಕೃತ ಟ್ರೇಲರ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೊಂದೆಡೆಗೆ ಈಗಾಗಲೇ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ.ಈ ಚಿತ್ರದ ಬಗೆಗಿನ ಹವಾ ಯಾವ ರೇಂಜಿಗೆ ಇದೆ ಎಂದರೆ ಅನೇಕ ಅಭಿಮಾನಿಗಳು ಕೆಜಿಎಫ್ ಅಧ್ಯಾಯ 1 ರ ಹ್ಯಾಂಗೊವರ್‌ನಿಂದ  ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ಏಪ್ರಿಲ್ 14 ರಂದು ಮುಂದಿನ ಭಾಗವನ್ನು ವೀಕ್ಷಿಸಿದ ನಂತರ, ತಮ್ಮ ಉತ್ಸಾಹವನ್ನು ತಣಿಸಿಕೊಳ್ಳಲು ಸಾಧ್ಯವಾಗಬಹುದು.

KGF Chapter 2: ಯಶ್ ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್, ಬಾಕ್ಸ್ ಆಫೀಸ್ ಶೇಕ್ ಮಾಡಲು ‘ರಾಕಿ ಬಾಯ್’ ಸಜ್ಜು!

ಈಗಾಗಲೇ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋ ಸಾಂಗ್ ಗೆ ದೇಶಿಯ ಹಾಗೂ ಅಂತರಾಷ್ಟ್ರೀಯ ಯುಟೂಬ್ ರ್ಸ್ಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.ಕಳೆದ ವರ್ಷ, ಲಂಡನ್ ಮೂಲದ ಅಭಿಮಾನಿಯೊಬ್ಬರು ಕೆಜಿಎಫ್ (KGF 2) ಹಾಗೂ ಯಶ್ ಕುರಿತಾದ ರ್ಯಾಪ್ ಸಾಂಗ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಗಮನ ಸೆಳೆದಿದ್ದರು.

Toofan Lyrical Video: 'ಕೆಜಿಎಫ್​​ 2' ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

ಮಾರ್ಚ್ 22 ರಂದು, ಪಾಲ್ ಅವರು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ, " ನಾನು ಎಷ್ಟು ಬಾರಿ ಭಾರತದಲ್ಲಿದ್ದೇನೆ ಎನ್ನುವುದರ ಲೆಕ್ಕವನ್ನೇ ಮರೆತುಬಿಟ್ಟಿದ್ದೇನೆ, ಇಂದು ನಾನು #KGF2onApr14 ವೀಕ್ಷಿಸಲು ಭಾರತಕ್ಕೆ ತೆರಳಿ ಅಲ್ಲಿ ವ್ಲಾಗ್ ಮಾಡುತ್ತಿದ್ದರ ಕನಸು ಕಂಡೆ ಎಂದು ಅವರು ಬರೆದುಕೊಂಡಿದ್ದಾರೆ.ಈಗ ಈ ಟ್ವೀಟ್ ವೈರಲ್ ಆಗಿದ್ದು, ಕೆಲವು ಅಭಿಮಾನಿಗಳು  "ಕಮ್ ಟು ಇಂಡಿಯಾ ಮ್ಯಾನ್..ನೀವು #KGFCchapter2 ಮತ್ತು #YashBOSS𓃵 ನ ಸಾಮೂಹಿಕ ಸಂಭ್ರಮಕ್ಕೆ ಸಾಕ್ಷಿಯಾಗುತ್ತೀರಿ" ಎಂದು ಪ್ರತಿಕ್ರಿಯಿಸಿದ್ದಾರೆ.ಮತ್ತೊಬ್ಬ ಬಳಕೆದಾರ, "ಸ್ವಾಗತ ಸಹೋದರ..ಇದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ...ಎಂದು ಹೇಳಿದ್ದಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News